KSRTC: ಪ್ರಯಾಣಿಕರ ಗಮನಕ್ಕೆ: ಬಸ್ ದರದಲ್ಲಿ ರೌಂಡಪ್ ವ್ಯವಸ್ಥೆ, ಬಿಗ್ ಅಪ್ಡೇಟ್...
ಬಸ್ಸುಗಳ ಪ್ರಯಾಣ ದರದಲ್ಲಿ ರೌಂಡಪ್ ಮಾಡುತ್ತಿರುವ ವ್ಯವಸ್ಥೆಯ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ( KSRTC) ಬಿಗ್ ಅಪ್ಡೇಟ್ ನೀಡಿದೆ. ನಿತ್ಯ ಪ್ರಯಾಣಿಸುವ ಪುರುಷ ಪ್ರಯಾಣಿಕರಿಗೆ ಈ ಸುದ್ದಿ ಸಂಬಂಧಿಸಿದ್ದಾಗಿದೆ. ಹಾಗಾದ್ರೆ ಟಿಕೆಟ್ ದರ ಹೆಚ್ಚಾಯಿತೇ?..
ಸದರಿ ಟಿಕೆಟ್ ಹಣದ ರೌಂಡಪ್ ವ್ಯವಸ್ಥೆಯು ಪ್ರತಿಷ್ಟಿತ ಸಾರಿಗೆಗಳಲ್ಲಿ ಅಂದರೆ Premium Service buses 400 ಬಸ್ಸುಗಳಲ್ಲಿ ಮಾತ್ರ ಜಾರಿಯಲ್ಲಿರುತ್ತದೆ. ಅದನ್ನು ಸ್ಥಗಿತಗೊಳಿಸಲಾಗಿದೆ. ಯಾರೆಲ್ಲ ಐಶಾರಾಮಿ ಬಸ್ ಸಂಚಾರ ಮಾಡುತ್ತಿರೋ ಅವರಿಗೆ ಅನ್ವಯಿಸಲಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಮಾಹಿತಿ ನೀಡಿದ್ದಾರೆ..

ಪ್ರೀಮಿಯಂ ಬಸ್ ಟಿಕೆಟ್ ವ್ಯವಸ್ಥೆ ಪೈಕಿ, ಅದರಲ್ಲೂ ETM ಮತ್ತು ಅವತಾರ್ ಕೌಂಟರ್ ಗಳಲ್ಲಿ ಪಡೆಯುವ ಟಿಕೇಟ್ ಗೆ ಮಾತ್ರ ಈ ವ್ಯವಸ್ಥೆ ಜಾರಿಯಲ್ಲಿತ್ತು. ಅಂದರೆ ಉದಾ: ಪ್ರಯಾಣ ದರ ರೂ.101 ರಿಂದ 105 ರವರೆಗೂ ಇದ್ದಲ್ಲಿ ರೂ.100 ಪ್ರಯಾಣಿಕರಿಂದ ಪಡೆಯಲಾಗುತ್ತದೆ. ಅದೇ ರೀತಿ ರೂ.106 ರಿಂದ ರೂ.109 ಇದ್ದಲ್ಲಿ ಪ್ರಯಾಣಿಕರಿಂದ ರೂ.110 ಪಡೆಯಲಾಗುತ್ತಿತ್ತು.
ಇದೀಗ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ನಿಗಮದಲ್ಲಿ (KSRTC) UPI ಯಶಸ್ವಿ ಅನುಷ್ಟಾನವಾಗಿರುವುದರಿಂದ ರೌಡಂಪ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಚರ್ಚಿಸಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಇದೇ ವಿಚಾರವಾಗಿ ಸಾರಿಗೆ ಇಲಾಖೆಯ ಸಂಬಂಧಿಸಿದ ತಂತ್ರಾಂಶದಲ್ಲಿ ಒಂದಷ್ಟು ಬದಲಾವಣೆ ಮಾಡುವ ಕ್ರಮ ಪ್ರಗತಿಯಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
KSRTC ಟೂರ್ ಪ್ಯಾಕೇಟ್ ಘೋಷಣೆ
ಇತ್ತಿಚೆಗೆ ಕೆಎಸ್ ಆರ್ಟಿಸಿ ಬಸ್ ಕೋಲಾರ ವ್ಯಾಪ್ತಿಯ ಏಳು ಧಾರ್ಮಿಕ ಸ್ಥಳಗಳಿಗೆ ವಿಶೇಷ ಟೂರ್ ಪ್ಯಾಕೇಟ್ ಘೋಷಣೆ ಮಾಡಿದೆ. ವಾರಾಂತ್ಯಕ್ಕೆ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಈ ಪ್ರವಾಸ ಸೇವೆ ಆರಂಭಿಸಿತ್ತು. ಒಂದು ದಿನದ ಪ್ರವಾಸ ಇದಾಗಿದ್ದು, ಬೆಳಗ್ಗೆ ಕೆಂಪೇಗೌಡ ಬಸ್ ನಿಲ್ದಾಣ ಮೆಜೆಸ್ಟಿಕ್ ನಿಂದ ತೆರಳಿ ರಾತ್ರಿ ಮರಳಿ ಬರಲಿದೆ.
ಇನ್ನು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಉದ್ದೇಶಿತ ಒಟ್ಟು 8000 ನೇಮಕಾತಿ ಪೈಕಿ, ಸುಮಾರು ಎರಡು ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಅವರಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ನೇಮಕಾತಿ ಆದೇಶ ವಿವರಿಸಿದರು.












Click it and Unblock the Notifications