KSRTC ಸಂಸ್ಥೆಗೆ ಮತ್ತೊಂದು ಗರಿ: 'ಗೌರ್ನೆನ್ಸ್ ನೌ' ಪ್ರಶಸ್ತಿಗೆ ಆಯ್ಕೆ
ಕರ್ನಾಟಕ ಉದ್ದಗಲಕ್ಕೂ ಸಂಚರಿಸಿ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮತ್ತೊಂದು ಗೌರವಕ್ಕೆ ಪಾತ್ರವಾಗಿದೆ.
ಬೆಂಗಳೂರು, ಫೆಬ್ರವರಿ 16: ಕರ್ನಾಟಕ ಉದ್ದಗಲಕ್ಕೂ ಸಂಚರಿಸಿ ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ನೀಡುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಮತ್ತೊಂದು ಗೌರವಕ್ಕೆ ಪಾತ್ರವಾಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ವು ತನ್ನ ಸೇವೆ, ಕಾರ್ಯ ನಿರ್ವಹಣೆಯ ಮೇಲೆ 'ಗೌರ್ನೆನ್ಸ್ ನೌ ಒಂಬತ್ತನೇ ರಾಷ್ಟ್ರೀಯ ಸಾರ್ವಜನಿಕ ಉದ್ದಿಮೆ ಪ್ರಶಸ್ತಿ -2023' ಮುಡಿಗೇರಿಸಿಕೊಂಡಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಜಾರಿಗೆ ತಂದಿರುವ ಮಾನವ ಸಂಪನ್ಮೂಲ ಉಪಕ್ರಮಗಳಿಗಾಗಿ ಈ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ನಿಗಮದ ಅಧಿಕಾರಿಗಳು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರಶಸ್ತಿ ವಿತರಣೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಕರ್ನಾಟಕ ರಸ್ತೆ ಸಾರಿಗೆಗೆ ಸಂದ ಈ ಪ್ರತಿಷ್ಠಿತ ಗೌರ್ನೆನ್ಸ್ ನೌ ಒಂಬತ್ತನೇ ಸಾರ್ವಜನಿಕ ಉದ್ದಿಮೆಗಳ ಪ್ರಶಸ್ತಿಯನ್ನು ಭಾರತದ ಸರ್ವೋಚ್ಚ ನ್ಯಾಯಾಲಯ (Suupreme Cout)ದ ಈ ಹಿಂದಿನ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರ ಅವರು ಪ್ರದಾನ ಮಾಡಲಿದ್ದಾರೆ.
ದೇಶದ ಬೆಳವಣಿಗೆಗೆ ಪ್ರಮುಖವಾಗಿರುವ ಸಾರ್ವಜನಿಕ ವಲಯದ ಉದ್ಯಮಗಳ (ಪಿಎಸ್‌ಯು) ಪ್ರಯತ್ನಗಳನ್ನು ಗೌರವಿಸುವುದು ಈ ಪ್ರಶಸ್ತಿಯ ಉದ್ದೇಶವಾಗಿದೆ. ಕೆಎಸ್‌ಆರ್‌ಟಿಸಿಯನ್ನು ಎಚ್‌ಆರ್ - ಎಕ್ಸಲೆನ್ಸ್ (ಒಟ್ಟಾರೆ). ವಿಭಾಗದ ಅಡಿಯಲ್ಲಿ ಆಯ್ಕೆ ಮಾಡಲಾಗಿದೆ. ನಾಮ ನಿರ್ದೇಶನಗಳನ್ನು ಪ್ರಖ್ಯಾತ ತೀರ್ಪುಗಾರ ಸದಸ್ಯರು 6 ವಿಭಿನ್ನ ನಿಯತಾಂಕಗಳ ಅಡಿಯಲ್ಲಿ ಮೌಲ್ಯಮಾಪನ ಮಾಡಲಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications