ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ 2019; ಕೆಎಸ್ಆರ್‌ಟಿಸಿಯಿಂದ 2500 ವಿಶೇಷ ಬಸ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದಸರಾ 2019ರ ಪ್ರಯುಕ್ತ 2500ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ ಮಾಡಿದೆ. ಬೆಂಗಳೂರಿನಿಂದ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಬಸ್‌ಗಳು ಸಂಚಾರ ನಡೆಸಲಿವೆ.

ಕೆಎಸ್ಆರ್‌ಟಿಸಿ ಈ ಕುರಿತು ಪ್ರಕಟಣೆ ಹೊರಡಿಸಿದೆ. ಅಕ್ಟೋಬರ್ 4 ರಿಂದ 8ರ ತನಕ ವಿವಿಧ ಬೆಂಗಳೂರಿನಿಂದ ಬಸ್‌ಗಳು ಸಂಚಾರ ನಡೆಸಲಿವೆ. ಪ್ರಸ್ತುತ ಇರುವ ಸೇವೆಗಳ ಜೊತೆ ವಿಶೇಷ ಬಸ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ.

ಬೆಂಗಳೂರು-ಬೆಳಗಾವಿ ನಡುವೆ ದಸರಾ ವಿಶೇಷ ರೈಲು, ವೇಳಾಪಟ್ಟಿಬೆಂಗಳೂರು-ಬೆಳಗಾವಿ ನಡುವೆ ದಸರಾ ವಿಶೇಷ ರೈಲು, ವೇಳಾಪಟ್ಟಿ

Recommended Video

ಕಲಬುರಗಿಯಲ್ಲಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ | Oneindia Kannada

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ, ಶಾಂತಿನಗರದ ಬಿಎಂಟಿಸಿ ನಿಲ್ದಾಣದಿಂದ ಬಸ್‌ಗಳು ಸಂಚಾರ ನಡೆಸಲಿವೆ. ವಿವಿಧ ಜಿಲ್ಲೆಗಳು ಮತ್ತು ಅಂತರರಾಜ್ಯದಿಂದ 9/10/2019ರಂದು ವಿಶೇಷ ಬಸ್‌ ಬೆಂಗಳೂರಿಗೆ ಸಂಚಾರ ನಡೆಸಲಿದೆ.

ಮೈಸೂರು ದಸರಾ 2019; ಟೂರ್ ಪ್ಯಾಕೇಜ್ ಘೋಷಿಸಿದ ಕೆಎಸ್ಆರ್‌ಟಿಸಿಮೈಸೂರು ದಸರಾ 2019; ಟೂರ್ ಪ್ಯಾಕೇಜ್ ಘೋಷಿಸಿದ ಕೆಎಸ್ಆರ್‌ಟಿಸಿ

ವೇಗದೂತ, ರಾಜಹಂಸ, ಐರಾವತ ಹಾಗೂ ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಬಸ್‌ಗಳು ಸಂಚಾರ ನಡೆಸಲಿವೆ. ಬೆಂಗಳೂರು ವಿಮಾನ ನಿಲ್ದಾಣದಿಂದಲೂ ಮೈಸೂರಿಗೆ 'ಫ್ಲೈ ಬಸ್' ಮೂಲಕ ನೇರ ಸಾರಿಗೆ ಸೌಲಭ್ಯ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಕೆಎಸ್ಆರ್‌ಟಿಸಿ ವಿಶೇಷ ಪ್ಯಾಕೇಜ್ ಘೋಷಣೆಪ್ರವಾಸಿ ಸ್ಥಳಗಳ ವೀಕ್ಷಣೆಗೆ ಕೆಎಸ್ಆರ್‌ಟಿಸಿ ವಿಶೇಷ ಪ್ಯಾಕೇಜ್ ಘೋಷಣೆ

ಎಲ್ಲಿಂದ ಎಲ್ಲಿಗೆ ಬಸ್ ಸೌಲಭ್ಯ?

