4 ನಗರದಿಂದ ಕೆಎಸ್ಆರ್‌ಟಿಸಿ ತಿರುಪತಿ-ತಿರುಮಲ ಪ್ಯಾಕೇಜ್
ಬೆಂಗಳೂರು, ಜುಲೈ 14 : ಕೆಎಸ್ಆರ್‌ಟಿಸಿಯ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದ್ದರಿಂದ ರಾಜ್ಯದ ವಿವಿಧ ನಗರಗಳಿಂದ ಕೆಎಸ್ಆರ್‌ಟಿಸಿ ಈ ಪ್ಯಾಕೇಜ್ ಅನ್ನು ಜು.20ರಿಂದ ಆರಂಭಿಸಲಿದೆ.
2017ರ ಮೇ ತಿಂಗಳಿನಲ್ಲಿ ಕೆಎಸ್‌ಆರ್‌ಟಿಸಿ ಬೆಂಗಳೂರು-ತಿರುಪತಿ ಪ್ಯಾಕೇಜ್ ಟೂರ್ ಆರಂಭಿಸಿತ್ತು. ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಈ ಪ್ಯಾಕೇಜ್ ಆರಂಭಿಸಲಾಗಿತ್ತು. ಪ್ರಯಾಣಿಕರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಆದ್ದರಿಂದ ಕೆಎಸ್ಆರ್‌ಟಿಸಿ ರಾಜ್ಯದ ವಿವಿಧ ನಗರಗಳಿಂದ ತಿರುಪತಿ ಪ್ಯಾಕೇಜ್ ಟೂರ್ ಆರಂಭಿಸಲಿದೆ. ಜುಲೈ 20ರಂದು ಈ ಪ್ಯಾಕೇಜ್ ಟೂರ್‌ಗೆ ಚಾಲನೆ ಸಿಗಲಿದೆ. ಈ ಪ್ಯಾಕೇಜ್‌ನಲ್ಲಿ ಐರಾವತ ಕ್ಲಬ್ ಕ್ಲಾಸ್ ಬಸ್ ಮೂಲಕ ಜನರು ತಿರುಪತಿಗೆ ಭೇಟಿ ನೀಡಬಹುದಾಗಿದೆ.

ಮಂಗಳೂರು, ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರಿನಿಂದ ತಿರುಪತಿಗೆ ಕೆಎಸ್ಆರ್‌ಟಿಸಿ ಟೂರ್ ಪ್ಯಾಕೇಜ್ ಆರಂಭಿಸಲಿದೆ. ಜುಲೈ 20ರಂದು ಏಕಕಾಲಕ್ಕೆ ಈ ಎಲ್ಲಾ ನಗರದಿಂದ ಬಸ್ ಸೇವೆಗೆ ಚಾಲನೆ ನೀಡಲಾಗುತ್ತದೆ.
ಮಂಗಳೂರು, ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರಿನಿಂದ ತಿರುಪತಿಗೆ ಜನರು ಐರಾವತ ಕ್ಲಬ್ ಕ್ಲಾಸ್ ಬಸ್ ಮೂಲಕ ತೆರಳಬಹುದು. ಅದೇ ನಗರಕ್ಕೆ ವಾಪಸ್ ಆಗಬಹುದು. ಆದರೆ, 30 ದಿನದ ಮೊದಲು ಪ್ಯಾಕೇಜ್ ಟೂರ್ ಬುಕ್ ಮಾಡಬೇಕಾಗಿದೆ.
ಕೆಎಸ್ಆರ್‌ಟಿಸಿಯ ಅಧಿಕೃತ ಬುಕ್ಕಿಂಗ್ ಕೌಂಟರ್, ಅನೊಮೋದಿತ ಖಾಸಗಿ ಕೌಂಟರ್‌ಗಳಲ್ಲಿ ಪ್ರಯಾಣಿಕರು ಪ್ಯಾಕೇಜ್ ಟೂರ್‌ಗಳನ್ನು ಬುಕ್ ಮಾಡಬಹುದಾಗಿದೆ. ಆನ್‌ಲೈನ್ ಮತ್ತು ಮೊಬೈಲ್ ಮೂಲಕವೂ ಬುಕ್ಕಿಂಗ್ ಮಾಡಬಹುದಾಗಿದೆ.












Click it and Unblock the Notifications