ಕೆಎಸ್ ಆರ್ ಟಿಸಿಗೆ ಮತ್ತೆ ಅಂತಾರಾಷ್ಟ್ರೀಯ ಪ್ರಶಸ್ತಿಯ ಗರಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಮೇ 17: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಕೆ ಎಸ್ ಆರ್ ಟಿ ಸಿ) ಈ ಬಾರಿಯೂ ಅಂತಾರಾಷ್ಟ್ರೀಯ ಸಾರ್ವಜನಿಕ ಸಾರಿಗೆ ಪ್ರಶಸ್ತಿ ಲಭಿಸಿದೆ.

ಕೆಎಸ್ ಆರ್ ಟಿಸಿ ತನ್ನ ವಿಶಿಷ್ಟ ಕಾರ್ಯಚಟುವಟಿಕೆಯಿಂದಾಗಿ ಸತತ ನಾಲ್ಕನೆಯ ಬಾರಿಗೆ ಈ ಪ್ರಶಸ್ತಿಯನ್ನು ಪಡೆದಿದ್ದು, ಕೆನಡಾದ ಮಾಂಟ್ರಿಯಲ್ ನಲ್ಲಿ ನಡೆದ ವಿಶ್ವ ಸಾರ್ವಜನಿಕ ಸಾರಿಗೆ ಸಮ್ಮೇಳನದಲ್ಲಿಪ್ರಶಸ್ತಿ ಪ್ರದಾನ ಮಾಡಲಾಯಿತು.[ಮೇ 2ರಿಂದ ಆಗುಂಬೆ ಮೂಲಕ ಶಿವಮೊಗ್ಗ-ಉಡುಪಿ ಬಸ್ ಸಂಚಾರ]

KSRTC recieves a prestigious award 4th time continuously

ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ಅವರು ಯುಐಟಿಪಿ ಅಧ್ಯಕ್ಷ ಮಸಾಕಿ ಒಗಾಟ ಅವರಿಂದ ಪ್ರಶಸ್ತಿ ಸ್ವೀಕರಿಸಿಸದರು. ಕೆಎಸ್ ಆರ್ ಟಿಸಿಯು ಸಣ್ಣ ಮತ್ತು ಮಧ್ಯಮ ನಗರ ಪ್ರದೇಶಗಳಲ್ಲಿ ಆರಂಭಿಸಿರುವ ನಗರ ಸಾರಿಗೆ ಸೇವೆಗೆ ಈ ಪ್ರಶಸ್ತಿ ಲಭಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka State Road Transport Corporation (KSRTC) has got international public transport award. KSRTC getting this award 4th time continuously.
Please Wait while comments are loading...