ಪ್ರಯಾಣಿಕರಿಗೆ ಮಹತ್ವದ ಸೂಚನೆ ಕೊಟ್ಟ ಕೆ. ಎಸ್. ಆರ್. ಟಿ. ಸಿ

ಬೆಂಗಳೂರು, ಜೂನ್ 01 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಜೂನ್ 2ರಿಂದ ಸರ್ಕಾರಿ ಬಸ್‌ಗಳು ಬೆಳಗ್ಗೆ 5ರಿಂದ ರಾತ್ರಿ 9ರ ತನಕ ಸಂಚಾರ ನಡೆಸಲಿವೆ.

Recommended Video

      ಚೈನ್ ಕದಿಯಲು ಮಹಿಳೆಯ ಕುತ್ತಿಗೆಗೆ ಕೈ ಹಾಕಿದ ಕಳ್ಳರು.... ನಂತರ ನಡೆದಿದ್ದೇನು? | Oneindia Kannada

      ಸೋಮವಾರ ಈ ಕುರಿತು ಕೆ. ಎಸ್. ಆರ್. ಟಿ. ಸಿ ಪ್ರಕಟಣೆ ಹೊರಡಿಸಿದೆ. ಸೋಮವಾರ ರಾತ್ರಿ 9 ಗಂಟೆಯವರೆಗೆ ಬಸ್ಸುಗಳ ಕಾರ್ಯಚರಣೆ ಇರುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಮೇ 19ರಿಂದ ಸರ್ಕಾರಿ ಬಸ್ ಸಂಚಾರ ಕರ್ನಾಟಕದಲ್ಲಿ ಆರಂಭವಾಗಿದೆ.

      ಇಷ್ಟು ದಿನ ಕರ್ನಾಟಕದಲ್ಲಿ ಸಂಜೆ 7 ರಿಂದ ಬೆಳಗ್ಗೆ 7ರ ತನಕ ಕರ್ಫ್ಯೂ ಜಾರಿಯಲ್ಲಿರುತ್ತಿತ್ತು. ಆದ್ದರಿಂದ, ಸಂಜೆ 7 ಗಂಟೆಗೆ ಕೊನೆಯ ಬಸ್ ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶದಿಂದ ಹೊರಡುತ್ತಿತ್ತು. ಈಗ ಈ ಸಮಯವನ್ನು 9 ಗಂಟೆ ತನಕ ವಿಸ್ತರಣೆ ಮಾಡಲಾಗಿದೆ.

      ಜೂನ್ 2ರ ಮಂಗಳವಾರದಿಂದ ಕೆ. ಎಸ್. ಆರ್‌. ಟಿ. ಸಿ. ಬಸ್‌ಗಳು ಬೆಳಗ್ಗೆ 5 ರಿಂದ ರಾತ್ರಿ 9 ಗಂಟೆಯವರೆಗೆ ಸಂಚಾರ ನಡೆಸಲಿವೆ. ಲಾಕ್ ಡೌನ್ ಮಾರ್ಗಸೂಚಿಯಲ್ಲಿ ರಾತ್ರಿ 9ರ ತನಕ ಎಲ್ಲಾ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶವನ್ನು ಮಾಡಿಕೊಡಲಾಗಿದೆ.

      ಸರ್ಕಾರಿ ಬಸ್ ಸಂಚಾರ

      ಸರ್ಕಾರಿ ಬಸ್ ಸಂಚಾರ

      ಕರ್ನಾಟಕದಲ್ಲಿ 4ನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದಾಗಲೇ ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಷರತ್ತು ಬದ್ಧ ಅನುಮತಿ ನೀಡಲಾಗಿತ್ತು. ಮೇ 19 ರಿಂದ 31ರ ತನಕ ಒಟ್ಟು 33783 ಬಸ್‌ಗಳನ್ನು ಓಡಿಸಲಾಗಿದೆ. ಆದರೆ, ರಾತ್ರಿ ವೇಳೆ ಬಸ್‌ಗಳ ಸಂಚಾರವಿಲ್ಲ.

      ಪ್ರಯಾಣಿಕರ ಸಂಚಾರ

      ಪ್ರಯಾಣಿಕರ ಸಂಚಾರ

      ಸರ್ಕಾರಿ ಬಸ್ ಸಂಚಾರ ಆರಂಭಿಸಿದ ಮೇಲೆ ಜನರು ಸಹ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಬಸ್ ಸಂಚಾರ ಆರಂಭವಾದ ಮೇ 19ರಂದು 53,506 ಪ್ರಯಾಣಿಕರು ಬಸ್‌ಗಳಲ್ಲಿ ಸಂಚಾರ ನಡೆಸಿದ್ದರು. ಮೇ 31ರಂದು 1037978 ಜನರು ಸಂಚಾರ ಮಾಡಿದ್ದಾರೆ.

      ಬೆಂಗಳೂರಿನ ಬಸ್‌ಗಳ ಸಂಖ್ಯೆ

      ಬೆಂಗಳೂರಿನ ಬಸ್‌ಗಳ ಸಂಖ್ಯೆ

      ಮೇ 19ರಿಂದ 31ರ ತನಕ ಬೆಂಗಳೂರು ನಗರದಿಂದ 9127 ಬಸ್‌ಗಳು ಸಂಚಾರ ನಡೆಸಿವೆ. ಒಟ್ಟು 148798 ಜನರು ಪ್ರಯಾಣ ಮಾಡಿದ್ದಾರೆ. ಬಸ್ ಸಂಚಾರ ಆರಂಭವಾದ ಮೊದಲ ದಿನ ಕೇವಲ 8620 ಜನರು ಪ್ರಯಾಣಿಸಿದ್ದರು. ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ.

      ಮುಂಗಡ ಟಿಕೆಟ್ ಬುಕ್ಕಿಂಗ್

      ಮುಂಗಡ ಟಿಕೆಟ್ ಬುಕ್ಕಿಂಗ್

      ಕೆ. ಎಸ್. ಆರ್. ಟಿ. ಸಿ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಬುಕ್ ಮಾಡಿಕೊಂಡು ಇದುವರೆಗೂ 67904 ಜನರು ಸಂಚಾರ ನಡೆಸಿದ್ದಾರೆ. ಮೊದಲ ದಿನ 1992 ಜನರು ಮಾತ್ರ ಸಂಚಾರ ನಡೆಸಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+