KSRTC ಸಿಬ್ಬಂದಿಗೆ ವಾಲಿಬಾಲ್-ಬ್ಯಾಡ್ಮಿಂಟನ್‌ನಲ್ಲಿ 2ನೇ ಸ್ಥಾನ
ಬೆಂಗಳೂರು, ಸೆಪ್ಟಂಬರ್ 29: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಅಧಿಕಾರಿಗಳು ಕಚೇರಿಯಲ್ಲಿ ಮತ್ತು ಸಿಬ್ಬಂದಿ ಕೇವಲ ಬಸ್‌ಗಳಲ್ಲಿ ಚಾಲಕರಾಗಿ, ನಿರ್ವಾಹಕರಾಗಿ ಉತ್ತಮ ಸೇವೆ ನೀಡುವುದು ಮಾತ್ರವಲ್ಲದೇ ಕ್ರೀಡೆಗಳಲ್ಲೂ ಸಾಧನೆ ಮಾಡಿದ್ದಾರೆ. ಗುಜರಾತ್‌ನಲ್ಲಿ ನಡೆದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಎರಡನೇ ಸ್ಥಾನ (ರನ್ನರ್ ಅಪ್) ಪಡೆದಿದ್ದಾರೆ.
ನವದೆಹಲಿಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ (Association of State Road Transport Undertaking) ವತಿಯಿಂದ ದೇಶದಲ್ಲಿನ ಸಾರ್ವಜನಿಕ ಸಾರಿಗೆ ಸಂಸ್ಥೆಗಳ ಅಧಿಕಾರಿ/ಸಿಬ್ಬಂದಿಗಳಿಗೆ ಅಂತರ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬ್ಯಾಡ್ಮಿಂಟನ್, ವಾಲಿಬಾಲ್ ಪಂದ್ಯಾವಳಿಗಳನ್ನು ಗುಜರಾತ್ ಕಳೆದ ವಾರ ಆಯೋಜಿಸಿತ್ತು.

ಈ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಪುರುಷರ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಹಾಗೂ ಸಿಂಗಲ್ಸ್ ಪಂದ್ಯಾವಳಿಗಳಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದೆ. ಅವರನ್ನು ನಿಗಮದ ಅಧಿಕಾರಿಗಳು ಅಭಿನಂದಿಸಿದ್ದಾರೆ.
ಬ್ಯಾಡ್ಮಿಂಟನ್ ತಂಡದಲ್ಲಿ ಭಾಗವಹಿಸಿ ರನ್ನರ್ ಅಪ್ ಪ್ರಶಸ್ತಿ ಪಡೆದ ಮುಖ್ಯ ಕಾನೂನು ಅಧಿಕಾರಿ ಪ್ರಸನ್ನಕುಮಾರ್ ಬಾಳಾನಾಯ್ಕ, ಮಂಗಳೂರು ವಿಭಾಗ ಹಿರಿಯ ವಿಭಾಗ ನಿಯಂತ್ರಣಾಧಿಕಾರಿ ಎಂ. ರಾಜೇಶ್ ಶೆಟ್ಟಿ, ಸಿಬ್ಬಂದಿ ಮೇಲ್ವಿಚಾರಕ ಕೆ. ಅಶ್ವಥ್ ನಾರಾಯಣ, ಪಾರುಪತ್ತೆಗಾರ ವಿ. ಹರೀಶ್ ಮತ್ತು ಚಾಲಕ-ಕಂ-ನಿರ್ವಾಹಕ ಶ್ರೀ ಜಿ.ಎಸ್. ಜಗನ್ನಾಥ ಇವರನ್ನು ನಿಗಮದ ಎಂಡಿ ವಿ ಅನ್ಬುಕುಮಾರ್ ಅಭಿನಂದಿಸಿದರು.
ವಾಲಿಬಾಲ್ ತಂಡದಲ್ಲಿ ಕರಾಸಾ ಪೇದೆ ಕುಪ್ಪುಸ್ವಾಮಿ ವಿ, ಸಹಾಯಕ ಸುರೇಶ ಪಿ.ವಿ, ಚಾಲಕ-ಕಂ-ನಿರ್ವಾಹಕ ದಿವಾಕರ ಟಿ.ಎಂ, ಚಾಲಕ ರಾಮಾಂಜಿನಪ್ಪ, ತಾಂತ್ರಿಕ ಸಹಾಯಕ ಆರ್. ರಾಹುಲ್, ತಾಂತ್ರಿಕ ಸಹಾಯಕ ಮಹದೇವಯ್ಯ, ಕರಾಸಾ ಪೇದೆ ನವೀನ್ ಕುಮಾರ್ ಎಂ.ಎ, ಚಾಲಕ-ಕಂ-ನಿರ್ವಾಹಕ ಪ್ರಸನ್ನಕುಮಾರ್ ಎಸ್, ಸಹಾಯಕ ಕುಶಲಕರ್ಮಿ ಜೇಮ್ಸ್‌ಪಾಂಡ್ಯನ್ ರನ್ನರ್ ಅಪ್ ಆಗಿದ್ದು ಇವರು ಸಹ ಅಭಿನಂದನೆ ಸ್ವೀಕರಿಸಿದ್ದಾರೆ.
ಅಭಿನಂದನೆ ಜೊತೆಗೆ ಎಲ್ಲ 15 ಕ್ರೀಡಾಪಟುಗಳಿಗೆ ತಲಾ ರೂಪಾಯಿ 5000/ ನಗದು ಪುರಸ್ಕಾರ ನೀಡಿ ಗೌರವಿಸಲಾಗಿದೆ.

