ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರಿ ಬಸ್ ಪ್ರಯಾಣ ದರ ಏರಿಕೆಗೆ ಸಿದ್ದರಾಗಿ

By Manjunatha
|
Google Oneindia Kannada News

Recommended Video

ಸದ್ಯದಲ್ಲೇ ಕೆ ಎಸ್ ಆರ್ ಟಿ ಸಿ ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ | Oneindia Kannada

ಬೆಂಗಳೂರು, ಜೂನ್ 05: ಇಂಧನ ಬೆಲೆ ದಿನೇ-ದಿನೇ ಏರಿಕೆ ಕಾಣುತ್ತಿರುವ ಕಾರಣ ಕೆಎಸ್‌ಆರ್‌ಟಿಸಿಯು ಪ್ರಯಾಣ ದರ ಏರಿಕೆಯನ್ನು ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ.

ಡೀಸೆಲ್ ಬೆಲೆ ಲೀಟರ್‌ಗೆ ರೂ.70ರ ಗಡಿ ದಾಟಿದೆ. ಪ್ರತಿದಿನ ಸುಮಾರು ರೂ 70 ಲಕ್ಷಕ್ಕೂ ಹೆಚ್ಚು ಹಣ ಡೀಸೆಲ್‌ಗೆ ಖರ್ಚಾಗುತ್ತಿದೆ ಹಾಗಾಗಿ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದು ಸಾರಿಗೆ ನಿಗಮ ಮಂಡಳಿ ಹೇಳುತ್ತಿದೆ. ಹಾಗಾಗಿ ಬೆಲೆ ಏರಿಕೆ ಪ್ರಸ್ತಾವ ಸಿದ್ಧಪಡಿಸಿ ಸರ್ಕಾರದ ಅನುಮತಿಗೆ ಕಳುಹಿಸಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಮೊದಲ ರಾಜ್ಯ ಕೇರಳ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿದ ಮೊದಲ ರಾಜ್ಯ ಕೇರಳ

ಸಗಟು ಖರೀದಿಯಿಂದಾಗಿ ಇಂಧನದ ಮೇಲೆ 2 ರೂಪಾಯಿ ರಿಯಾಯಿತಿಯನ್ನು ಸಾರಿಗೆ ಇಲಾಖೆ ಪಡೆಯುತ್ತಿದೆ ಆದರೂ ಸಹ ಇಂಧನ ಬೆಲೆ ಏರುಗತಿಯಲ್ಲೇ ಸಾಗುತ್ತಿರುವುದರಿಂದ ನಿರ್ವಹಣೆ ಕಷ್ಟವಾಗುತ್ತಿದೆ ಹಾಗಾಗಿ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಕೆಎಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುತ್ತಿದ್ದಾರೆ.

KSRTC decided to hike bus fare, sends proposal to givernment

ಸಿಬ್ಬಂದಿಯ ಭತ್ಯೆ, ಸಂಬಳ ಸೇರಿದಂತೆ ಕೆಎಸ್‌ಆರ್‌ಟಿಸಿ ವಾರ್ಷಿಕ ವೆಚ್ಚ ರೂ.370 ಕೋಟಿ ದಾಟಲಿದ್ದು, ಆದಾಯದ ಪ್ರಮಾಣದಲ್ಲಿ ಇಳಿಕೆಯಾದರೆ ನಿರ್ವಹಣೆ ಕಷ್ಟವಾಗಲಿದೆ. ಕಳೆದ ವರ್ಷಕೂಡ ನಿಗಮವು ರೂ.177 ಕೋಟಿ ನಷ್ಟ ಅನುಭವಿಸಿದೆ ಎಂದು ಮಾಹಿತಿ ನೀಡಲಾಗಿತ್ತು.

ಪೆಟ್ರೋಲ್ ಬೆಲೆ ಏರಿಕೆ: ಟ್ವಿಟ್ಟರ್‌ನಲ್ಲಿ ಕೇಂದ್ರದ ವಿರುದ್ಧ ಆಕ್ರೋಶಪೆಟ್ರೋಲ್ ಬೆಲೆ ಏರಿಕೆ: ಟ್ವಿಟ್ಟರ್‌ನಲ್ಲಿ ಕೇಂದ್ರದ ವಿರುದ್ಧ ಆಕ್ರೋಶ

ಕೆಎಸ್‌ಆರ್‌ಟಿಸಿ ಮಾಡುವ ದರ ಹೆಚ್ಚಳ ವಾಯವ್ಯ ಕರ್ನಾಟಕ ಸಾರಿಗೆ, ಈಶಾನ್ಯ ಸಾರಿಗೆ ನಿಗಮಗಳಿಗೂ ಅನ್ವಯವಾಗಲಿದೆ. ಬೆಂಗಳೂರು ಮಹಾನಗರ ಸಾರಿಗೆ ನಿಗಮವು ಪ್ರತ್ಯೇಕವಾದ ಪ್ರಸ್ತಾವನ್ನು ಸರ್ಕಾರಕ್ಕೆ ಸಲ್ಲಿಸಲಿದೆ.

English summary
KSRTC decided to hike the bus fare. KSRTC already sends proposal to government. Petrol, Disel price getting high every day so KSRTC decided to hike the bus fare.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X