KSRTC: ಕೆಎಸ್‌ಆರ್‌ಟಿಸಿ ಆರೋಗ್ಯ ಯೋಜನೆ, ಮರುಪಾವತಿ ಅವಕಾಶಗಳು

ಬೆಂಗಳೂರು, ಜನವರಿ 09: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ನೌಕರರು ಮತ್ತು ಸಿಬ್ಬಂದಿಗೆ ನಗದು ರಹಿತ ಆರೋಗ್ಯ ಯೋಜನೆ ಆರಂಭಿಸಲಾಗಿದೆ. 'ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆ'ಯಡಿ ಹಲವು ಸೌಲಭ್ಯಗಳು ಲಭ್ಯವಿದೆ. ಈ ಯೋಜನೆಗಾಗಿ ಖಾಸಗಿ ಆಸ್ಪತ್ರೆಗಳ ಜೊತೆಗೆ ಸಹ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. ಈ ಯೋಜನೆಯಡಿ ಯಾವ-ಯಾವ ಸೌಲಭ್ಯಗಳು ಲಭ್ಯವಿದೆ ಎಂದು ಸಹ ವಿವರಣೆ ನೀಡಲಾಗಿದೆ.

ನಿಯಮಾನುಸಾರ ಮರುಪಾವತಿಗೆ ಅವಕಾಶವಿರುವ ಸಂದರ್ಭಗಳ ವಿವರಣೆ ನೀಡಲಾಗಿದೆ. ವೈದಕೀಯ ವೆಚ್ಚ ಮರುಪಾವತಿ ಸೌಲಭ್ಯ ಹಾಗೂ ನೂತನ ನಗದು ರಹಿತ ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆ ಎರಡೂ ಜಾರಿಯಲ್ಲಿರುತ್ತವೆ. ಆದಾಗ್ಯೂ ಅಧಿಕಾರಿಗಳು/ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರು ಹೆಚ್ಚಿನ ಸಂದರ್ಭಗಳಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಉತ್ತೇಜಿಸಲಾಗಿದೆ. ಆದಾಗ್ಯೂ ನೌಕರರು ಅನಿವಾರ್ಯ ಸಂದರ್ಭಗಳಲ್ಲಿ ಮಾನ್ಯತೆ ಇರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಲ್ಲಿ ಹಾಗೂ ಕೆಳಕಂಡ ಸಂದರ್ಭಗಳಲ್ಲಿ ನಿಯಮಾನುಸಾರ ಮರುಪಾವತಿಗೆ ಅವಕಾಶವಿರುತ್ತದೆ.

KSRTC Arogya Scheme Know About Treatment Reimbursement Details

* ಅಧಿಕಾರಿಗಳು ಮತ್ತು ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಜೀವಾಪಾಯವಿರುವ ಇರುವಂತಹ ಸಂದರ್ಭದಲ್ಲಿ ಜೀವ ರಕ್ಷಣೆಗಾಗಿ ತುರ್ತು ಚಿಕಿತೆಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಲ್ಲಿ, ಸಾಮಾನ್ಯ ಅನಾರೋಗ್ಯ ಪ್ರಕರಣಗಳಲ್ಲಿ (ಕೆಮ್ಮು, ಶೀತ/ ನೆಗಡಿ, ಜ್ವರ ಇತ್ಯಾದಿ) ಹತ್ತಿರದ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದಲ್ಲಿ.

* ಈ ಯೋಜನೆಯಡಿ ರೋಗಿಯನ್ನು ಮಾನ್ಯತಾ ಪಟ್ಟಿಯಲ್ಲಿರುವ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ದಾಖಲಿಸಿದ್ದಾಗ್ಯೂ ಆಡಳಿತಾತ್ಮಕ ಮತ್ತು ತಾಂತ್ರಿಕ ದೋಷಗಳ ಕಾರಣಗಳಿಂದಾಗಿ ನೌಕರರೇ ಚಿಕಿತ್ಸಾ ವೆಚ್ಚವನ್ನು ಭರಿಸಿದ ಸಂದರ್ಭಗಳಲ್ಲಿ.

* ಬಂಜೆತನ ಚಿಕಿತ್ಸೆಯ ವೈದ್ಯಕೀಯ ವೆಚ್ಚವನ್ನು ಪ್ರಸ್ತುತ ಜಾರಿಯಲ್ಲಿಯಲ್ಲಿರುವ ಸುತ್ತೋಲೆ ನಿರ್ದೇಶನಗಳನ್ವಯ ಮರುಪಾವತಿಗೆ ಅವಕಾಶವಿರುತ್ತದೆ.

ವೈದ್ಯಕೀಯ ಉಪಕರಣಗಳ ಖರೀದಿಯ ವೆಚ್ಚ. ಕನ್ನಡಕ, ಶ್ರವಣ ಸಾಧನ ಖರೀದಿಯ ವೆಚ್ಚ, ಕರ್ತವ್ಯ ನಿರತ ಅಪಘಾತ ಪ್ರಕರಣಗಳಲ್ಲಿ ಕೃತಕ ಕಾಲು ಅಳವಡಿಕೆಗೆ ತಗಲುವ ವೆಚ್ಚವನ್ನು ನಿಗಮದಲ್ಲಿ ಪ್ರಸ್ತುತ ಜಾರಿಯಲ್ಲಿಯಲ್ಲಿರುವ/ ಕಾಲಕಾಲಕ್ಕೆ ಪರಿಷ್ಕರಿಸುವ ನಿರ್ದೇಶನಗಳನ್ವಯ ಮರುಪಾವತಿಗೆ ಅವಕಾಶವಿರುತ್ತದೆ.

