KPSC: ಅರ್ಥವಾಗದ 'ಪ್ರಶ್ನೆ'ಪತ್ರಿಕೆ: ಕೆಪಿಎಸ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕಕ್ಕಾಬಿಕ್ಕಿ

ಬೆಂಗಳೂರು, ಆಗಸ್ಟ್‌ 28: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳಿಗೆ ನೇಮಕಾತಿಗೆ ಮಂಗಳವಾರ ನಡೆಸಿದ ಪೂರ್ವಭಾವಿ ಪರೀಕ್ಷೆಯ ಎರಡನೇ ಪತ್ರಿಕೆಯಲ್ಲಿ ಕನ್ನಡದಲ್ಲಿ ಮುದ್ರಿತವಾಗಿದ್ದ ಕೆಲವು ಪ್ರಶ್ನೆಗಳ ಮಾದರಿಗಳಿವು. ಪ್ರಶ್ನೆಪತ್ರಿಕೆಯುದ್ದಕ್ಕೂ 'ಅರ್ಥ'ವಾಗದ ಇಂತಹ ವಾಕ್ಯಗಳೇ ತುಂಬಿವೆ. ಈ ಪ್ರಶ್ನೆಗಳು ಏನೆಂದೂ ಗೊತ್ತಾಗದೇ ಪರೀಕ್ಷಾರ್ಥಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.

ಇಂಗ್ಲಿಷ್ ಪ್ರಶ್ನೆಗಳನ್ನು ಎಐ ತಂತ್ರಜ್ಞಾನದ ನೆರವಿನಿಂದ ಭಾಷಾಂತರಿಸಿದಂತೆ ಇದೆ. ಕನ್ನಡ ಮಾಧ್ಯಮದ ಅನೇಕ ಅಭ್ಯರ್ಥಿಗಳು ಪ್ರಶ್ನೆಗಳನ್ನು ಓದಿ, ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಕೆಲವರು, ಇಂಗ್ಲಿಷ್‌ನಲ್ಲಿದ್ದ ಪ್ರಶ್ನೆಗಳನ್ನು ಓದಿ ಉತ್ತರವನ್ನು ಬರೆದಿದ್ದೂ ನಡೆದಿದೆ. ಅರ್ಥವಾಗದೇ ಇದ್ದ ಕನ್ನಡದ ಬಳಕೆಯ ವಿಧಾನದಿಂದ ಸಿಟ್ಟಿಗೆದ್ದ ಗ್ರಾಮೀಣ ಭಾಗದ ಅನೇಕ ಅಭ್ಯರ್ಥಿಗಳು ತಮಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

KPSC Prelims Exam Kannada Question Papers Issues

ಈ ಹಿಂದೆ ನಡೆದ ಪರೀಕ್ಷೆಗಳಲ್ಲಿ ಪಠ್ಯಕ್ರಮದಲ್ಲಿರುವ ಮಾದರಿಯಲ್ಲಿಯೇ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ, ಈ ಬಾರಿ ಯುಪಿಎಸ್‌ಸಿ ಮಾದರಿಯಲ್ಲಿ ಪ್ರಶ್ನೆಗಳಿದ್ದವು. ಪ್ರಶ್ನೆಪತ್ರಿಕೆಯ ಸ್ವರೂಪ ಕೂಡಾ ಗೊಂದಲ ಮೂಡಿಸಿತು ಎಂದು ಅಭ್ಯರ್ಥಿಗಳು ಹೇಳಿದರು.

ನೀರಿನ ಸಾಗಣೆಯ ಒಟ್ಟಾರೆ ಪ್ರಕ್ರಿಯೆಯಲ್ಲಿ ರೂಟ್ ಒತ್ತಡವು ಮಧ್ಯಮ ತಳ್ಳುವಿಕೆಯನ್ನು ಒದಗಿಸುತ್ತದೆ', 'ಹೆಚ್ಚಿನ ಸಸ್ಯಗಳು ತಮ್ಮ ನೀರಿನ ಅಗತ್ಯವನ್ನು ಟ್ರಾನ್ಸ್ ಫಿರೇಷನ್ ಪುಲ್ ಮೂಲಕ ಪೂರೈಸುತ್ತದೆ', 'ಕೈಲೆಮ್‌ ವೆಸಲ್ಸ್‌ನಲ್ಲಿ ನೀರಿನ ಅಣುವಿನ ನಿರಂತರ ಸರಪಳಿಗಳನ್ನು ಮರು ಸ್ಥಾಪಿಸುವುದು ಬೇರಿನ ಒತ್ತಡದ ದೊಡ್ಡ ಕೆಲಸವಾಗಿರುತ್ತದೆ. ಇದು ಆಗಾಗ್ಗೆ ಟ್ರಾನ್ಸಿಫಿರೇಷನ್‌ ಮೂಲಕ ರಚಿಸಲಾದ ಅಗಾಧವಾದ ಒತ್ತಡದಲ್ಲಿ ಒಡೆಯುತ್ತದೆ. ಗುಟೇಶನ್ ಟ್ರಾನ್ಸ್ ಫಿರೇಷನ್ ಪುಲ್ಲೆ ಕಾರಣವಾಗಿದೆ'

