ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರದಿಂದ 'ಕೆಪಿಸಿಎಲ್'ಗೆ ಹರಿದು ಬರಲಿದೆ 39,000 ಕೋಟಿ

ಕರ್ನಾಟಕ ವಿದ್ಯುತ್ ಶಕ್ತಿ ನಿಗಮ ಮತ್ತು ಬೆಸ್ಕಾಂಗೆ ಮುಂದಿನ 5 ವರ್ಷಗಳಲ್ಲಿ 39,121 ಕೋಟಿ ರೂಪಾಯಿ ಹರಿದು ಬರಲಿದೆ. ಕೇಂದ್ರ ಸರಕಾರದ ಗ್ರಾಮೀಣ ವಿದ್ಯುದ್ಧೀಕರಣ ನಿಗಮ ರಾಜ್ಯದ ಸಂಸ್ಥೆಗಳ ಜತೆ ಈ ಕುರಿತು ಒಪ್ಪಂದ ಮಾಡಿಕೊಂಡಿದೆ.

By Sachhidananda Acharya
|
Google Oneindia Kannada News

ಬೆಂಗಳೂರು, ಫೆಬ್ರವರಿ 6: ಕರ್ನಾಟಕ ವಿದ್ಯುತ್ ಶಕ್ತಿ ನಿಗಮ (ಕೆಪಿಸಿಎಲ್) ಮತ್ತು ಬೆಸ್ಕಾಂಗೆ (ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿ.) ಮುಂದಿನ 5 ವರ್ಷಗಳಲ್ಲಿ 39,121 ಕೋಟಿ ರೂಪಾಯಿ ಹರಿದು ಬರಲಿದೆ. ಕೇಂದ್ರ ಸರಕಾರದ ಗ್ರಾಮೀಣ ವಿದ್ಯುದ್ಧೀಕರಣ ನಿಗಮ (ಆರ್.ಇ.ಸಿ) ರಾಜ್ಯದ ಸಂಸ್ಥೆಗಳ ಜತೆ ಈ ಕುರಿತು ಒಪ್ಪಂದ ಮಾಡಿಕೊಂಡಿದ್ದು ದೊಡ್ಡ ಮೊತ್ತದ ಹಣದ ನೆರವು ನೀಡಲಿದೆ.

ಫೆಬ್ರವರಿ 3ರಂದು ಕೆಪಿಸಿಎಲ್ ಮತ್ತು ಬೆಸ್ಕಾಂ ಜತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಇಂಧನ ಮಂತ್ರಿ ಡಿ.ಕೆ ಶಿವಕುಮಾರ್ ಉಪಸ್ಥಿತಿಯಲ್ಲಿ ಆರ್.ಇ.ಸಿ ಒಪ್ಪಂದ ಮಾಡಿಕೊಂಡಿದೆ.[ಮಂಗಳೂರಿನ ಕಚ್ಚಾ ತೈಲ ಸಂಗ್ರಹಾಗಾರಕ್ಕೆ ಯುಎಇ ಇಂಧನ]

KPCL and BESCOM will get Rs 39,121 crore financial assistance from REC

ಕೆಪಿಸಿಎಲ್ ಒಟ್ಟು 27,121 ಕೋಟಿ ರೂಪಾಯಿ ನೆರವು ಪಡೆದುಕೊಳ್ಳಲಿದ್ದು ನಿಗಮದ ಸಾಲ ಸಂದಾಯ, ಭವಿಷ್ಯದ ಯೋಜನೆಗಳಿಗೆ ಬಳಸಿಕೊಳ್ಳಬಹುದಾಗಿದೆ. ಇದೇ ರೀತಿ ಬೆಸ್ಕಾಂ 12,000 ಕೋಟಿ ರೂಪಾಯಿ ಪಡೆದುಕೊಳ್ಳಲಿದೆ. ಈ ಹಣವನ್ನು ಹೊಸ ವಿದ್ಯುತ್ ಉತ್ಪಾದನೆ ಯೋಜನೆಗಳು, ಸರಬರಾಜು ವ್ಯವಸ್ಥೆಯ ವಿಸ್ತರಣೆ ಮತ್ತು ನವೀಕರಣ, ವಿದ್ಯುತ್ ವರ್ಗಾವಣೆ ವ್ಯವಸ್ಥೆಗಳ ಸುಧಾರಣೆ, ವಿದ್ಯುತ್ ಮೇಲಿನ ಸಂಶೋಧನೆ ಮತ್ತು ಅಭಿವೃದ್ದಿಗೆ ಬಳಸಿಕೊಳ್ಳಬಹುದಾಗಿದೆ.[ತಮಿಳುನಾಡು ಅಣು ಸ್ಥಾವರರಿಂದ ಕರ್ನಾಟಕಕ್ಕೆ 221 ಮೆ. ವ್ಯಾ ವಿದ್ಯುತ್!]

ಧನ ಸಹಾಯವೂ ಅಲ್ಲದೇ ಆರ್.ಇ.ಸಿ ರಾಜ್ಯ ಸಂಸ್ಥೆಗಳ ಯೋಜನೆಗಳಿಗೆ ಸಲಹೆ ಸೂಚನೆಗಳನ್ನೂ ನೀಡಲಿದೆ. ಈ ದೊಡ್ಡ ಮೊತ್ತದ ಸಹಾಯ ಕರ್ನಾಟಕ ಇಂಧನ ಕೊರತೆ ನೀಗಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆ ಇದೆ.

English summary
State run Rural Electrification Corp (REC) will provide Rs 39,121 crore assistance to KPCL and BESCOM till March 2022 for implementation of distribution projects in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X