ಬಂಟ್ವಾಳ: ಆಟೋಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ, 4 ಸಾವು

ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಪಣೆಮಂಗಳೂರು ಸೇತುವೆ ಬಳಿ ನಡುರಾತ್ರಿ ವೇಗವಾಗಿ ಚಲಿಸುತ್ತಿದ್ದ KSRTC ಬಸ್, ಆಟೋಗೆ ಡಿಕ್ಕಿ ಹೊಡೆದಿದೆ. ಬರಿಮಾರ್ ಮುಳಿಬೈಲಿನ ನಿವಾಸಿಗಳಾದ ಭಾಸ್ಕರ್, ಅವರ ಪತ್ನಿ ಪ್ರೇಮಾ, ಜಗದೀಶ್, ಅವರ ಪತ್ನಿ ಸುಪ್ರೀತಾ ಮೃತಪಟ್ಟವರು.
ಭಾಸ್ಕರ್-ಪ್ರೇಮಾ ಅವರ ಮಕ್ಕಳಾದ ಹೃತಿಜ್ಞಾ, ಅಭಿಜ್ಞಾ ಹಾಗೂ ಜಗದೀಶ್ -ಸುಪ್ರೀತಾ ದಂಪತಿಯ ಪುತ್ರ ನಿಶಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ನಿಶಾನ್ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎನ್ನಲಾಗಿದೆ. ( ಬೆಂಗಳೂರು ಬಸ್ ಅಪಘಾತ: 10 ಮಂದಿ ಸಾವು )
ಭಾಸ್ಕರ್ ಹಾಗೂ ಜಗದೀಶ್ ಅವರು ಬರಿಮಾರಿನ ಲಕ್ಷ್ಮಣ ಪೂಜಾರಿ ಅವರ ಪುತ್ರರು. ಬಿಸಿ ರೋಡ್ ನಲ್ಲಿ ಸಂಬಂಧಿಕರ ಮದುವೆಗೆಂದು ಇವರಿಬ್ಬರೂ ತಮ್ಮ ಪತ್ನಿ-ಮಕ್ಕಳೊಂದಿಗೆ ಹೋಗಿದ್ದರು. ಮದುವೆ ಮುಗಿಸಿಕೊಂಡು ರಾತ್ರಿಯೇ (11.30ರಲ್ಲಿ) ಆಟೋದಲ್ಲಿ ಹೊಟರುಬರುವಾಗ ಈ ದುರಂತ ಸಂಭವಿಸಿದೆ. ಸ್ವತಃ ಭಾಸ್ಕರ್ ಆಟೋ ಓಡಿಸುತ್ತಿದ್ದರು. ಬಸ್ಸು ಅತಿ ವೇಗದಲ್ಲಿದ್ದುದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ. ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಬಂಟ್ವಾಳ ಇನ್ಸ್ ಪೆಕ್ಟರ್ ರಾಜಶೇಖರ್ ಮಿಸ್ತ್ರಿ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿದರು.












Click it and Unblock the Notifications