ಕೆಎಸ್‌ಟಿಡಿಸಿಯಿಂದ 'ಪುನೀತ ಯಾತ್ರೆ' ಪ್ಯಾಕೇಜ್ ಘೋಷಣೆ

ಬೆಂಗಳೂರು, ನವೆಂಬರ್ 29 : ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಜನರು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಲು ಅನುಕೂಲವಾಗುವಂತೆ 'ಪುನೀತ ಯಾತ್ರೆ' ಎಂಬ ರಿಯಾಯಿತಿ ದರದ ಪ್ಯಾಕೇಜ್ ಘೋಷಣೆ ಮಾಡಿದೆ.

ಈ ಪ್ರವಾಸಗಳನ್ನು ನಿಗಮದ ಇಲ್ಲವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಯಿಂದ ಪಡೆದ ಸುಸಜ್ಜಿತ ಎಸಿ ಬಸ್ಸುಗಳಲ್ಲಿ ಆಯೋಜಿಸಲಾಗುತ್ತದೆ. ಶೇ 25ರ ರಿಯಾಯಿತಿ ದರದಲ್ಲಿ ಈ ಯಾತ್ರೆಗಳನ್ನು ಆಯೋಜನೆ ಮಾಡಲಾಗಿದೆ.

KSTDC announces puneeta yatra packages

ಈ ಪ್ಯಾಕೇಜ್‌ನಲ್ಲಿ ರಾಜ್ಯದ ಹಾಗೂ ಹೊರರಾಜ್ಯದ ಪವಿತ್ರವಾದ ದೇವಸ್ಥಾನಗಳು, ಚರ್ಚ್, ಮಸೀದಿ ಇತ್ಯಾದಿಗಳನ್ನು ವೀಕ್ಷಿಸಬಹುದಾಗಿದೆ. ಅಲ್ಲದೇ ಈ ಸ್ಥಳಗಳ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯನ್ನು ಪರಿಚಯ ಮಾಡಿಕೊಳ್ಳಬಹುದು.

ಸ್ಥಳಗಳು : ತಿರುಪತಿ ಬಾಲಾಜಿ ದರ್ಶನ, ಕಾಳಹಸ್ತಿ, ಶಿರಡಿ ಸಾಯಿಬಾಬಾ, ಬೇಲೂರು-ಹಳೇಬೀಡು-ಶ್ರವಣಬೆಳಗೊಳ, ಕುಂದಾದ್ರಿ ಬೆಟ್ಟ, ಮಂತ್ರಾಲಯ, ಹಂಪಿ, ಮಲೆಮಹದೇಶ್ವರ, ನಂಜನಗೂಡು, ಎಡೆಯೂರು, ಆದಿಚುಂಚನಗಿರಿ, ಸಿಗಂಧೂರ.

ಗೋಕರ್ಣ, ಪಂಚ ಜ್ಯೋತಿರ್ಲಿಂಗಗಳ ದರ್ಶನ, ಅಜಂತಾ, ಎಲ್ಲೋರ, ಔರಂಗಾಬಾದ್, ಬಾಬಾಬುಡನಗಿರಿ, ಕೂಡಲಸಂಗಮ, ಬಸವನಬಾಗೇವಾಡಿ, ಬಸವಕಲ್ಯಾಣ, ಗಾಣಗಾಪುರ, ಸನ್ನತಿ ಸೌದತ್ತಿ-ಎಲ್ಲಮ್ಮ, ಕೊಲ್ಲಾಪುರ-ಲಕ್ಷ್ಮಿ ದರ್ಶನ, ಅಯ್ಯಪ್ಪಸ್ವಾಮಿ ದರ್ಶನ, ಮಧುರೈ ಮೀನಾಕ್ಷಿ ದರ್ಶನ, ಗುರುವಾಯೂರು, ಫಳನಿ ಮುಂತಾದ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿದೆ.

ಶೇ.25 ರಷ್ಟು ರಿಯಾಯಿತಿ ದರದಲ್ಲಿ ಈ ಪ್ಯಾಕೇಜ್‌ಗಳನ್ನು ಘೋಷಣೆ ಮಾಡಲಾಗಿದೆ. ಪ್ರವಾಸಿಗರು ಈ ಮೇಲಿನ ಸ್ಥಳಗಳಿಗೆ ಪ್ರವಾಸಗಳನ್ನು ಕೈಗೊಂಡು ಪ್ಯಾಕೇಜ್ ಸದುಪಯೋಗ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಕೆಎಸ್‌ಟಿಡಿಸಿ ವೆಬ್‌ ಸೈಟ್‌ಗೆ ಭೇಟಿ ನೀಡಬಹುದಾಗಿದೆ.

ಕಲಬುರಗಿಯಿಂದಲೂ ಯಾತ್ರೆ : ಪ್ರವಾಸೋದ್ಯಮ ಇಲಾಖೆ, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪುನೀತ ಯಾತ್ರೆ ಪ್ಯಾಕೇಜ್ ಟೂರ್ ಅನ್ನು ವಿವಿಧ ಜಿಲ್ಲೆಗಳಿಂದಲೂ ನಡೆಸಲಿದೆ.

ಕಲಬುರಗಿಯಿಂದ 8 ಮಾರ್ಗಗಳಲ್ಲಿ ಈ ಯಾತ್ರೆ ಸಂಚಾರ ನಡೆಸಲಿದೆ. ರಿಯಾಯಿತಿ ದರದ ಧಾರ್ಮಿಕ ಪ್ರವಾಸ ಪುನೀತ ಯಾತ್ರೆಗೆ ಆನ್ ಲೈನ್ ಮತ್ತು ಆಫ್‌ ಲೈನ್‌ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಮಾರ್ಗಗಳ ವಿವರ : ಕಲಬುರಗಿ ನಗರ ವೀಕ್ಷಣೆ ಮತ್ತು ಗಾಣಗಾಪುರ (ಒಬ್ಬರಿಗೆ ದರ 180 ರೂ.), ನಾಗಾವಿ-ಸನ್ನತಿ ಸ್ಥೂಪ-ಕೋರಿ ಸಿದ್ದೇಶ್ವರ ದರ್ಶನ (390 ರೂ. ಒಬ್ಬರಿಗೆ) ಈ ಎರಡು ಮಾರ್ಗಗಳಲ್ಲಿ ಕೆಎಸ್‌ಟಿಡಿಎಸ್ ಬಸ್ಸುಗಳು ನಿತ್ಯ ಸಂಚಾರ ನಡೆಸಲಿವೆ. ಈ ಪ್ಯಾಕೇಜ್ ಸಾರಿಗೆ ಸೌಲಭ್ಯ ಮಾತ್ರ ಒಳಗೊಂಡಿವೆ.

ತಿರುಪತಿ-ಮಂಗಾಪುರ (3,400), ತಿರುಪತಿ-ಕಾಳಹಸ್ತಿ-ಶ್ರೀನಿವಾಸ ಮಂಗಾಪುರ (3,900), ಶ್ರೀಶೈಲ-ಮಹಾನಂದಿ-ಸಾಕ್ಷಿ ಗಣೇಶ (2,900) ವಾರಕ್ಕೆ ಎರಡು ಬಾರಿ ಸಚಾರ. ಶಿರಡಿ-ನಾಸಿಕ್-ತ್ರಯಂಬಕೇಶ್ವರ-ಶನಿಸಿಂಗಾಪುರ (3,500) ವಾರಕ್ಕೆ ಒಮ್ಮೆ ಸಂಚಾರ. ಸಾರಿಗೆ, ವಸತಿ ಮತ್ತು ಶೀಘ್ರ ದರ್ಶನ ವ್ಯವಸ್ಥೆ ಇದರಲ್ಲಿ ಸೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+