KSRTC ಸಂಚಾರ: 'ಈ' ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಬುಕ್ಕಿಂಗ್ ಪ್ರಾರಂಭ

ಬೆಂಗಳೂರು: ಮೇ 19: ಇಂದು ಬೆಳಗ್ಗೆಯಿಂದ ಕೆ.ಎಸ್.ಆರ್.ಟಿ.ಸಿ ಸಂಚಾರಕ್ಕೆ ಕರ್ನಾಟಕ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ. ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಮಾಡದ ಕೆ.ಎಸ್.ಆರ್.ಟಿ.ಸಿ ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಮಾತ್ರ ಸಂಚಾರ ನಡೆಸಲಿದೆ.

ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾದ ಪ್ರದೇಶಗಳಲ್ಲಿ ಬಸ್ ಸಂಚಾರ ಇರುವುದಿಲ್ಲ. ಸಿಬ್ಬಂದಿ ಮತ್ತು ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ವೈಯುಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಬೇಕಿದೆ.

ಒಂದು ಬಸ್ ನಲ್ಲಿ ಗರಿಷ್ಠ 30 ಮಂದಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದ್ದು, ಕೆ.ಎಸ್.ಆರ್.ಟಿ.ಸಿ ವೆಬ್ ಸೈಟ್ ಮೂಲಕ ಪ್ರಯಾಣಿಕರು ಟಿಕೆಟ್ ಬುಕ್ ಮಾಡಬಹುದು. ಸದ್ಯ ಟಿಕೆಟ್ ಬುಕ್ಕಿಂಗ್ ಆರಂಭಗೊಂಡಿದ್ದು, ಈ ಕೆಳಗಿನ ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಗಳನ್ನು ಮುಂಗಡವಾಗಿ ಕಾಯ್ದಿರಿಸಬಹುದು.

ಈ ಮಾರ್ಗಗಳ ಟಿಕೆಟ್ ಬುಕ್ಕಿಂಗ್ ಓಪನ್

ಈ ಮಾರ್ಗಗಳ ಟಿಕೆಟ್ ಬುಕ್ಕಿಂಗ್ ಓಪನ್

* ಬೆಂಗಳೂರು-ಶಿವಮೊಗ್ಗ

* ಶಿವಮೊಗ್ಗ-ಬೆಂಗಳೂರು

* ಬೆಂಗಳೂರು-ಚಿಕ್ಕಮಗಳೂರು

* ಚಿಕ್ಕಮಗಳೂರು-ಬೆಂಗಳೂರು

* ಬೆಂಗಳೂರು-ದಾವಣಗೆರೆ

* ದಾವಣಗೆರೆ-ಬೆಂಗಳೂರು

* ಬೆಂಗಳೂರು-ಮೈಸೂರು

* ಮೈಸೂರು-ಬೆಂಗಳೂರು

ಮಡಿಕೇರಿ, ಮಂಗಳೂರು, ಕುಂದಾಪುರಕ್ಕೂ ಟಿಕೆಟ್ ಬುಕ್ಕಿಂಗ್ ಓಪನ್

ಮಡಿಕೇರಿ, ಮಂಗಳೂರು, ಕುಂದಾಪುರಕ್ಕೂ ಟಿಕೆಟ್ ಬುಕ್ಕಿಂಗ್ ಓಪನ್

* ಬೆಂಗಳೂರು-ಮಡಿಕೇರಿ

* ಮಡಿಕೇರಿ-ಬೆಂಗಳೂರು

* ಬೆಂಗಳೂರು-ಮಂಗಳೂರು

* ಮಂಗಳೂರು-ಬೆಂಗಳೂರು

* ಬೆಂಗಳೂರು-ಕುಂದಾಪುರ

* ಕುಂದಾಪುರ-ಬೆಂಗಳೂರು

ಈ ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಬುಕ್ಕಿಂಗ್ ಓಪನ್

ಈ ಸ್ಥಳಗಳಿಗೆ ಪ್ರಯಾಣ ಮಾಡಲು ಟಿಕೆಟ್ ಬುಕ್ಕಿಂಗ್ ಓಪನ್

* ಬೆಂಗಳೂರು-ಹೊಸಪೇಟೆ

* ಹೊಸಪೇಟೆ-ಬೆಂಗಳೂರು

* ಬೆಂಗಳೂರು-ಬಳ್ಳಾರಿ

* ಬಳ್ಳಾರಿ- ಬೆಂಗಳೂರು

* ಬೆಂಗಳೂರು-ಹುಬ್ಬಳ್ಳಿ

* ಬೆಂಗಳೂರು-ಸಿರ್ಸಿ

* ಬೆಂಗಳೂರು-ರಾಯಚೂರು

* ಬೆಂಗಳೂರು-ಬೆಳಗಾವಿ

* ಬೆಂಗಳೂರು-ಧಾರವಾಡ

ಕೆ.ಎಸ್.ಆರ್.ಟಿ.ಸಿ ಮನವಿ

ಕೆ.ಎಸ್.ಆರ್.ಟಿ.ಸಿ ಮನವಿ

ಬಸ್ ನಿಲ್ದಾಣಗಳಲ್ಲಿ ಜನ ಸಂದಣಿ ಮತ್ತು ಕ್ಯೂ ನಲ್ಲಿ ಕಾಯುವುದನ್ನು ತಪ್ಪಿಸಲು ಆನ್ ಲೈನ್ ಮೂಲಕವೇ ಟಿಕೆಟ್ ಬುಕ್ ಮಾಡಲು ಪ್ರಯಾಣಿಕರಲ್ಲಿ ಕೆ.ಎಸ್.ಆರ್.ಟಿ.ಸಿ ಮನವಿ ಮಾಡಿದೆ. ಬಸ್ಸುಗಳು 50% ಆಸನಗಳ ಪ್ರಮಾಣದಲ್ಲಿ‌ ಕಾರ್ಯಚರಣೆ ಮಾಡುತ್ತಿರುವುದರಿಂದ ಅತ್ಯಧಿಕ ಬಸ್ಸುಗಳು‌ ಕಾರ್ಯಚರಣೆಗೆ ಅವಶ್ಯಕವಿದ್ದು, ಈ ಸಂಬಂಧ ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಿದ್ದಲ್ಲಿ, ಅವರ ಪ್ರಯಾಣವು ಸುಗಮವಾಗಿರಲಿದೆ ಎಂದು ಕೆ.ಎಸ್.ಆರ್.ಟಿ.ಸಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+