RTO: ಲಕ್ಷಾಂತರ ರೂ. ಹಣ ಜಮೆ ಮಾಡದ ಅಧಿಕಾರಿ ಅಮಾನತು, ಕ್ರಿಮಿನಲ್ ಕೇಸ್: ರಾಮಲಿಂಗಾ ರೆಡ್ಡಿ
ಬೆಂಗಳೂರು, ಜೂನ್ 09: ರಾಜ್ಯದಲ್ಲಿ ಉತ್ತಮ ಸಾರಿಗೆ ಸೇವೆ ನೀಡುತ್ತಿರುವ, ಪ್ರಯಾಣಿಕರಿಗಾಗಿ ಹೊಸ ಹೊಸ ಬಸ್‌ಗಳನ್ನು ಪರಿಚಯಿಸುತ್ತಿರುವ ಬಳ್ಳಾರಿ ಪ್ರಾದೇಶಿಕ ಸಾರಿಗೆ ಇಲಾಖೆ (RTO Bellary) ಇತ್ತೀಚೆಗೆ ಕೆಲವು ಅಪರಾಧ ವಿಚಾರಗಳಿಗೆ ಸುದ್ದಿಯಾಗುತ್ತಿದೆ. ಇದೀಗ ಸಾರಿಗೆ ಇಲಾಖೆಯ ಟ್ರೆಜರಿ ಯಲ್ಲಿ ಹಣ ಜಮೆ ಮಾಡದ ಅಧಿಕಾರಿಯನ್ನು ಅಮಾನತು ಮಾಡಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಹೌದು, ಬಳ್ಳಾರಿ ಸಾರಿಗೆ ಘಟಕ ವ್ಯಾಪ್ತಿಯಲ್ಲಿ ಇಲಾಖೆ ಯಲ್ಲಿ ಲಕ್ಷಾಂತರ ರೂಪಾರಿ ಹಣ ಟ್ರೆಜರಿಯಲ್ಲಿ ಜಮಾ ಆಗಿರಲಿಲ್ಲ. ಒಂದು ವಾರದಿಂದ ಹಣ ಜಮೆ ಆಗದ ಕಾರಣಕ್ಕೆ ಸಾರಿಗೆ ಇಲಾಖೆ ಮತ್ತು ಸಚಿವರ ಗಮನಕ್ಕೆ ತರಲಾಗಿತ್ತು. ಹೀಗಾಗಿ ಹಣ ಜಮೆ ಮಾಡದ ಅಧಿಕಾರಿ ರವಿ ತವರಕೆರೆ ಅವರನ್ನು ಅಮಾನತು ಮಾಡಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ರಾಮಲಿಂಗಾ ರೆಡ್ಡಿ ಆದೇಶಿಸಿದ್ದಾರೆ. ಈ ರವಿ ತವರಕೆರೆ ಅವರು ಬಳ್ಳಾರಿ ಭಾಗದ ಹಣಕಾಸು ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಬಳ್ಳಾರಿ ಪ್ರಾದೇಶಿಕ ಸಾರಿಗೆ ಇಲಾಖೆ ಯಲ್ಲಿ ಸರ್ಕಾರದ ಖಜಾನೆ ಗೆ ಜಮಾ ಮಾಡಬೇಕಾಗಿದ್ದ ಲಕ್ಷಾಂತರ ಹಣ ಒಂದು ವಾರದಿಂದ ಜಮಾ ಮಾಡಿಲ್ಲದಿದ್ದರೂ ಸಾರಿಗೆ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಬಗ್ಗೆ ಸಲ್ಲಕೆಯಾದ ದೂರಿಗೆ ಸಾರಿಗೆ ಸಚಿವರು ಪ್ರತಿಕ್ರಿಯಿಸಿದರು. ಸಚಿವರು ಕೂಡಲೇ ಸದರಿ ಸಿಬ್ಬಂದಿಯನ್ನು ಅಮಾನತು ಮಾಡಿ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು, ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಎಚ್ಚರಕೆ ವಹಿಸುವಂತೆ ಅವರು ಸಾರಿಗೆ ಆಯುಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಪಾನ್ ಸಂಸ್ಥೆ ಕರ್ನಾಟಕ ಸಾರಿಗೆ ಇಲಾಖೆ ಭೇಟಿ
ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (JICA)ಯ ನಿಯೋಗವು ಇತ್ತೀಚೆಗೆ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಗೆ ಭೇಟಿ ನೀಡಿತ್ತು. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು JICA ಮುಖ್ಯಸ್ಥ ಯುಶಿ ನಾಗಾನೊ ಅವರು ಭೇಟಿ ಮಾಡಿ ಮಹತ್ವದ ವಿಚಾರಗಳನ್ನು ಚರ್ಚಿಸಿದರು.
ಸಾರಿಗೆಯಲ್ಲಿ ಡಿಜಿಟಲ್ ಲೀಪ್ ಮುಕ್ತ ಡೇಟಾ ಏಕೀಕರಣ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಗುರಿಯಾಗಿಟ್ಟುಕೊಂಡು ಸಾರಿಗೆ ತಂತ್ರಜ್ಞಾನ ಸ್ಟ್ಯಾಕ್ ಅನ್ನು ಅಭಿವೃದ್ಧಿಪಡಿಸಲು ಕರ್ನಾಟಕ ಸಾರಿಗೆ ಇಲಾಖೆ JICA ಜೊತೆ ಪಾಲುದಾರಿಕೆಯ ಗುರಿ ಹೊಂದಿದೆ.
JICA ಮತ್ತು DxLab ಬೆಂಬಲದೊಂದಿಗೆ ಡೇಟಾ-ಚಾಲಿತ ಚಲನಶೀಲತೆ ಆಧಾರದಲ್ಲಿ ಕರ್ನಾಟಕ ಸಾರಿಗೆ ಇಲಾಖೆ ನೈಜ-ಸಮಯದ ಒಳನೋಟಗಳು, ಮುಕ್ತ API ಮತ್ತು ವರ್ಧಿತ ಸಾರ್ವಜನಿಕ ಸೇವಾ ವಿತರಣೆಗಾಗಿ ಭವಿಷ್ಯದ ದೃಷ್ಟಿಯಿಂದ ಸ್ಟ್ಯಾಕ್ ಅನ್ನು ನಿರ್ಮಿಸುವ ಪ್ಲಾನ್ ಮಾಡಿಕೊಂಡಿದೆ. ನಾಗರಿಕರು, ಸ್ಟಾರ್ಟ್‌ಅಪ್‌ಗಳು ಮತ್ತು ನೀತಿ ನಿರೂಪಕರಿಗೆ ಸಮಾನವಾಗಿ ಅಧಿಕಾರ ನೀಡುವ ಸಾರಿಗೆ ಸ್ಟ್ಯಾಕ್ ಅನ್ನು ರಚಿಸಲು ಕರ್ನಾಟಕ JICA ಜೊತೆ ದಿಟ್ಟ ಹೆಜ್ಜೆ ಇಟ್ಟಿದೆ. ನಾವೀನ್ಯತೆ ಚಲನೆಯಲ್ಲಿ ದಕ್ಷತೆ ಹೊಸ ಸಾರಿಗೆ ಸ್ಟ್ಯಾಕ್ ಕಾರ್ಯಾಚರಣೆಗಳನ್ನು ಸುಗಮಗೊಳಿಸುವ ವಿಧಾನಗಳನ್ನು ರಾಜ್ಯ ಸಾರಿಗೆ ಇಲಾಖೆ ಅನುಸರಿಲಿದೆ ಎಂಬುದು ಈ ಭೇಟಿಯ ನಂತರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications