Get Updates
Get notified of breaking news, exclusive insights, and must-see stories!

ಬಿ.ನಾಗೇಂದ್ರ ಕಾಂಗ್ರೆಸ್‌ಗೆ, ಶ್ರೀರಾಮುಲು ಹೇಳಿದ್ದೇನು?

ಬಳ್ಳಾರಿ, ಜನವರಿ 02 : 'ಕೂಡ್ಲಗಿ ಶಾಸಕ ಬಿ.ನಾಗೇಂದ್ರ ನನ್ನ ಸಹೋದರ ಇದ್ದಂತೆ ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರುವುದಿಲ್ಲ ಎಂಬ ವಿಶ್ವಾಸವಿದೆ. ಅವರ ಮನವೊಲಿಸುವ ಪ್ರಯತ್ನ ಮಾಡುವೆ' ಎಂದು ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಹೇಳಿದ್ದಾರೆ.

ಬಳ್ಳಾರಿಯಲ್ಲಿ ಸೋಮವಾರ ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಬಿ.ನಾಗೇಂದ್ರ ಅವರು ನಮ್ಮೊಂದಿಗೆ ಇದ್ದರೂ ಅವರು ಆಯ್ಕೆಯಾಗಿರುವುದು ಪಕ್ಷೇತರ ಶಾಸಕರಾಗಿ' ಎಂದರು.

'ನಾಗೇಂದ್ರ ಬೇರೆ ಪಕ್ಷ ಸೇರುತ್ತಾರೆ ಎಂಬ ಮಾಹಿತಿ ಸಿಕ್ಕಿದೆ. ಆದರೆ, ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ರಾಜಕಾರಣದಲ್ಲಿ ಈ ರೀತಿ ಆಗುತ್ತಿರುತ್ತದೆ. ಅವರ ಜೊತೆ ಮಾತನಾಡಿ ಮನವೊಲಿಸುವ ಕೆಲಸವನ್ನು ಮಾಡುವೆ' ಎಂದು ಶ್ರೀರಾಮುಲು ಹೇಳಿದರು.

Kudligi MLA B Nagendra will not join Congress says Sriramulu

'ಅವರು ಕಾಂಗ್ರೆಸ್ ಸೇರುವುದಿಲ್ಲ ಎಂಬ ವಿಶ್ವಾಸವಿದೆ. ಒಂದು ವೇಳೆ ಹೋದರೆ ರಾಜಕೀಯದಲ್ಲಿ ಇದೆಲ್ಲ ಅನಿವಾರ್ಯ ಎಂದು, ಧೈರ್ಯದಿಂದ ಚುನಾವಣೆ ಎದುರಿಸುತ್ತೇವೆ' ಎಂದು ತಿಳಿಸಿದರು.

'ಇಂದಿನ ರಾಜಕಾರಣ ವ್ಯಕ್ತಿ ಕೇಂದ್ರಿತ ವಲ್ಲ, ಪಕ್ಷ ಕೇಂದ್ರಿತವಾಗಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ 9 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಜನವರಿ 4ರಂದು ಕೂಡ್ಲಗಿಯಲ್ಲಿ ಪಕ್ಷದ ಪರಿವರ್ತನಾ ಯಾತ್ರೆ ನಡೆಯಲಿದೆ. ಅಂದು ಅಲ್ಲಿನ ಕಾರ್ಯಕರ್ತರ ಅಭಿಪ್ರಾಯವನ್ನು ಸಂಗ್ರಹಣೆ ಮಾಡುತ್ತೇವೆ' ಎಂದು ಶ್ರೀರಾಮುಲು ಹೇಳಿದರು.

2013ರ ಚುನಾವಣೆಯಲ್ಲಿ ಕೂಡ್ಲಗಿ ಕ್ಷೇತ್ರದಲ್ಲಿ ಬಿ.ನಾಗೇಂದ್ರ ಅವರು 71,477 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್‌ನ ಎಸ್.ವೆಂಕಟೇಶ 46,674 ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಾಮಪ್ಪ ಕೇವಲ 2,632 ಮತ ಪಡೆದಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+