ಕೆಎಸ್‌ಒಯುನಲ್ಲಿ ಕೆಎಎಸ್-ಐಎಎಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ
ಮೈಸೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಎಎಸ್) ಮತ್ತು ಕೇಂದ್ರ ಲೋಕಸೇವಾ ಆಯೋಗ (ಐಎಎಸ್) ಎರಡು ಆಡಳಿತ ಸೇವಾ ಹುದ್ದೆಗಳ ಪರೀಕ್ಷೆಗಳಿಗೆ ತಯಾರಾಗುವ ಅಭ್ಯರ್ಥಿಗಳಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್‌ಒಯು) ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಿಂದ ಈ ಎರಡು ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಆಸಕ್ತರು ಸಂಪರ್ಕಿಸಬಹುದಾಗಿದೆ.
ನಿಮಗೆ ಕೆಎಎಸ್, ಐಎಎಸ್ ಅಧಿಕಾರಿಯಾಗಬೇಕು ಎನ್ನುವ ಬಯಕೆ ಇದಿಯಾ?. ಅಧಿಕಾರಿಯಾಗಿ ಸಾರ್ವಜನಿಕ ಸೇವೆ ಮಾಡಬೇಕು ಎನ್ನುವ ಮಹದಾಸೆ ಇದ್ದವರ ಕನಸಿಗೆ ಶಕ್ತಿ ತುಂಬುವ ಕೆಲಸ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾಡುತ್ತಿದೆ. ಈ ಸಂಬಂಧ ಒಂದೂವರೆ ತಿಂಗಳ ಕಾಲ ತರಬೇತಿ ನೀಡಿ ಪರೀಕ್ಷೆಗೆ ಅವರನ್ನು ಸಜ್ಜುಗೊಳಿಸಲಿದೆ.

14 ವರ್ಷದಿಂದ ಮುಕ್ತ ಗಂಗೋತ್ರಿಯ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಲೇ ಹತ್ತಾರು ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಆಯೋಜಿಸುತ್ತ ಬರಲಾಗಿದೆ. ಸ್ಪರ್ಧಾತ್ಮಕ ಪರೀ್ಕ್ಷಾ ಕೇಂದ್ರ, ಕರ್ನಾಟಕ ರಾಜ್ಯ ಲೋಕ ಸೇವಾ ಆಯೋಗ, ಕೇಂದ್ರ ಲೋಕಸೇವಾ ಆಯೋಗ, ವಿವಿಧ ನೇಮಕಾತಿ ಮಂಡಳಿಗಳು ಆಯೋಜಿಸುವ ಪರೀಕ್ಷೆಗಳಿಗೆ ವಿಷಯಾಧಾರಿತವಾಗಿ ತರಬೇತಿ ನೀಡಲಾಗುತ್ತದೆ.
ಆಸಕ್ತ ಪರೀಕ್ಷಾರ್ಥಿಗಳು ಕೂಡಲೇ ಸಂಪರ್ಕಿಸಿ
ಹಲವು ಕ್ಷೇತ್ರಗಳ ತಜ್ಞರು, ವಿಷಯ ಪರಿಣಿತರು, ಪರೀಕ್ಷೆಯಲ್ಲಿ ಯಶಸ್ವಿಯಾಗಿ ಸದ್ಯ ನಾಡಿನ ನಾನಾ ಭಾಗಗಳಲ್ಲಿ ಸೇವಾನಿರತ ಐಎಎಸ್, ಐಪಿಎಸ್, ಐಎಫ್‌ಎಸ್, ಕೆಎಎಸ್ ಅಧಿಕಾರಿಗಳು ಕೂಡ ಪರೀಕ್ಷೆ ಎದುರಿಸುವ ಮಾರ್ಗೋಪಾಯಗಳನ್ನು ಪರೀಕ್ಷಾರ್ಥಿಗಳಿಗೆ ಹೇಳಿ ಕೊಡಲಿದ್ದಾರೆ. ಸತತ 45 ದಿನಗಳ ಕಾಲ ನಡೆಯುವ ತರಬೇತಿ ಇದಾಗಿದೆ. ಯಾರೆಲ್ಲ ಕೆಎಎಸ್, ಐಎಎಸ್ ಹುದ್ದೆಗಳ ಆಕಾಂಕ್ಷಿಗಳಾಗಿದ್ದು, ಪರೀಕ್ಷೆಗೆ ಸಜ್ಜಾಗುತ್ತಿದ್ದಿರೋ ಅಂಥವರು ವಿಶ್ವವಿದ್ಯಾನಿಲಯ ಆವರಣದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದಲ್ಲಿ 0821- 2515944 ಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಕೆಎಸ್‌ಒಯು ಕುಲಸಚಿವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಕೇಂದ್ರದ ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ 9448800816 ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎರಡು ಪ್ರಮುಖ ಆಡಳಿತ ಸೇವೆಯಲ್ಲಿ ಹುದ್ದೆ ಅಲಂಕರಿಸಬೇಕು ಎಂದುಕೊಂಡ ಬಡವರು ಹಾಗೂ ಮಧ್ಯವರ್ಗದವರು ಖಾಸಗಿ ಸ್ಪರ್ಧಾತ್ಮಕ ತರಬೇತಿ ಸಂಸ್ಥೆಗಳಿಗೆ ಅಧಿಕ ಮೊತ್ತ ನೀಡಿ ಕಲಿಯುವ ಬದಲು ಈ ವಿಶ್ವವಿದ್ಯಾಲಯದಲ್ಲಿ ಪರಿಣಿತರಿಂದ ತರಬೇತಿಯನ್ನು ಪಡೆಯಬಹುದಾಗಿದೆ. ಪರೀಕ್ಷಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ.












Click it and Unblock the Notifications