KSRTCಗೆ ವಿವಿಧ ಪ್ರಶಸ್ತಿ ಗರಿ
ಕೆಎಸ್ಆರ್‌ಟಿಸಿ ಯು ತನ್ನ 300ನೇ ಪ್ರಶಸ್ತಿಯ ಗಡಿ ದಾಟಿದೆ. ಸ್ಕಾಚ್ ಅರ್ಡರ್ ಅಫ್ ಮೆರಿಟ್ 3 ಪ್ರಶಸ್ತಿಗಳು ಮತ್ತು 1 ಸ್ಕಾಚ್ ಗವರ್ನೆಸ್ ಪ್ರಶಸ್ತಿ-2023 ಅನ್ನು ಪಡೆದುಕೊಂಡಿದೆ.
ದೆಹಲಿ ಮೂಲದ ಸ್ಕ್ವಾಚ್ ಸಂಸ್ಥೆಯು ಸ್ವತಂತ್ರ ವಿಚಾರ ತಜ್ಞ ವೇದಿಕಾ ಸಂಸ್ಥೆ 'ಸ್ಕಾಚ್ ಪ್ರಶಸ್ತಿ'ಯನ್ನು ವಿವಿಧ ಸಂಸ್ಥೆಗಳು ಸಾಧಿಸಿರುವ ಉತ್ತಮ ಆಡಳಿತ ನಿರ್ವಹಣೆ, ಹಣಕಾಸು,ತಾಂತ್ರಿಕತೆ ಅಳವಡಿಕೆ ಹಾಗೂ ಆಂತರಿಕ ಬೆಳವಣಿಗೆಗಾಗಿ ನೀಡುತ್ತಾ ಬಂದಿದೆ. ಸ್ಕಾಚ್ ಸಂಸ್ಥೆಯು ತನ್ನ ಅತ್ಯುನ್ನತ ಪ್ರಶಸ್ತಿಗಳನ್ನು ಸಂಸ್ಥೆಗಳು ಮಾಡಿರುವ ಅತಿ ಉತ್ತಮ ಸಾಧನೆ ಹಾಗೂ ಅವುಗಳಿಂದ ಉಂಟಾಗಿರುವ ಪರಿಣಾಮಗಳನ್ನು ಆಧರಿಸಿ KSRTC ಆಯ್ಕೆ ಮಾಡಲಾಗಿದೆ.
ನಿಗಮವು ಅನುಷ್ಠಾನ ಮಾಡಿರುವ ಕಾರ್ಮಿಕ ಕಲ್ಯಾಣ ಹಾಗೂ ಸಾಮಾಜಿಕ ಉಪಯುಕ್ತತೆಯ 3 ಉಪಕ್ರಮಗಳಿಗೆ ಸ್ಕಾರ್ಚ್ ಆರ್ಡ್‌ರ್ ಆಫ್ ಮೆರಿಟ್ ಪ್ರಶಸ್ತಿಯು ಲಭಿಸಿದೆ. ಒಂದು ಉಪಕ್ರಮವು ಸ್ಕಾಚ್ ಗವರ್ನೆಸ್ ಪ್ರಶಸ್ತಿಯನ್ನು ಸಹ ಪಡೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಶಸ್ತಿ ವಿವರ
* ರೂ.1 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆ (ಸಾರಿಗೆ ಸುರಕ್ಷಾ ವಿಮಾ ಯೋಜನೆ)ಗೆ ಸ್ಕಾಚ್ ಅರ್ಡರ್ ಅಫ್ ಮೆರಿಟ್ ಪ್ರಶಸ್ತಿ ಮತ್ತು ಸ್ಕಾಚ್ ಗವರ್ನೆಸ್ ಪ್ರಶಸ್ತಿ ಲಭಿಸಿದೆ.
* ವಾಹನಗಳ ಪುನಶ್ಚೇತನ ಯೋಜನೆ ಸ್ಕಾಚ್ ಅರ್ಡರ್ ಅಫ್ ಮೆರಿಟ್ ಪ್ರಶಸ್ತಿ ಲಭಿಸಿದೆ.
* ಬಿಸಿನೆಸ್ ಇಂಟಲಿಜೆಂಟ್ ಡ್ಯಾಶ್ ಬೋರ್ಡ್ ಗೆ ಸ್ಕಾಚ್ ಅರ್ಡರ್ ಅಫ್ ಮೆರಿಟ್ ಪ್ರಶಸ್ತಿ ದೊರೆತಿದೆ.












Click it and Unblock the Notifications