ಬಸ್ಸಿನಲ್ಲೇ ಆಹಾರ, ಟಾಯ್ಲೆಟ್; ರಸ್ತೆಗಿಳಿದ ಐಶಾರಾಮಿ 'ಐರಾವತ'
ಬೆಂಗಳೂರು, ಸೆಪ್ಟೆಂಬರ್ 27: ಐಶಾರಾಮಿ 6 ಐರಾವತ ಬಸ್ಸುಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ ಟಿಸಿ) ರಸ್ತೆಗಿಳಿಸಿದೆ. ಈವರೆಗೆ ಬಂದಿರುವ ಎಲ್ಲಾ ಬಸ್ಸುಗಳಿಗಿಂತ ಈ ಬಸ್ಸುಗಳು ದುಬಾರಿಯಾಗಿದ್ದು, ಐಶಾರಾಮಿ ಸೌಲಭ್ಯಗಳನ್ನು ಪ್ರಯಾಣಿಕರಿಗೆ ನೀಡಲಿವೆ.
ಇವು ಮಲ್ಟಿ ಆಕ್ಸೆಲ್ ವೋಲ್ವೋ ಬಸ್ಸುಗಳಾಗಿದ್ದು, ಬಸ್ಸಿನಲ್ಲೇ ಶೌಚಾಲಯ ಮತ್ತು ಆಹಾರ ಸರಬರಾಜು ವ್ಯವಸ್ಥೆಯನ್ನು ಒಳಗೊಂಡಿದೆ.

ಬಸ್ಸಿನಲ್ಲಿ ಕೆಮಿಕಲ್ ಟಾಯ್ಲೆಟ್ ಗಳು ಇರಲಿವೆ. ಕೇವಲ ರಾಸಾಯನಿಕ ಶೌಚಾಲಯಗಳಿರುವ ಬಸ್ಸುಗಳಿಗೆ ಐರಾವತ ಸುಪೇರಿಯಾ ಎಂದು ಹೆಸರಿಡಲಾಗಿದೆ. ಟಾಯ್ಲೆಟ್ ಜತೆಗೆ ಆಹಾರ ಸರಬರಾಜು ವ್ಯವಸ್ಥೆ ಇರುವ ಬಸ್ಸುಗಳಿಗೆ ಐರಾವತ ಬ್ಲಿಸ್ ಎಂದು ಹೆಸರಿಡಲಾಗಿದೆ.
ವಿಮಾನ ಮತ್ತು ಐಶಾರಾಮಿ ರೈಲುಗಳಲ್ಲಿರುವಂತೆ ಸೀಟಿನ ಹಿಂಬಾಗ ಎಲ್ಇಡಿ ಪರದೆ ಇರಲಿದೆ. ಇದರಲ್ಲಿ ತಮ್ಮಿಷ್ಟದ ಮನರಂಜನೆಯನ್ನು ಪ್ರಯಾಣಿಕರು ಪಡೆಯಬಹುದಾಗಿದೆ. ಇನ್ನು ವೈಫೈ ಸೌಲಭ್ಯವೂ ಬಸ್ ನಲ್ಲಿ ಇದೆ.












Click it and Unblock the Notifications