ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ವಾರ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ದರ ಏರಿಕೆ

By Gururaj
|
Google Oneindia Kannada News

ಮಂಡ್ಯ, ಸೆಪ್ಟೆಂಬರ್ 09 : ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ದರ ಮುಂದಿನ ವಾರದಿಂದ ಹೆಚ್ಚಳವಾಗಲಿದೆ. ಡೀಸೆಲ್ ಬೆಲೆ ಏರಿಕೆ ಹಿನ್ನಲೆಯಲ್ಲಿ ಬಸ್ ದರ ಏರಿಕೆಗೆ ಸಾರಿಗೆ ಸಂಸ್ಥೆಗಳು ಮನವಿ ಮಾಡಿದ್ದವು.

ಮಂಡ್ಯದ ಚಿಕ್ಕನಾಯಕನಹಳ್ಳಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಈ ಕುರಿತು ಮಾಹಿತಿ ನೀಡಿದರು. 'ಮುಂದಿನ ವಾರದಿಂದ ಬಸ್‌ ದರ ಏರಿಕೆಯಾಗಲಿದೆ. ಶೇ 18ರಷ್ಟು ದರ ಏರಿಕೆಯಾಗಲಿದೆ' ಎಂದರು.

ಭಾರತ ಬಂದ್ : ಕೆಎಸ್ಆರ್‌ಟಿಸಿ, ಬಿಎಂಟಿಸಿ ಸಂಚಾರವಿಲ್ಲ?ಭಾರತ ಬಂದ್ : ಕೆಎಸ್ಆರ್‌ಟಿಸಿ, ಬಿಎಂಟಿಸಿ ಸಂಚಾರವಿಲ್ಲ?

KSRTC and BMTC bus fare to hike 15 percent

ಇಂಧನಗಳ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಂಗಳೂರಿನಲ್ಲಿ ಭಾನುವಾರ ಡೀಸೆಲ್ ದರ 74.95 ರೂ.ಗಳು. ನಿರಂತರವಾಗಿ ದರಗಳು ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗುತ್ತಿದೆ.

ಸರ್ಕಾರಿ ಬಸ್ ಪ್ರಯಾಣಿಕರು ಟಿಕೆಟ್ ದರ ಏರಿಕೆಗೆ ಸಜ್ಜಾಗಿಸರ್ಕಾರಿ ಬಸ್ ಪ್ರಯಾಣಿಕರು ಟಿಕೆಟ್ ದರ ಏರಿಕೆಗೆ ಸಜ್ಜಾಗಿ

ಜೂನ್ ತಿಂಗಳಿನಲ್ಲಿಯೇ ಕೆಎಸ್ಆರ್‌ಟಿಸಿ ಶೇ 18 ರಷ್ಟು, ಬಿಎಂಟಿಸಿ ಶೇ 20 ರಷ್ಟು ಪ್ರಯಾಣದರ ಏರಿಕೆ ಮಾಡಲು ಒಪ್ಪಿಗೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದವು. ಆದರೆ, ಈ ಪ್ರಸ್ತಾವನೆಗೆ ತಕ್ಷಣ ಒಪ್ಪಿಗೆ ಸಿಕ್ಕಿರಲಿಲ್ಲ.

ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?ಸೆ.10 ರಂದು ಭಾರತ ಬಂದ್, ಏನಿರುತ್ತೆ? ಏನಿರೋಲ್ಲ?

ಡೀಸೆಲ್ ದರ ಏರಿಕೆಯಿಂದಾಗಿ ಮೂರು ತಿಂಗಳಿನಲ್ಲಿ ಕೆಎಸ್ಆರ್‌ಟಿಸಿಗೆ ಸುಮಾರು 180 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈಗ ಇಂಧನ ಬೆಲೆಗಳು ನಿರಂತರವಾಗಿ ಏರಿಕೆಯಾಗುತ್ತಿದೆ. ಆದ್ದರಿಂದ, ಸರ್ಕಾರ ಪ್ರಯಾಣದರ ಏರಿಕೆಗೆ ಒಪ್ಪಿಗೆ ನೀಡಿದೆ.

English summary
The Karnataka State Road Transport Corporation (KSRTC) and Bangalore Metropolitan Transport Corporation (BMTC) bus fare will hike t0 15 percent from next week said Karnataka transport minister D.C.Tammanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X