ಕರಾಮುವಿ: ಪರೀಕ್ಷಾ ಶುಲ್ಕ ಪಾವತಿಸಲು ಸೂಚನೆ
ಬೆಂಗಳೂರು,ಜ.19: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಹಿಳಾ ಪ್ರಾದೇಶಿಕ ಕೇಂದ್ರ ಪರೀಕ್ಷಾ ಅಧಿಸೂಚನೆ ಹೊರಡಿಸಿದೆ.
ಪರೀಕ್ಷಾ ಅಧಿಸೂಚನೆ 2020-21ನೇ (ಜನವರಿ ಆವೃತ್ತಿ) ಸಾಲಿನಲ್ಲಿ ಪ್ರವೇಶಾತಿ ಪಡೆದ ಎಲ್ಲಾ UG ಮತ್ತುPG ವಿದ್ಯಾರ್ಥಿಗಳಿಗೆ ವಾರ್ಷಿಕ/ಸೆಮಿಸ್ಟರ್ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಪರೀಕ್ಷಾ ಶುಲ್ಕ ಪಾವತಿಸಲು ಸೂಚಿಸಲಾಗಿದೆ.
ಬಿಎ/ಬಿಕಾಂ, ಬಿಲಿಬ್, ಐಎಸ್ಸಿ, ಎಂ.ಎ/ಎಂ.ಕಾಂ, ಎಂಬಿಎ, ಎಂ.ಲಿಬ್ ಐಎಸ್ಸಿ, ಎಂಎಸ್‌ಸಿ, ಎಲ್ಲಾ ಪಿಜಿ ಡಿಪ್ಲೊಮಾ, ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಶುಲ್ಕ ಪಾವತಿಸುವಂತೆ ಸೂಚಿಸಿಲಾಗಿದೆ.

ಇದಲ್ಲದೆ ಮುಕ್ತ ವಿಶ್ವವಿದ್ಯಾಲಯದಲ್ಲಿ 2001-02 ರಿಂದ 2014-15 ಹಾಗೂ 2018-19 ಮತ್ತು 2019-20 ಸಾಲಿನಲ್ಲಿ ಪ್ರವೇಶಾತಿ ಪಡೆದ UG ಮತ್ತು PG Repeaters ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ಶುಲ್ಕ ಪಾವತಿಸಲು ಅವಕಾಶ ನೀಡಲಾಗಿದೆ. (2020-21 ಸಾಲಿನಲ್ಲಿ ಅಕ್ಟೋಬರ್‌ನಲ್ಲಿ ಪರೀಕ್ಷೆ ಬರೆದ PG ವಿದ್ಯಾರ್ಥಿಗಳನ್ನು ಹೊರತು ಪಡಿಸಿ).
Recommended Video
ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ https://ksoumysuru.ac.in/ ಅಥವಾ https://ksouportal.com/views/ExamHome.aspx ಮೂಲಕ ಪರೀಕ್ಷಾ ಶುಲ್ಕವನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಪಾವತಿ ಮಾಡಬೇಕು. ಶುಲ್ಕ ಪಾವತಿಸಲು ಜ.24 ಕೊನೆಯ ದಿನ. ಫೆ.7 ರವರೆಗೆ 200ರೂ. ದಂಡ ಶುಲ್ಕದೊಂದಿಗೆ ಪಾವತಿಸಬೇಕು ಎಂದು ಸೂಚಿಸಲಾಗಿದೆ ಎಂದು ಪ್ರಾದೇಶಿಕ ನಿರ್ದೇಶಕ ಡಾ.ಆರ್. ಲೋಕೇಶ್ ತಿಳಿಸಿದ್ದಾರೆ.
ವಿವರಗಳಿಗೆ: 080-23448811, 9844506629, ಸಹಾಯವಾಣಿ- 8800335638












Click it and Unblock the Notifications