ಕರ್ನಾಟಕ ಸರ್ಕಾರಕ್ಕೆ ಕೊಡಗಿನ ಬೆಳ್ಳಿಯಪ್ಪನ ಪ್ರಶ್ನೆಗಳು

Subscribe to Oneindia Kannada

ಬೆಂಗಳೂರು, ಜುಲೈ, 25: ರಾಜ್ಯದಲ್ಲಿ ಕೆಎಸ್ ಆರ್ ಟಿಸಿ ಮುಷ್ಕರದ ಬಿಸಿ ಏರಿದ್ದು ಸರ್ಕಾರ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಹೇಳಿಕೊಂಡು ಸಭೆ ಮಾಡುತ್ತಿದ್ದರೆ ಇತ್ತ ಮನೆಗೆ ಮನೆ ಸೇರಬೇಕಾಗಿದ್ದ ಹಿರಿಯ ನಾಗರಿಕನ ಗೋಳು ಮಾತ್ರ ಕೇಳುವವರಿಲ್ಲ.

ಕೊಡಗಿಗೆ ತೆರಳಬೇಕಿದ್ದ ಬೆಳ್ಳಿಯಪ್ಪ ಸೋಮವಾರ ಮುಂಜಾನೆಯೇ ಕೆಂಪೇಗೌಡ ನಿಲ್ದಾಣಕ್ಕೆ ಬಂದು ಕುಳಿತಿದ್ದಾರೆ. ಜೆಪಿ ನಗರದ ಸಂಬಂಧಿಕರ ಮನೆಗೆ ಬಂದಿದ್ದ ಬೆಳ್ಳಿಯಪ್ಪ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.[ಸಾರಿಗೆ ಮುಷ್ಕರ: ಕ್ರಿಕೆಟ್ ಮೈದಾನವಾದ ಮೆಜೆಸ್ಟಿಕ್]

KSRTC BMTC Strike : Questions from Kodagu senior citizen

ಬೆಂಗಳೂರಿನ ಜೆಪಿ ನಗರದಿಂದ ಸೋಮವಾರ ಮುಂಜಾನೆ ಮೆಜೆಸ್ಟಿಕ್ ಗೆ ಬಂದವರು ಕೊಡಗಿಗೂ ತೆರಳಲಾರದೇ, ಮೈಸೂರಿಗೂ ತೆರಳಲಾರದೆ ಅಥವಾ ತಿರುಗಿ ಜೆಪಿ ನಗರಕ್ಕೂ ತೆರಳಲಾಗದೆ ಸಂಕಷ್ಟ ಪಡುತ್ತಿದ್ದಾರೆ. ಸಾಮಾನ್ಯ ನಾಗರಿಕರಾಗಿ ಸರ್ಕಾರಕ್ಕೆ ಬೆಳ್ಳಿಯಪ್ಪ ನೀಡಿದ ಸಲಹೆಗಳನ್ನು ಕೇಳಲೇಬೇಕು...

* ಇಂಥ ಪ್ರತಿಭಟನೆ ನಡೆಯುವುದು ಸರ್ಕಾರಕ್ಕೆ ಮೊದಲೆ ಗೊತ್ತಿರುತ್ತೆ ಅಂದ ಮೇಲೆ ಸರಿಯಾದ ಬದಲಿ ವ್ಯವಸ್ಥೆ ಮಾಡಬೇಕು
* ಕೆಎಸ್ ಆರ್ ಟಿಸಿಯವರು ಮುಷ್ಕರ ಮಾಡುತ್ತಿರುವುದು ತಪ್ಪಲ್ಲ. ಅವರ ಬೇಡಿಕೆ ಅವರು ಕೇಳಲಿ, ಅದಕ್ಕೆ ಸ್ಪಂದಿಸುವ ಕೆಲಸ ಸರ್ಕಾರ ಮಾಡಲಿ
* ಪ್ರತಿಭಟನೆ ಮತ್ತು ಬಂದ್ ಗಳಿಂದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ್ದು, ಅದನ್ನು ಬಿಟ್ಟು ಎರಡು ದಿನ ಶಾಲಾ ಕಾಲೇಜುಗಳಿಗೆ ರಜೆ ನೀಡಿ ಕೈ ಕಟ್ಟಿ ಕುಳಿತುಕೊಂಡರೆ? ಎಂದು ಪ್ರಶ್ನೆ ಮಾಡುತ್ತಾರೆ.[ಮುಷ್ಕರದ ಲಾಭ: ಆಟೋ, ಖಾಸಗಿ ಬಸ್ ಚಾಲಕರಿಗೆ ಹಬ್ಬ]

KSRTC BMTC Strike : Questions from Kodagu senior citizen

* ಇಂಥ ಸಂದರ್ಭ ಎದುರಾದಾಗ ಇನ್ನು ಮುಂದಾದರೂ ಸರ್ಕಾರ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿ.
* ಇವರ ಸಮಾವೇಶಗಳಿಗೆ ಹೆಚ್ಚುವರಿ ಬಸ್ ಗಳನ್ನು ಬಿಡುವಂತೆ ಇಂಥ ಸಂದರ್ಭದಲ್ಲಿಯೂ ಬಿಡಲಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
KSRTC BMTC Strike: Karnataka Transport employees demanding for 35 percent of salary hike. Here are some Questions by Belliyappa, senior citizen from Kodagu to Karnataka State Government.
Please Wait while comments are loading...