ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸಿಕ್‌ಗೆ ಬಸ್ ಸೇವೆ ಆರಂಭಿಸಿದ ಕೆಎಸ್ಆರ್‌ಟಿಸಿ

|
Google Oneindia Kannada News

ಬೆಂಗಳೂರು, ಜುಲೈ 28 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ಮಹಾರಾಷ್ಟ್ರದ ನಾಸಿಕ್‌ಗೆ ಮತ್ತು ಪೀಣ್ಯ ಬಸ್ ನಿಲ್ದಾಣದಿಂದ ಮೈಸೂರಿಗೆ ನೂತನ ಬಸ್ ಸೇವೆಗಳನ್ನು ಆರಂಭಿಸಲಿದೆ. ಜುಲೈ 31ರಿಂದ ಈ ಬಸ್‌ ಸೇವೆಗಳು ಆರಂಭವಾಗಲಿವೆ.

ಬೆಂಗಳೂರು-ಪುಣೆ ಮಾರ್ಗದ ಮೂಲಕ ಕೆಎಸ್ಆರ್‌ಟಿಸಿಯ ಮಲ್ಟಿ ಎಕ್ಸೆಲ್ ವೊಲ್ವೋ ಬಸ್ ನಾಸಿಕ್ ತಲುಪಲಿದೆ. ನಾಸಿಕ್‌ನಿಂದ ಹೊರಡುವ ಬಸ್ ಇದೇ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗಲಿದೆ. ಜುಲೈ 31ರಿಂದ ಬಸ್ ಸಂಚಾರ ನಡೆಸಲಿದ್ದು, 1,220 ರೂ. ಪ್ರಯಾಣ ದರ ನಿಗದಿ ಪಡಿಸಲಾಗಿದೆ. [ksrtc ವೆಬ್ ಸೈಟ್]

ksrtc

ಪ್ರತಿದಿನ ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಿಂದ ಹೊರಡುವ ಬಸ್ ಮರುದಿನ ಬೆಳಗ್ಗೆ 10.45ಕ್ಕೆ ನಾಸಿಕ್ ತಲುಪಲಿದೆ. ಮಧ್ಯಾಹ್ನ 1 ಗಂಟೆಗೆ ನಾಸಿಕ್‌ನಿಂದ ಹೊರಡುವ ಬಸ್ ಮರುದಿನ ಬೆಳಗ್ಗೆ 9.45ಕ್ಕೆ ಬೆಂಗಳೂರಿಗೆ ವಾಪಸ್ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ 080-44554422 ನಂಬರ್‌ಗೆ ಕರೆ ಮಾಡಬಹುದಾಗಿದೆ. [ಮಂಗಳೂರು-ಮುಂಬೈ ಐರಾವತ ಬಸ್ ಸೇವೆ ಸ್ಥಗಿತ]

ಮೈಸೂರಿಗೆ ವೇದದೂತ ಬಸ್ : ಪೀಣ್ಯದಲ್ಲಿರುವ ಬಸವೇಶ್ವರ ಬಸ್ ನಿಲ್ದಾಣದಿಂದ ಕೆಎಸ್ಆರ್‌ಟಿಸಿ ಮೈಸೂರಿಗೆ ನೂತನ ವೇಗದೂತ ಬಸ್ ಸೇವೆ ಆರಂಭಿಸಲಿದೆ. ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 8 ಗಂಟೆಯ ತನಕ ಎರಡು ಗಂಟೆಗೊಮ್ಮೆ ಬಸ್ಸುಗಳು ಸಂಚಾರ ನಡೆಸಲಿವೆ.

ಪೀಣ್ಯದಿಂದ ಹೊರಡುವ ಬಸ್ ಗೊರಗುಂಟೆಪಾಳ್ಯ, ರಿಂಗ್ ರಸ್ತೆ, ಕೊಟ್ಟಿಗೆ ಪಾಳ್ಯ, ಅಂಬೇಡ್ಕರ್ ಕಾಲೇಜು ಮತ್ತು ಕೆಂಗೇರಿ ಸ್ಯಾಟಲೈಟ್ ಬಸ್ ನಿಲ್ದಾಣದ ಮೂಲಕ ಸಂಚಾರ ನಡೆಸಲಿದೆ. ಈ ಬಸ್ ಸೇವೆಯೂ ಜುಲೈ 31ರಿಂದ ಆರಂಭವಾಗಲಿದೆ.

English summary
KSRTC will introduce Volvo bus services on Bengaluru-Pune-Nasik route from July 31. The bus will leave Bengaluru at 2 pm and reach Nasik at 10.45 am next day. The journey costs Rs 1,220 one way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X