ಎಲ್ಲಿಂದ ಎಲ್ಲಿಗೆ ಬಸ್ ಸೌಲಭ್ಯ?

ಮೆಜೆಸ್ಟಿಕ್‌ನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶೃಂಗೇರಿ, ಹೊರನಾಡು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ದಾವಣಗೆರೆ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯನಗರ, ಕಾರವಾರ, ಬಳ್ಳಾರಿ, ಹೊಸಪೇಟೆ, ಕಲಬುರಗಿ, ರಾಯಚೂರು ಮುಂತಾದ ಸ್ಥಳಗಳಿಗೆ ಹಾಗೂ ಹೈದರಾಬಾದ್, ಚೆನ್ನೈ, ಊಟಿ, ಕೊಡೈಕೆನಾಲ್, ಸೇಲಂ, ತಿರುಚಿನಾಪಳ್ಳಿ, ಪುದುಕೋಟೆ, ಮಧುರೈ, ಪಣಜಿ, ಶಿರಡಿ, ಪೂನಾ, ಎರ್ನಾಕುಲಂ, ಪಲ್ಗಾಟ್ ಹಾಗೂ ಇತರ ನಗರಗಳಿಗೆ ಬಸ್ ಸಂಚಾರ ನಡೆಸಲಿದೆ.

ಮೈಸೂರು ರಸ್ತೆ ನಿಲ್ದಾಣ

ಮೈಸೂರು ರಸ್ತೆ ನಿಲ್ದಾಣ

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರಿಗೆ ಪ್ರತ್ಯೇಕವಾಗಿ 175 ಹೆಚ್ಚುವರಿ ಬಸ್ ಸಂಚಾರ ನಡೆಸಲಿದೆ. ಮೈಸೂರು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು 175 ಬಸ್ ಸೇರಿ ಒಟ್ಟು 350 ಬಸ್‌ಗಳನ್ನು ಓಡಿಸಲಾಗುತ್ತಿದೆ.

ಫ್ಲೈ ಬಸ್ ಸೇವೆ ಸಹ ಇದೆ

ಫ್ಲೈ ಬಸ್ ಸೇವೆ ಸಹ ಇದೆ

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಫ್ಲೈ ಬಸ್ ಮೂಲಕ ನೇರವಾಗಿ ಸಂಪರ್ಕ ಕಲ್ಪಿಸಲಾಗುತ್ತಿದೆ.

ಮೊಬೈಲ್ ಮೂಲಕ ಎಂ-ಬುಕ್ಕಿಂಗ್ ಹಾಗೂ ಇ ಟಿಕೆಟ್ ಬುಕ್ಕಿಂಗ್‌ ಅನ್ನು www.ksrtc.in ವೆಬ್ ಸೈಟ್ ಮೂಲಕ ಮಾಡಬಹುದಾಗಿದೆ.

ಪ್ರತ್ಯೇಕ ಮಾಹಿತಿ ಕೇಂದ್ರ

ಪ್ರತ್ಯೇಕ ಮಾಹಿತಿ ಕೇಂದ್ರ

ಮೈಸೂರು ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡಲು ಮಾಹಿತಿ ಕೇಂದ್ರ ತೆರೆಯಲಾಗುತ್ತಿದೆ.

ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಗೋವಾ, ತಮಿಳುನಾಡು, ಮಹಾರಾಷ್ಟ್ರ ಹಾಗೂ ಪುದುಚೇರಿ ರಾಜ್ಯಗಳಲ್ಲಿರುವ 708 ಗಣಕೀಕೃತ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳ ಮೂಲಕ ಮುಂಗಡ ಆಸನ ಕಾಯ್ದಿರಿಸಬಹುದು.

English summary
Karnataka State Road Transport Corporation (KSRTC) will run 2500 special bus for dasara 2019. Bus will run on October 4 to from Bengaluru to various district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X