ಕೆಎಸ್ಆರ್‌ಟಿಸಿ ವಿದ್ಯಾರ್ಥಿ ಪಾಸುಗಳ ದರಪಟ್ಟಿ

ಬೆಂಗಳೂರು, ನವೆಂಬರ್ 16: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ವಿದ್ಯಾರ್ಥಿಗಳಿಗೆ 2020-21ನೇ ಸಾಲಿನ ಪಾಸುಗಳನ್ನು ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳಿಗೆ ಬಸ್ ಪಾಸು ಉಚಿತವಾಗಿದ್ದು, ಸಂಸ್ಕರಣಾ ಮತ್ತು ಅಪಘಾತ ಪರಿಹಾರ ಶುಲ್ಕ ಮಾತ್ರ ಪಾವತಿ ಮಾಡಬೇಕಿದೆ.

ಕೆಎಸ್ಆರ್‌ಟಿಸಿ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪಾಸುಗಳನ್ನು ಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ. ಅರ್ಜಿ ಸಲ್ಲಿಕೆ ಮಾಡುವಾಗ ಶಾಲಾ-ಕಾಲೇಜು ಮುಖ್ಯಸ್ಥರಿಂದ ದೃಢೀಕರಿಸಿಕೊಂಡು ಹಿಂದಿನ ಪದ್ಧತಿಯಂತೆಯೇ ಬಸ್ ನಿಲ್ದಾಣದ ಪಾಸ್ ಕೌಂಟರ್‌ನಲ್ಲಿ ಹಣ ಪಾವತಿಸಿ, ಪಾಸು ಪಡೆಯಬಹುದು.

KSRTC Student Bus Pass Fare 2020

ತಾವು ವ್ಯಾಸಂಗ ಮಾಡುವ ಶಿಕ್ಷಣ ಸಂಸ್ಥೆಗಳಲ್ಲೇ ಶುಲ್ಕಗಳನ್ನು ಪಾವತಿ ಮಾಡಿ, ಶಾಲಾ-ಕಾಲೇಜುಗಳ ಮುಖಾಂತರ ಬಸ್ ಪಾಸ್ ಪಡೆಯಬಹುದು. ವಿದ್ಯಾರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಖುದ್ದಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡುವಂತಿಲ್ಲ.

ಪಾಸುಗಳ ದರಪಟ್ಟಿ : ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಪಾಸು ಸಾಮಾನ್ಯ 150 ರೂ.ಗಳು, ಎಸ್‌ಸಿ/ಎಸ್‌ಟಿ 150 ರೂ.ಗಳು.

ಪ್ರೌಢಶಾಲೆ ಬಾಲಕರು ಸಾಮಾನ್ಯ 750 ರೂ., ಎಸ್‌ಸಿ/ಎಸ್‌ಟಿ 150 ರೂ.ಗಳು. ಬಾಲಕಿಯರು ಸಾಮಾನ್ಯ 550 ರೂ.ಗಳು, ಎಸ್‌ಸಿ/ಎಸ್‌ಟಿ 150 ರೂ.ಗಳು.

ಪಿಯುಸಿ, ಪದವಿ, ಡಿಪ್ಲೊಮಾ 1050 ರೂ., ಎಸ್‌ಸಿ/ಎಸ್‌ಟಿ 150 ರೂ.ಗಳು. ಐಟಿಐ 1310 ರೂ.ಗಳು. ಎಸ್‌ಸಿ/ಎಸ್‌ಟಿ 160 ರೂ.ಗಳು.

ವೃತ್ತಿಪರ ಕೋರ್ಸ್‌ 1550 ರೂ.ಗಳು, ಎಸ್‌ಸಿ/ಎಸ್‌ಟಿ 150 ರೂ.ಗಳು. ಸಂಜೆ ಕಾಲೇಜು 1350 ರೂ.ಗಳು, ಎಸ್‌ಸಿ/ಎಸ್‌ಟಿ 150 ರೂ.ಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+