ಮಾಜಿ ಸಚಿವ ಪಾಸ್; ಹಾಲಿ ಸಚಿವೆ ಫೇಲ್

ಅಂದಹಾಗೆ ಇವರಿಬ್ಬರೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪಿಎಚ್. ಡಿ ಪ್ರವೇಶ ಪರೀಕ್ಷೆ ಬರೆದಿದ್ದರು. ಅದರ ಫಲಿತಾಂಶ ನಿನ್ನೆ ಹೊರಬಿದ್ದಿದೆ. ರಾಜ್ಯಶಾಸ್ತ್ರ ಸ್ನಾತಕೋತ್ತರ ಪದವೀಧರರಾದ ಇವರಿಬ್ಬರೂ ಹೆಚ್ಚಿನ ವ್ಯಾಸಂಗ ಮಾಡಿ, ಪಿಎಚ್. ಡಿ ಪಡೆಯುವ ಗುರಿ ಹೊಂದಿದ್ದಾರೆ. ಆದರೆ ಈ ಪ್ರಯತ್ನದಲ್ಲಿ ಬಿಜೆಪಿಯ ವಕ್ತಾರ ರವಿ ಯಶಸ್ಸು ಕಂಡಿದ್ದರೆ ಕಾಂಗ್ರೆಸ್ ಸಂಸ್ಕೃತಿ ಸಚಿವೆ ಉಮಾಶ್ರೀ ಅವರ ಆಸೆಗೆ ತಣ್ಣೀರೆರಚಿದಂತಾಗಿದೆ.
ರಾಜ್ಯಶಾಸ್ತ್ರ ವಿಷಯದಲ್ಲಿ ಸಂಶೋಧನೆ ಕೈಗೊಳ್ಳಲು 22 ಮಂದಿಗೆ ಅವಕಾಶವಿದ್ದು, ರವಿ ಮತ್ತು ಉಮಾಶ್ರೀ ಸೇರಿದಂತೆ ಒಟ್ಟು 95 ಮಂದಿ ಆಕಾಂಕ್ಷಿಗಳು ಪರೀಕ್ಷೆ ಬರೆದಿದ್ದರು. ಪಿಎಚ್. ಡಿ ಪ್ರವೇಶಕ್ಕೆ ಅರ್ಹತೆ ಪಡೆಯಲು ಸಾಮಾನ್ಯ, ಒಬಿಸಿ ಮತ್ತು ವಿದೇಶಿ ವಿದ್ಯಾರ್ಥಿಗಳು ಶೇ. 55 - ಎಸ್ ಸಿ/ಎಸ್ ಟಿ ವಿದ್ಯಾರ್ಥಿಗಳು ಕನಿಷ್ಠ ಶೇ. 50 ಅಂಕ ಪಡೆಯುವುದು ಕಡ್ಡಾಯ.
ಆದರೆ ಹಿರಿಯ ಚಿತ್ರನಟಿ ಉಮಾಶ್ರೀ ಅವರು ಶೇ. 43ರಷ್ಟು ರಷ್ಟು ಮಾತ್ರವೇ ಅಂಕ ಪಡೆದು ಫೇಲ್ ಆಗಿದ್ದಾರೆ. ಅದೇ ರವಿ ಶೇ. 56ರಷ್ಟು ಜಸ್ಟ್ ತೇರ್ಗಡೆಯಾಗಿದ್ದಾರೆ.
ಮುಂದಿನ ವಾರವೇ ಮೌಕಿಕ ಪರೀಕ್ಷೆ ನಡೆಯಲಿದೆ. ಚಿಕ್ಕಮಗಳೂರಿನ ಬಿಜೆಪಿ ಶಾಸಕ ರವಿ ಅದರಲ್ಲೂ ಉತ್ತೀರ್ಣರಾಗಿ Ph. D ಪ್ರವೇಶಕ್ಕೆ ಅರ್ಹತೆ ಪಡೆಯುತ್ತಾರಾ? ಮುಂದೆ ಡಾ. ಸಿಟಿ ರವಿ ಆಗುತ್ತಾರಾ... ಕಾದುನೋಡಬೇಕು.












Click it and Unblock the Notifications