ಕೆಎಸ್ಆರ್‌ಟಿಸಿ ಬಸ್ ಪ್ರಯಾಣಿಕರ ಸಹಾಯಕ್ಕಾಗಿ ಬಂತು 'ಬಸ್ ಮಿತ್ರ'
Recommended Video

ಬೆಂಗಳೂರು, ನವೆಂಬರ್ 4 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್ಸುಗಳು ಅಪಘಾತಕ್ಕೀಡಾದ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆಗೆ ಹೊಸದಾಗಿ 'ಬಸ್ ಮಿತ್ರ' ವಾಹನಗಳನ್ನು ಪರಿಚಯಿಸಿದೆ. 3.52 ಕೋಟಿ ವೆಚ್ಚದಲ್ಲಿ 45 ವಾಹನಗಳನ್ನು ಖರೀದಿ ಮಾಡಲಾಗಿದೆ.
ಕೆಎಸ್ಆರ್‌ಟಿಸಿಯ ಕೇಂದ್ರಿಯ 3ನೇ ಘಟಕದ ಆವರಣದಲ್ಲಿ ನಡೆದ ಸಮಾರಂಭದಲ್ಲಿ 45 ಬಸ್ ಮಿತ್ರ ವಾಹನಗಳಿಗೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ಚಾಲನೆ ನೀಡಿದರು. 15 ವಿಭಾಗಗಳಿಗೆ 45 ವಾಹನಗಳನ್ನು ನಿಯೋಜನೆ ಮಾಡಲಾಗುತ್ತದೆ.
'ಆರೋಗ್ಯ ಇಲಾಖೆಯ ಆಂಬ್ಯುಲೆನ್ಸ್‌ಗಳು ಅಪಘಾತದ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಿವೆ. ನಿಗಮದಲ್ಲೂ ಪ್ರತ್ಯೇಕ ತಂಡವೊಂದು ಪ್ರಯಾಣಿಕರ ರಕ್ಷಣೆಗೆ ಕೆಲಸ ಮಾಡಲಿದೆ' ಎಂದು ಎಚ್.ಎಂ.ರೇವಣ್ಣ ಹೇಳಿದರು.
ರಸ್ತೆ ಅಪಘಾತದಲ್ಲಿ ಗಾಯಗೊಂಡ ಪ್ರಯಾಣಿಕರಿಗೆ ತಕ್ಷಣದ ವೈದ್ಯಕೀಯ ನೆರವು ಒದಗಿಸಲು ಹಾಗೂ ಮರಣ ಹೊಂದಿದವರ ವಾರಸುದಾರರಿಗೆ ಪರಿಹಾರ ನೀಡುವ ಉದ್ದೇಶದಿಂದ 'ಕ.ರಾ.ರ.ಸಾ.ನಿಗಮ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್' ನೋಂದಣಿ ಮಾಡಲಾಗಿದೆ ಎಂದು ಕೆಎಸ್ಆರ್‌ಟಿಸಿ ತಿಳಿಸಿದೆ.
ಇದೇವೇಳೆ ಮಾತನಾಡಿದ ಸಚಿವರು 'ಟಿಕೆಟ್ ಬುಕ್ಕಿಂಗ್‌ಗೆ ಇರುವ ಆನ್‌ಲೈನ್ ವ್ಯವಸ್ಥೆ ರದ್ದು ಮಾಡುವ ಪ್ರಸ್ತಾಪ ನಮ್ಮ ಮುಂದಿಲ್ಲ. ಆನ್‌ಲೈನ್‌ನಲ್ಲಿ ಇನ್ನಷ್ಟು ಸೇವೆ ಒದಗಿಸಲಾಗುವುದು' ಎಂದು ಸ್ಪಷ್ಟನೆ ನೀಡಿದರು.

ಬಸ್ ಮಿತ್ರ ವಾಹನಗಳಿಗೆ ಚಾಲನೆ
ಕೆಎಸ್‌ಆರ್‌ಟಿಸಿ ಬಸ್ಸುಗಳು ಅಪಘಾತಕ್ಕೀಡಾದ ಸಂದರ್ಭದಲ್ಲಿ ಗಾಯಾಳುಗಳ ರಕ್ಷಣೆಗೆ ಹೊಸದಾಗಿ 'ಬಸ್ ಮಿತ್ರ' ವಾಹನಗಳನ್ನು ಪರಿಚಯಿಸಲಾಗಿದೆ. ಒಟ್ಟು 45 ಮಹೀದ್ರ ಬೊಲೇರೋ ಜೀಪುಗಳನ್ನು ಇದಕ್ಕಾಗಿ ಖರೀದಿ ಮಾಡಲಾಗಿದೆ.

ಜೀಪು ಚಲಾಯಿಸುವ ಮೂಲಕ ಚಾಲನೆ
ಕೆಎಸ್ಆರ್‌ಟಿಸಿಯ ಕೇಂದ್ರಿಯ 3ನೇ ಘಟಕದ ಆವರಣದಲ್ಲಿ ನಡೆದ ಸಮಾರಂಭದಲ್ಲಿ 45 ಬಸ್ ಮಿತ್ರ ವಾಹನಗಳಿಗೆ ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಅವರು ಜೀಪ್ ಚಾಲನೆ ಮಾಡುವ ಮೂಲಕ ಚಾಲನೆ ನೀಡಿದರು.

ಬಸ್ ಮಿತ್ರ ವಾಹನದಲ್ಲಿ ಏನಿದೆ?
ಬಸ್ ಮಿತ್ರಾ ವಾಹನದಲ್ಲಿ ತರಬೇತಿ ಪಡೆದ ಸಿಬ್ಬಂದಿ ತಂಡ, ಪ್ರಥಮ ಚಿಕಿತ್ಸೆಗೆ ಬೇಕಿರುವ ಸಲಕರಣೆಗಳು ಇರಲಿವೆ. ಅಪಘಾತ ನಡೆದ ಸ್ಥಳಕ್ಕೆ ತಕ್ಷಣ ತೆರಳಲಿರುವ ತಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲಿದೆ.

2 ರಿಂದ 3 ವಾಹನ ನೀಡಲಾಗುತ್ತದೆ
ಕೆಎಸ್ಆರ್‌ಟಿಸಿಯ ಎಲ್ಲಾ ವಿಭಾಗಗಳಿಗೆ ತಲಾ ಎರಡು ಅಥವ ಮೂರು ವಾಹನಗಳನ್ನು ನೀಡಲಾಗುತ್ತದೆ. ಆರೋಗ್ಯ ಇಲಾಖೆಯ ಆಂಬ್ಯುಲೆನ್ಸ್ ಗಳ ಜೊತೆಗೆ ನಿಗಮದ ಪ್ರತ್ಯೇಕ ತಂಡವೂ ಅಪಘಾತವಾದ ಸಂದರ್ಭದಲ್ಲಿ ಕೆಲಸ ಮಾಡಲಿದೆ.












Click it and Unblock the Notifications