KSRTC ಗುಡ್ ನ್ಯೂಸ್: ಬೆಂಗಳೂರು-ಶಬರಿಮಲೆಗೆ ವಿಶೇಷ ವೊಲ್ವೋ ಬಸ್ ಸೇವೆ, ಯಾವಾಗ? ಟಿಕೆಟ್ ದರ, ವೇಳಾಪಟ್ಟಿ
ಬೆಂಗಳೂರು, ನವೆಂಬರ್ 11: ಶಬರಿಮಲೆಗೆ ಮಾಲೆ ಹಾಕಿ ತೆರಳುವ ಹಾಗೂ ದೇವರ ದರ್ಶನಕ್ಕೆ ತೆರಳುವ ಸಾಮಾನ್ಯ ಭಕ್ತರು ಸೇರಿದಂತೆ ಸಾರ್ವಜನಿಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಗುಡ್ ನ್ಯೂಸ್ ನೀಡಿದೆ. ಬೆಂಗಳೂರಿನಿಂದ ಬೆಂಗಳೂರು-ನೀಲಕ್ಕಲ್ (ಪ್ರಂಪಾ-ಶಬರಿಮಲೆ) ಮಾರ್ಗದಲ್ಲಿ ವಿಶೇಷ ವೋಲ್ವೋ ಬಸ್ ಸೇವೆ ಪರಿಚಯಸಿದೆ. ಯಾವಾಗಿನಿಂದ, ಟಿಕೆಟ್ ದರ ಮತ್ತು ಪೂರ್ತಿ ವೇಳಾಪಟ್ಟಿ ಮಾಹಿತಿ ಇಲ್ಲಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ವಿಭಾಗದಿಂದ ಶಬರಿಮಲೆ ಪ್ರಯಾಣಿಕರ ಅನುಕೂಲಕ್ಕಾಗಿ ಇದೇ ನವೆಂಬರ್ 28 ರಿಂದ ಬೆಂಗಳೂರು-ನೀಲಕ್ಕಲ್ (ಪಂಪಾ-ಶಬರಿಮಲೆ) ಮಾರ್ಗದಲ್ಲಿ ವಿಶೇಷ KSRTC ವೊಲ್ವೋ ಬಸ್ ಓಡಿಸಲು ನಿರ್ಧರಿಸಿದೆ. ಈ ಸೇವೆಯಿಂದ ಬೆಂಗಳೂರಿನ ದೈನಂದಿನ ಸಂಚಾರದ ಭಾರವನ್ನು ಕಡಿಮೆ ಆಗುತ್ತದೆ. ಹಾಲಿ ಬಸ್‌ಗಳ ಮೇಲೆ ಪ್ರಯಾಣಿಕರ ಒತ್ತಡ ಇಳಿಕೆಯಾಗಲಿದೆ.

ಬೆಂಗಳೂರು-ನೀಲಕ್ಕಲ್ ವಿಶೇಷ KSRTC ವೊಲ್ವೋ ಬಸ್ ಮೈಸೂರು, ಕ್ಯಾಲಿಕಟ್, ಗುರುವಾಯೂರು, ತ್ರಿಶೂರು, ಅಂಗಾಮಲೈ, ಕೊಟ್ಟಾಯಂ, ಏರುಮಲೈ ಮಾರ್ಗವಾಗಿ ಸಂಚಾರ ಸೇವೆ ನೀಡುತ್ತದೆ. ಈ ಬಸ್ ವೇಳಾಪಟ್ಟಿ ಹೀಗಿದೆ.
KSRTC ಶಬರಿಮಲೆ ಬಸ್ ವೇಳಾಪಟ್ಟಿ
* ಬೆಂಗಳೂರು-ನೀಲಕ್ಕಲ್ (ಪ್ರಂಪಾ-ಶಬರಿಮಲೆ) ಮಾರ್ಗದಲ್ಲಿ ಬಸ್ ಸೇವೆ
* ಆರಂಭ ದಿನಾಂಕ: ಇದೇ 28 ನವೆಂಬರ್ 2025
* ಬೆಂಗಳೂರು ನಿಲ್ದಾಣದಿಂದ ಹೊರಡುವ ಸಮಯ: ಮಧ್ಯಾಹ್ನ 13:50
* ಮಧ್ಯಂತರ ನಿಲ್ದಾಣ ಹೊಸೂರು
* ನೀಲಕ್ಕಲ್ (ಪ್ರಂಪಾ-ಶಬರಿಮಲೆ) ತಲುಪುವ ಸಮಯ: ಬೆಳಗ್ಗೆ 06:45
* ನೀಲಕ್ಕಲ್ ನಿಂದ ಹಿಂತಿರುಗುವ ಸಮಯ: ಸಂಜೆ 18:00 ಗಂಟೆ
* ಬೆಂಗಳೂರು ಬಂದು ಸೇರುವ ಸಮಯ: ಬೆಳಿಗ್ಗೆ 10:00
ಬಸ್ ಟಿಕೆಟ್ ದರ ಎಷ್ಟು?
KSRTC ಬೆಂಗಳೂರು-ನೀಲಕ್ಕಲ್ (ಪ್ರಂಪಾ-ಶಬರಿಮಲೆ) ಮಾರ್ಗದಲ್ಲಿ ಸೇವೆ ನೀಡುವ ವೊಲ್ವೋ ಬಸ್ ತಲಾ ಒಬ್ಬರಿಗೆ 1950 ರೂಪಾಯಿ ನಿಗದಿ ಮಾಡಿದೆ. ಈ ಬಸ್ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಡಲಿದೆ. ಈ ಸೇವೆಯಿಂದ ನೀಲಕ್ಕಲ್ ಪ್ರದೇಶದ ವಿದ್ಯಾರ್ಥಿಗಳು ಹಾಗೂ ದೈನಂದಿನ ಪ್ರಯಾಣಿಕರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ.












Click it and Unblock the Notifications