KSRTC New Busstand: ಮಲೆನಾಡಿನ ಪ್ರಯಾಣಿಕರಿಗೆ ಸಚಿವ ರಾಮಲಿಂಗಾ ರೆಡ್ಡಿ ಗುಡ್ ನ್ಯೂಸ್
KSRTC Busstand: ಕರ್ನಾಟಕದ ವಿವಿಧ ಜಿಲ್ಲೆಗಳು, ತಾಲೂಕು ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನೂತನ ಘಟಕ, ಸಿಬ್ಬಂದಿ ವಸತಿ ಗೃಹ, ಡಿಪೋ ನಿರ್ಮಾಣಕ್ಕೆ ಈಗಾಗಲೇ ಶಂಕುಸ್ಥಾಪನೆ ಮಾಡಲಾಗಿದೆ. ಕೆಲವೆಡೆ ಯೋಜನೆ ಲೋಕಾರ್ಪಣೆ ಮಾಡಿದ್ದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಚಿಕ್ಕಮಗಳೂರಿನ ಜನರಿಗೂ ಗುಡ್ ನ್ಯೂಸ್ ನೀಡಿದ್ದಾರೆ.
ದಾವಣಗೆರೆಯ ಚೆನ್ನಗಿರಿ, ಕಲ್ಯಾಣ ಕರ್ನಾಟಕದ ಆಳಂದ ಸೇರಿದಂತೆ ವಿವಿಧೆಡೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ನಿಲ್ದಾಣ, ವಸತಿ ಗೃಹ ಲೋಕಾರ್ಪಣೆ ಮಾಡಿತ್ತು. ಕೆಲವೆಡೆ ಹೊಸ ಯೋಜನೆಗಳಿಗೆ ಪೂಜೆ ನೆರವೇರಿ, ಬಸ್‌ಗಳಿಗೆ ಚಾಲನೆ ನೀಡಲಾಗಿತ್ತು. ಸಾರಿಗೆ ಯೋಜನೆಗಳ ಮುಂದುವರಿದ ಭಾಗವಾಗಿ ಮಲೆನಾಡಿನ ಚಿಕ್ಕಮಗಳೂರಿನಲ್ಲಿ ನೂತನವಾಗಿ ನಿರ್ಮಿಸಲಿರುವ ಬಸ್ ನಿಲ್ದಾಣಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಜೊತೆಗೆ ಸಿಬ್ಬಂದಿ ನೂತನ ವಸತಿ ಗೃಹಗಳಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಬಸ್ ನಿಲ್ದಾಣ ಆಗಬೇಕೆನ್ನುವುದು ಬಹಳ ಹಿಂದಿನಿಂದಲೂ ಬೇಡಿಕೆಯಿತ್ತು. 2025ರಲ್ಲಿ ಅಂದಾಜು 19.87 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಎಕರೆ 20 ಗುಂಟೆ ನಿವೇಶನದಲ್ಲಿ ಆಧುನಿಕ ಬಸ್ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಚಿಕ್ಕಮಗಳೂರು ಸಾರಿಗೆ ವಿಭಾಗಕ್ಕೆ ಸೇರಿರುವ ಪ್ರಮುಖ ಸ್ಥಳಗಳಿಗೆ ಸಮಗ್ರ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಅರಸೀಕೆರೆಯಲ್ಲಿ 01 ಎಕರೆ 7.5 ಗುಂಟೆ ವಿಸ್ತೀರ್ಣದಲ್ಲಿ 1,958 ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣದ ನಿರ್ಮಾಣಕ್ಕೆ 2025 ರಂದು ಜುಲೈ 26 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿದರು.

ಅದೇ ರೀತಿ ಕಡೂರು ಬಸ್ ನಿಲ್ದಾಣ 2 ಎಕರೆ 30 ಗುಂಟೆ ವಿಸ್ತೀರ್ಣದಲ್ಲಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಹಾಗೂ ತರೀಕೆರೆ ಬಸ್ ನಿಲ್ದಾಣ 02 ಎಕರೆ 16 ಗುಂಟೆ 9.15 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ಹಾಕಲಾಗಿದೆ.
ಕಡೂರು ಬಸ್ ಘಟಕದ ನಿವೇಶನದಲ್ಲಿ ನಿರ್ಮಿಸಿರುವ 1.23 ಕೋಟಿ ರೂಪಾಯಿ ವೆಚ್ಚದ ವಸತಿ ಗೃಹ ಉದ್ಘಾಟಿಸಲಾಗಿದೆ. ಚಿಕ್ಕಮಗಳೂರಿನಲ್ಲಿ ರೂ 2.30 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಒಂದು ಬಿ ಎಚ್ ಕೆ ಮೂರು ಅಂತಸ್ತಿನ ಸಿಬ್ಬಂದಿ ವಸತಿಗೃಹಗಳನ್ನು ಸಹ ನವೆಂಬರ್ 18 ರಂದು ಉದ್ಘಾಟಿಸಲಾಗಿದೆ. ನೌಕರರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಪ್ರಸಕ್ತ ವರ್ಷ ಹೊಸದಾಗಿ 2,000 ಬಸ್ಸುಗಳನ್ನು ಸೇರ್ಪಡೆಗೊಳಿಸಲು ನಾಲ್ಕು ನಿಗಮಗಳಿಗೆ ಅನುಮೋದನೆ ನೀಡಲಾಗಿದೆ. ಅದರಲ್ಲಿ 900 ಬಸ್ಸುಗಳನ್ನು ಕೆ ಎಸ್ ಆರ್ ಟಿ ಸಿ ಗೆ ನೀಡಲಾಗಿದೆ. ನಿಗಮದ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಿಗೆ ಸದರಿ ಬಸ್ಸುಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಚಿಕ್ಕಮಗಳೂರು ವಿಭಾಗಕ್ಕೆ ಸಹ ಹೊಸ ಬಸ್ಸುಗಳನ್ನು ನೀಡಲಾಗುವುದು ಎಂದರು.
ಕರ್ನಾಟಕದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ 600 ಕೋಟಿ ಮಹಿಳಾ ಟಿಕೇಟ್ ವಿತರಣೆಯಾಗಿ ಹೊಸ ಮೈಲಿಗಲ್ಲನ್ನು ದಾಖಲಿಸಿದೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಶಾಸಕರಾದ ಟಿ.ಡಿ.ರಾಜೇಗೌಡ, ಹೆಚ್.ಡಿ. ತಮ್ಮಯ್ಯ ಮತ್ತಿತರರು, ಅಧಿಕಾರಿಗಳು ಸಾಕ್ಷಿಯಾದರು.












Click it and Unblock the Notifications