Breaking; ಕೂಡ್ಲಗಿ ಮಾಜಿ ಶಾಸಕ ಎನ್‌. ಟಿ. ಬೊಮ್ಮಣ್ಣ ವಿಧಿವಶ

ಬೆಂಗಳೂರು, ಅಕ್ಟೋಬರ್ 12; ವಿಜಯನಗರ ಜಿಲ್ಲೆಯ ಕೂಡ್ಲಗಿ ಕ್ಷೇತ್ರದ ಮಾಜಿ ಶಾಸಕ ಎನ್‌. ಟಿ. ಬೊಮ್ಮಣ್ಣ ವಿಧಿವಶರಾದರು. ಎರಡು ಬಾರಿ ಶಾಸಕರಾಗಿ ಅವರು ಆಯ್ಕೆಯಾಗಿದ್ದರು.

79 ವರ್ಷದ ಎನ್‌. ಟಿ. ಬೊಮ್ಮಣ್ಣ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಎನ್‌. ಟಿ. ಬೊಮ್ಮಣ್ಣ ಎರಡು ಬಾರಿ ಕೂಡ್ಲಗಿ ಕ್ಷೇತ್ರದಿಂದ ಕಣಕ್ಕಿಳಿದು, ಗೆಲುವು ಸಾಧಿಸಿದ್ದರು. 2018ರ ಚುನಾವಣೆಯಲ್ಲಿ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು, 39,272 ಮತಗಳನ್ನು ಪಡೆದು ಸೋಲು ಕಂಡಿದ್ದರು.

Kudligi Former MLA NT Bommanna No More

ಎನ್. ಟಿ. ಬೊಮ್ಮಣ್ಣ ಅನುಭವಿ ರಾಜಕಾರಣಿ. ಕೂಡ್ಲಿಗಿ ಕ್ಷೇತ್ರದ 'ಹಳೆಯ ಹುಲಿ' ಎಂದೇ ಖ್ಯಾತರಾಗಿದ್ದರು. ಜನಸೇವೆ, ಶಿಕ್ಷಣ ಸಂಸ್ಥೆಗಳು, ಜನಪರ ಹೋರಾಟಗಳ ಮೂಲಕ ಚಿರಪರಿಚಿತರಾಗಿದ್ದ ಎನ್. ಟಿ. ಬೊಮ್ಮಣ್ಣ, ರಾಜಕೀಯದಲ್ಲಿ ಹಲವು ಏಳುಬೀಳುಗಳನ್ನು ಕಂಡವರು.

5ನೇ ತರಗತಿ ಓದಿದ್ದ ಎನ್‌. ಟಿ. ಬೊಮ್ಮಣ್ಣ ಎನ್‌ಟಿ ಸಮುದಾಯಕ್ಕೆ ಸೇರಿದವರು. ಮೇಲ್ಜಾತಿಯವರ ಪ್ರಾಬಲ್ಯದ ನಡುವೆ ಕ್ಷೇತ್ರದ ದೊಡ್ಡ ನಾಯಕರಾಗಿ ಹೊರಹೊಮ್ಮಿದರು. 1978ರಲ್ಲಿ ಎನ್. ಟಿ. ಬೊಮ್ಮಣ್ಣ ಸಹೋದರ ತಾಲೂಕು ಬೋರ್ಡ್ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದರು. ಆಗ ಆ ಅವಕಾಸ ಬೊಮ್ಮಣ್ಣಗೆ ಸಿಕ್ಕಿತು.

ತಾಲೂಕು ಬೋರ್ಡ್‌ ಚುನಾವಣೆಯಲ್ಲಿ ಗೆದ್ದ ಬೊಮ್ಮಣ್ಣ ಬಳಿಕ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಈಗ ಇತಿಹಾಸ. 1983ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ 402 ಮತಗಳ ಆಂತರದಿಂದ ಸೋಲುಕಂಡರು.

1985ರ ಚುನಾವಣೆಯಲ್ಲಿ ಎನ್. ಟಿ. ಬೊಮ್ಮಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಮತ್ತೆ ಎನ್. ಟಿ. ಬೊಮ್ಮಣ್ಣ ಹೆಸರು ಕೇಳಿ ಬಂದಿತ್ತು. ಆದರೆ ಟಿಕೆಟ್ ಸಿಕ್ಕಿರಲಿಲ್ಲ.

ಎನ್. ಟಿ. ಬೊಮ್ಮಣ್ಣ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

ಆಗ ಎನ್‌. ಟಿ. ಬೊಮ್ಮಣ್ಣ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದರು. ಆದರೆ ಚುನಾವಣೆಯಲ್ಲಿ ಸೋಲು ಕಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+