ಈಶ್ವರ್ ಖಂಡ್ರೆ ವ್ಯಾಕರಣ ದೋಷಕ್ಕೆ ನಗಾಡಿದ ನೆಟ್ಟಿಗರು
Recommended Video
ಬೆಂಗಳೂರು, ಆಗಸ್ಟ್ 09: ಎಐಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರು ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ಸಕ್ರಿಯರಾಗಿತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಂವಹನಕ್ಕೆ ಅವರು ಬಹುವಾಗಿ ಕನ್ನಡವನ್ನೇ ಬಳಸುತ್ತಾರೆ. ಆದರೆ ಇಂದು ಖಂಡ್ರೆ ಅವರು ಆಡಿದ ಟ್ವೀಟ್ ಒಂದು ನಗೆ ಪಾಟಲಿಗೆ ಈಡಾಗಿದೆ.
ಈಶ್ವರ್ ಖಂಡ್ರೆ ಅವರು ಪ್ರವಾಹ ಸಂತ್ರಸ್ಥರ ಮೇಲಿನ ಕಾಳಜಿಯಿಂದ ಇಂದು ಟ್ವೀಟ್ ಒಂದನ್ನು ಮಾಡಿದ್ದಾರೆ. ಆದರೆ ಆ ಟ್ವೀಟ್‌ನಲ್ಲಿನ ವ್ಯಾಕರಣ ದೋಷ ನೆಟ್ಟಿಗರ ಕಣ್ಣುಕುಕ್ಕಿದೆ.
ರಾಜ್ಯದ ಹತ್ತಾರು ಜಿಲ್ಲೆಗಳಲ್ಲಿ ನೆರೆಹಾವಳಿ ಹೆಚ್ಚಾಗಿದೆ. ಮಹಾರಾಷ್ಟ್ರದ ಅಣೆಕಟ್ಟೆಗಳಿಂದ ನೀರು ಹೆಚ್ಚು ಬಿಟ್ಟಿದ್ದರಿಂದ ರಾಜ್ಯದಲ್ಲಿ ಅತಿವೃಷ್ಟಿ ಉಂಟಾಗಿದೆ. ಆದರೆ ಸರ್ಕಾರ ಏನೂ ಮಾಡುತ್ತಿಲ್ಲ, ಇಂತಹಾ ಕಠಿಣ ಪರಿಸ್ಥಿತಿಯಲ್ಲಿ ಯುದ್ಧೋಪಾದಿಯಲ್ಲಿ ಕೆಲಸ ಆಗಬೇಕಿತ್ತು ಎಂಬುದು ಈಶ್ವರ್ ಖಂಡ್ರೆ ಮಾಡಿರುವ ಟ್ವೀಟ್‌ನ ಭಾವಾರ್ಥ.

ಆದರೆ ಅವರು ಮಾಡಿರುವ 28 ಪದದ ಟ್ವೀಟ್‌ನಲ್ಲಿ ಹಲವು ವ್ಯಾಕರಣ ದೋಷಗಳಿವೆ. ಬಿಟ್ಟಿದ್ದರಿಂದ ಎಂಬುದು 'ಬಿಟ್ಟಿದ್ದತಿಂದ' ಎಂದಾಗಿದೆ. ಉಂಟಾಗಿದೆ ಎಂಬುದು 'ಉಂಟಗಿದೆ', ಯುದ್ಧೋಪಾದಿಯಲ್ಲಿ ಎಂಬುದನ್ನು 'ಯುದ್ಧೋಪಾದಿಯಾಲಿ' ಎಂದು ಬರೆದಿದ್ದಾರೆ. ಡ್ಯಾಂಗಳಿಂದ ಎನ್ನುವುದು 'ಡ್ಯಾಂಗಳಿಂಡದ' ಎಂದಾಗಿದೆ ಹೀಗೆ ಇನ್ನೂ ಕೆಲವು ವ್ಯಾಕರಣ ದೋಷಗಳು ಖಂಡ್ರೆ ಅವರ ಟ್ವೀಟ್‌ನಲ್ಲಿವೆ.
ಈಶ್ವರ್ ಖಂಡ್ರೆ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯಂತೆ ಅವರು ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಉತ್ತಮ ಶಿಕ್ಷಣ ಪಡೆದಿರುವ ಅವರಿಗೆ ಕನ್ನಡ ಸರಿಯಾಗಿ ಬರುವುದಿಲ್ಲವೇ ಎಂಬ ಅನುಮಾನ ಇಂದಿನ ಅವರ ಟ್ವೀಟ್ ಅನ್ನು ನೋಡಿದವರಿಗೆ ಮೂಡದೇ ಇರದು.

ಈಶ್ವರ್ ಖಂಡ್ರೆ ಅವರ ವ್ಯಾಕರಣ ದೋಷ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಖಂಡ್ರೆ ಅವರ ಟ್ವೀಟ್‌ನ ಸ್ಕ್ರೀನ್ ಶಾಟ್‌ಗಳು ಫೇಸ್‌ಬುಕ್, ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿವೆ.












Click it and Unblock the Notifications