ಇಂಗ್ಲಿಷ್‌ನಲ್ಲಿದ್ದ ಪ್ರಶ್ನೆಪತ್ರಿಕೆಯನ್ನು ಗೂಗಲ್ ಮೂಲಕ ಕನ್ನಡಕ್ಕೆ ಭಾಷಾಂತರಿಸಿ ಯಥಾವತ್ ಬಳಸಲಾಗಿದೆ. ಬಹುತೇಕಇಂಗ್ಲಿಷ್ ಪದಗಳು ಕನ್ನಡಕ್ಕೆ ಸಂಪೂರ್ಣವಾಗಿ ತರ್ಜುಮೆ ಆಗಿಲ್ಲ. ಭಾಷಾಂತರಿಸಿದ ಬಳಿಕ ಪ್ರಶ್ನೆಪತ್ರಿಕೆಯನ್ನು ಯಾರೂ ಪರಿಶೀಲನೆ ಮಾಡಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ' ಎಂದು ಅಭ್ಯರ್ಥಿಯೊಬ್ಬರು ದೂರಿದರು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ, 214 ಸರ್ಕಾರಿ, 189 ಅನುದಾನಿತ ಹಾಗೂ 161 ಖಾಸಗಿ ಶಾಲಾ- ಕಾಲೇಜುಗಳು ಸೇರಿ ಒಟ್ಟು 564 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು.

ರಾಜ್ಯದ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ ಸಾಮಾನ್ಯ ಅಧ್ಯಯನ, ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಪರಿಸರ ವಿಜ್ಞಾನ ವಿಷಯ ಮತ್ತು ಸಾಮಾನ್ಯ ಮನೋ ಸಾಮರ್ಥ್ಯ ವಿಷಯದ ಪತ್ರಿಕೆ -2 ಪರೀಕ್ಷೆಯು ಮಧ್ಯಾಹ್ನ 2ರಿಂದ 4 ರವರೆಗೆ ನಡೆಯಿತು. ಈ ಪತ್ರಿಕೆಯಲ್ಲಿ ಸುಲಭದಲ್ಲಿ ಉತ್ತರಿಸುವಂತಹ ಪ್ರಶ್ನೆಗಳು ಇದ್ದವಾದರೂ, ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಲು ಕನ್ನಡದಲ್ಲಿ ಮುದ್ರಿತವಾಗಿದ್ದ ಪ್ರಶ್ನೆಗಳ ಬದಲು 'ಇಂಗ್ಲಿಷ್' ಭಾಷೆಯಲ್ಲಿದ್ದ ಪ್ರಶ್ನೆಗಳನ್ನು ನೋಡಬೇಕಾಯಿತು.

'ಪ್ರಶ್ನೆಪತ್ರಿಕೆ ಅತ್ಯಂತ ಕ್ಲಿಷ್ಟಕರವಾಗಿತ್ತು' ಎಂದು ಕನ್ನಡ ತರ್ಜುಮೆಯ ಭಾಗದ ಸಹಿತ ಮತ್ತು ಮೀಮ್‌ಗಳನ್ನೂ ಸೇರಿಸಿ ಕೆಲವು ಅಭ್ಯರ್ಥಿಗಳು ಟ್ವಿಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕ ಗ್ಯಾನೇಂದ್ರ ಗಂಗ್ವಾರ, 'ಅಭ್ಯರ್ಥಿಗಳ ಈ ಪ್ರತಿಕ್ರಿಯೆಗಳು ಮತ್ತು ಈ ರೀತಿಯ ಮೀಮ್‌ಗಳು ವೈಯಕ್ತಿಕವಾಗಿ ನನಗೆ ಇಷ್ಟ. ಕಷ್ಟಪಟ್ಟು ಓದಿದ ಮತ್ತು ಬುದ್ಧಿವಂತ ಅಭ್ಯರ್ಥಿಗಳು ಈ ಪ್ರಶ್ನೆಪತ್ರಿಕೆಯಿಂದ ಸಂತಸಪಟ್ಟಿರಬಹುದು' ಎಂದು ಟ್ವಿಟ್ ಮಾಡಿ, ಕೆಲವೇ ಕ್ಷಣಗಳಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+