ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯು ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಬಸ್ ಪಾಸ್!

By Nayana
|
Google Oneindia Kannada News

ಬೆಂಗಳೂರು, ಮೇ.4: ಈ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯು ತರಗತಿಗಳು ಮೇ ತಿಂಗಳಲ್ಲೇ ಆರಂಭವಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ವಿದ್ಯಾರ್ಥಿಗಳಿಗೆ ಪಾಸ್ ವಿತರಣೆ ವಿಚಾರದಲ್ಲಿ ನಿಗಮಗಳು ಗೊಂದಲಕ್ಕೆ ಸಿಲುಕಿದ್ದು ತರಗತಿಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ತಾತ್ಕಾಲಿಕ ಪಾಸ್ ನೀಡಲು ಚಿಂತನೆ ನಡೆಸಿವೆ. ಜೂನ್ ಬದಲಾಗಿ ಮೇ ತಿಂಗಳಲ್ಲೇ ದ್ವಿತೀಯ ಪಿಯು ತರಗತಿಗಳು ಪ್ರಾರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು.

ಮೇ ತಿಂಗಳು ಪಿಯು ವಿದ್ಯಾರ್ಥಿಗಳು ಬಸ್‌ಪಾಸ್‌ ಇಲ್ಲದೆ ಪ್ರಯಾಣಿಸಬೇಕು! ಮೇ ತಿಂಗಳು ಪಿಯು ವಿದ್ಯಾರ್ಥಿಗಳು ಬಸ್‌ಪಾಸ್‌ ಇಲ್ಲದೆ ಪ್ರಯಾಣಿಸಬೇಕು!

ಪ್ರಸಕ್ತ ವರ್ಷದ ಆಯವ್ಯಯದಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಸಾರಿಗೆ ನಿಗಮ ಬಜೆಟ್‌ನಲ್ಲಿ ಘೋಷಿಸಿದಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ನೀಡುವ ಸಂಬಂಧ ಇದುವರೆಗೆ ರಾಜ್ಯ ಸರ್ಕಾರ ಯಾವುದೇ ಆದೇಶ ಹೊರಡಿಸಿಲ್ಲ. ಸರ್ಕಾರದ ಆದೇಶವಿಲ್ಲದೆ ಉಚಿತ ಬಸ್‌ಪಾಸ್ ನೀಡಲು ಸಾಧ್ಯವಿಲ್ಲ ಎಂದಿತ್ತು.

KSRTC may issue temporary bus for PUC student

ಇದಕ್ಕೆ ಪೂರಕವಾಗಿ ಮೇ ತಿಂಗಳಲ್ಲೇ ಪಾಸ್ ವಿತರಿಸಲು ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿತ್ತು. ಚುನಾವಣಾ ಪ್ರಕ್ರಿಯೆಗಳಲ್ಲೇ ಅಧಿಕಾರಿಗಳು ಮಗ್ನರಾಗಿರುವುದರಿಂದ ಸರ್ಕಾರಿ ಕೆಲಸವೇ ಆಮೆಗತಿಯಲ್ಲಿ ಸಾಗಿದೆ. ಪಾಸ್ ವಿಚಾರದಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರ ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಆದೇಶ ಹೊರಡಿಸುವಂತೆ ಕೋರಿ ಸರ್ಕಾರಕ್ಕೆ ನಿಗಮಗಳು ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದ್ದರಿಂದ ಪಿಯು ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಬಸ್ ಪಾಸ್ ನೀಡಲು ನಿಗಮ ಚಿಂತನೆ ನಡೆಸಿದೆ.

English summary
KSRTC will take decision on Friday in a meeting of all its corporation to distribute temporary bus pass to PUC students for the month of May.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X