ಹೊರ ರಾಜ್ಯದಲ್ಲಿ ಹಾಗೂ ವಿದೇಶದಲ್ಲಿ ಪಡೆದ ಚಿಕಿತ್ಸಾ ವೆಚ್ಚಗಳು. ಹೊರರಾಜ್ಯಗಳಿಗೆ ಮಾರ್ಗ ಕಾರ್ಯಾಚರಣೆ ಮೇಲೆ ತೆರಳಿರುವ ನೌಕರರು, ಹೊರರಾಜ್ಯಗಳಲ್ಲಿ ಸ್ಥಾಪಿತವಾಗಿರುವ ನಿಗಮದ ಕೌಂಟರ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು, ಮಾರ್ಗ ತನಿಖೆ, ಇತ್ಯಾದಿ ಕರ್ತವ್ಯದ ಮೇಲೆ ಹೊರರಾಜ್ಯಗಳಿಗೆ ನಿಯೋಜನೆಗೊಂಡಿರುವ ನೌಕರರು ಕರ್ತವ್ಯ ಸ್ಥಳದ ವ್ಯಾಪ್ತಿಯಲ್ಲಿ ಅನಾರೋಗ್ಯದ ನಿಮಿತ್ತ ಪಡೆದ ಚಿಕಿತ್ಸೆಯ ವೆಚ್ಚವನ್ನು ನಿರ್ದಿಷ್ಟಪಡಿಸಿರುವ ದರಗಳನ್ವಯ ನಿಯಮಾನುಸಾರ ಮರುಪಾವತಿಗೆ ಅವಕಾಶವಿರುತ್ತದೆ.

ಅಧಿಕೃತ ಕರ್ತವ್ಯ ತರಬೇತಿ, ಪ್ರಶಸ್ತಿ ಪದಾನಗಳಂತಹ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಹೊರರಾಜ್ಯ ಹಾಗೂ ವಿದೇಶಗಳಿಗೆ ಅಧಿಕೃತ ಪ್ರವಾಸದಲ್ಲಿರುವ ಅಧಿಕಾರಿ/ ನೌಕರರು ಅನಾರೋಗ್ಯದ ನಿಮಿತ್ತ ಪಡೆದ ಚಿಕಿತ್ಸೆಯ ವೆಚ್ಚವನ್ನು ನಿಯಮಾನುಸಾರ ಮರುಪಾವತಿಸಲು ಅವಕಾಶವಿರುತ್ತದೆ.

ಮೇಲಿನ ನಿರ್ದಿಷ್ಟ ಪ್ರಕರಣಗಳ ಹೊರತುಪಡಿಸಿ ಅಧಿಕಾರಿ ಮತ್ತು ನೌಕರರು ಹಾಗೂ ಅವರ ಕುಟುಂಬದ ಅವಲಂಬಿತರು ಇತರೆ ಯಾವುದೇ ಕಾರಣಗಳಿಂದ ಹೊರರಾಜ್ಯಗಳಲ್ಲಿ/ ವಿದೇಶಗಳಲ್ಲಿ ಪಡೆದ ಚಿಕಿತ್ಸಾ ವೆಚ್ಚವನ್ನು ಮರುಪಾವತಿಸಲು ಅವಕಾಶಗಳಿರುವುದಿಲ್ಲ.

ಕರ್ತವ್ಯ ನಿರತ ಅಪಘಾತ ಪ್ರಕರಣಗಳು: ಅಧಿಕಾರಿಗಳು/ ನೌಕರರು ಕರ್ತವ್ಯ ನಿರತ ಸಮಯದಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಮಾನ್ಯತೆ ಪಡೆದ ಅಥವಾ ಮಾನ್ಯತೆ ಪಟ್ಟಿಯಲ್ಲಿರದ ಖಾಸಗಿ ಆಸ್ಪತ್ರೆಗಳಲ್ಲಿ ಸಂದರ್ಭಾನುಸಾರ ಪಡೆಯುವ ಚಿಕಿತ್ಸಾ ವೆಚ್ಚವನ್ನು ಪ್ರಸ್ತುತ ಜಾರಿಯಲ್ಲಿಯಲ್ಲಿರುವ/ ಕಾಲಕಾಲಕ್ಕೆ ಪರಿಷ್ಕರಿಸುವ ನಿರ್ದೇಶನಗಳನ್ವಯ ಪೂರ್ಣ ಪ್ರಮಾಣದಲ್ಲಿ ಪಾವತಿಸಲು ಅವಕಾಶವಿರುತ್ತದೆ.

ಕರ್ತವ್ಯ ನಿರತ ಅಪಘಾತ ಪ್ರಕರಣಗಳಲ್ಲಿ ಟ್ರಸ್ಟ್‌ನಿಂದ ಪಾವತಿಸುವ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಅಪಘಾತ ಪರಿಹಾರ ನಿಧಿ (ARF) ಯಿಂದ ಟ್ರಸ್ಟ್‌ಗೆ ಮರುಪಾವತಿ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+