ಕಲ್ಲಪ್ಪ ಹಂಡಿಭಾಗ ಪತ್ನಿ ಬಗ್ಗೆ ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ

Posted By:
Subscribe to Oneindia Kannada

ಬೆಳಗಾವಿ, ಏಪ್ರಿಲ್ 09: ತಮ್ಮ ರಾಜಕೀಯ ತುತ್ತೂರಿ ಊದಿಕೊಳ್ಳುವ ಭರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಮೃತ ಪೊಲೀಸ್ ಅಧಿಕಾರಿ ಕಲ್ಲಪ್ಪ ಹಂಡಿಭಾಗ ಅವರ ಮಡದಿಗೆ ಅವಮಾನವಾಗುವಂತೆ ಮಾತನಾಡಿದ್ದಾರೆ.

   ಕುಡಿಯೋಕೆ ನೀರು ಕೊಡದ ಕಾಂಗ್ರೆಸ್ಸಿಗೆ ಧಿಕ್ಕಾರ: ಎಚ್ಡಿಕೆ | Oneindia Kannada

   ಬೆಳಗಾವಿಯಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ 'ನಾನು ಸಹಾಯ ಮಾಡದೇ ಇದ್ದಿದ್ದರೆ ಕಲ್ಲಪ್ಪ ಹಂಡಿಭಾಗ ಅವರ ಪತ್ನಿ 'ವೇಶ್ಯಾವೃತ್ತಿಗೆ ಇಳಿಯಬೇಕಿತ್ತು' ಎನ್ನುವ ಮೂಲಕ ಮಹಿಳೆಯ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ.

   ರಾಮನಗರದಲ್ಲಿ ಕುಮಾರಸ್ವಾಮಿ ವಿರುದ್ಧ ತೇಜಸ್ವಿನಿ ಸ್ಪರ್ಧೆ?

   ಸಿದ್ದರಾಮಯ್ಯ ಅಹಿಂದ ದ್ವೇಷಿ ಎಂದು ನಿರೂಪಿಸಲು ಕಲ್ಲಪ್ಪ ಹಂಡಿಭಾಗ ಅವರ ವಿಷಯ ತೆಗೆದ ಕುಮಾರಸ್ವಾಮಿ ಅವರು, ಕಲ್ಲಪ್ಪ ಕೂಡಾ ಸಿದ್ದರಾಮಯ್ಯ ಅವರ ಜಾತಿಯವರೇ ಆದರೆ ಸಿದ್ದರಾಮಯ್ಯ ಸರ್ಕಾರವೇ ಕಲ್ಲಪ್ಪ ಹಂಡಿಭಾಗ ಅವರಿಗೆ ಕಿರುಕುಳ ನೀಡಿತು, ಕಾಂಗ್ರೆಸ್ ಮತ್ತು ಬಿಜೆಪಿ ಸೇರಿ ಅವರ ಮೇಲೆ ಅಪಹರಣದ ಆರೋಪ ಹೊರಿಸಿತು' ಎಂದು ಕಲ್ಲಪ್ಪ ಹಂಡಿಭಾಗ ಅವರ ಬಗ್ಗೆ ಮಾತು ಪ್ರಾರಂಭಿಸಿದರು.

   Kumaraswamy loose talks about Kallappa Handibhag wife

   ಕಲ್ಲಪ್ಪ ಹಂಡಿಭಾಗ ಅವರ ಬಗ್ಗೆ ಏಕವಚನದಲ್ಲಿಯೇ ಮಾತನಾಡಿದ ಕುಮಾರಸ್ವಾಮಿ ಅವರು 'ಕಲ್ಲಪ್ಪ ಹಂಡಿಭಾಗ ನೇಣಿಗೆ ಶರಣಾದ ನಂತರ ನಾನು ವಿಧಾನಸಭೆಯಲ್ಲಿ ಆ ಬಗ್ಗೆ ಮಾತನಾಡಿ ಆತನ 20 ವರ್ಷ ವಯಸ್ಸಿನ ಮಡದಿಗೆ ಸಬ್‌ರಿಜಿಸ್ಟಾರ್ ಕಚೇರಿಯಲ್ಲಿ ಕೆಲಸ ಕೊಡಿಸಿಕೊಟ್ಟೆ, ನಾನು ಸಹಾಯ ಮಾಡದೇ ಇದ್ದಿದ್ದರೆ ಆ ಹೆಣ್ಣು ಮಗಳು ಕುಟುಂಬ ಭಿಕ್ಷೆ ಬೇಡಬೇಕಿತ್ತು ಅಥವಾ ಮೈ ಮಾರಿ ಬದುಕಬೇಕಿತ್ತು' ಎಂದು ಹೀನವಾಗಿ ಕುಮಾರಸ್ವಾಮಿ ಅವರು ಮಾತನಾಡಿದರು.

   ಕಲ್ಲಪ್ಪ ಹಂಡಿಭಾಗ ಪತ್ನಿ ಬಗ್ಗೆ ಹೇಳಿಕೆ: ಕ್ಷಮೆ ಯಾಚಿಸಿದ ಕುಮಾರಸ್ವಾಮಿ

   ಕುಮಾರಸ್ವಾಮಿ ಅವರು ಹೀಗೆ 'ಸೆಲೆಕ್ಟಿವ್ ಸಹಾಯ' ಮಾಡಿದ್ದು ಬಹಳಷ್ಟು, ಅವನ್ನು ಅಷ್ಟೆ ನಾಜೂಕಾಗಿ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸಿ ಮೈಲೇಜ್ ಗಿಟ್ಟಿಸಿಕೊಳ್ಳುವ ಕಲೆಯೂ ಅವರಿಗೆ ಕರಗತ, ಆದರೆ ಇಂದು ಮಾತಿನ ಭರದಲ್ಲಿ ತಮ್ಮ ರಾಜಕೀಯ ತುತ್ತೂರಿ ಊದಿಕೊಳ್ಳಲು ಹೋಗಿ ಒಬ್ಬ ಮಹಿಳೆಯ ಬಗ್ಗೆ ಕೀಳಾಗಿ ಮಾತನಾಡಿಬಿಟ್ಟಿದ್ದಾರೆ.

   ಹಂದಿಗುಂದಿ ಗ್ರಾಮದ ಪ್ರಾಮಾಣಿಕ ಅಧಿಕಾರಿ ಕಲ್ಲಪ್ಪ

   ಕುಮಾರಸ್ವಾಮಿ ಅವರು ಕಲ್ಲಪ್ಪ ಹಂಡಿಭಾಗ ಅವರ ಮಡದಿಯ ಬಗ್ಗೆ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕುಮಾರಸ್ವಾಮಿ ಅವರ ಬೇಜವಾಬ್ದಾರಿಯುತ ಮಾತಿಗೆ ಆಕ್ರೋಶ ವ್ಯಕ್ತವಾಗಿದೆ. ಕುಮಾರಸ್ವಾಮಿ ಅವರು ಕಲ್ಲಪ್ಪ ಹಂಡಿಭಾಗ ಅವರ ಪತ್ನಿಯ ಕ್ಷಮಾಪಣೆ ಕೇಳಬೇಕು ಎಂದೂ ಒತ್ತಾಯಗಳು ವ್ಯಕ್ತವಾಗುತ್ತಿವೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   JDS president Kumaraswamy made controversial statement about Kallappa Handibhag wife in Belgavi today. He said 'if i not helped Kallappa Handibhag's wife she will become prostitute'.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