ದಸರಾ ಸಾಲು-ಸಾಲು ರಜೆ : ಕೆಎಸ್ಆರ್‌ಟಿಸಿಯಿಂದ 2500 ಬಸ್
ಬೆಂಗಳೂರು, ಅಕ್ಟೋಬರ್ 13 : ದಸರಾ ಹಿನ್ನಲೆಯಲ್ಲಿ ಸಾಲು-ಸಾಲು ರಜೆ ಇದೆ. ಜನರು ಬೇರೆ-ಬೇರೆ ಊರಿಗೆ ಪ್ರಯಾಣ ಮಾಡುತ್ತಾರೆ. ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ಕೆಎಸ್ಆರ್‌ಟಿಸಿ 2,500 ವಿಶೇಷ ಬಸ್ಸುಗಳನ್ನು ಓಡಿಸುತ್ತಿದೆ.
ಕೆಎಸ್ಆರ್‌ಟಿಸಿಯ ವಿಶೇಷ ಬಸ್ಸುಗಳು ಅಕ್ಟೋಬರ್ 17 ರಿಂದ 22 ತನಕ ಸಂಚಾರ ನಡೆಸಲಿವೆ. ಮೈಸೂರಿನಿಂದ 300 ಬಸ್ಸುಗಳು ಸಂಚಾರ ನಡೆಸಲಿದ್ದು, ಮೈಸೂರಿಗೆ ಜನರು ಭೇಟಿ ನೀಡಲು ಸಹಾಯಕವಾಗಲಿದೆ.
ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಹ ದಸರಾ ಹಿನ್ನಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿವಿಧ ಸಾಂಸ್ಕೃತಿಕ ಕಲಾತಂಡಗಳು ವಿಮಾನ ನಿಲ್ದಾಣದಲ್ಲಿ ನೃತ್ಯ ಪ್ರದರ್ಶನ ನಡೆಸಲಿವೆ. ದೊಡ್ಡ ರಂಗೋಲಿ, ವಿವಿಧ ಚಿತ್ತಾರಗಳ ಮೂಲಕ ಪ್ರಯಾಣಿಕರಿಗೆ ದಸರಾ ಬಗ್ಗೆ ಮಾಹಿತಿ ನೀಡಲಿದೆ.

ಸಾಲು-ಸಾಲು ರಜೆ : ಆಯುಧ ಪೂಜೆ, ವಿಜಯದಶಮಿ, ಶನಿವಾರ, ಭಾನುವಾರ ಸೇರಿ ಸಾಲು-ಸಾಲು ರಜೆ ಇದೆ. ಆದ್ದರಿಂದ, ಕೆಎಸ್ಆರ್‌ಟಿಸಿ ಹೆಚ್ಚುವರಿ ಬಸ್ಸಗಳನ್ನು ಓಡಿಸುತ್ತಿದೆ.
* ಅಕ್ಟೋಬರ್ 18 ಗುರುವಾರ ಆಯುಧ ಪೂಜೆ
* ಅಕ್ಟೋಬರ್ 19 ಶುಕ್ರವಾರ ವಿಜಯ ದಶಮಿ
* ಅಕ್ಟೋಬರ್ 20 ಶನಿವಾರ
* ಅಕ್ಟೋಬರ್ 21 ಭಾನುವಾರ












Click it and Unblock the Notifications