Karnataka Politics: ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ದ್ರೋಹ: ಕಾಂಗ್ರೆಸ್ ಆರೋಪ
ಡಬಲ್ ಎಂಜಿನ್ ಸರ್ಕಾರ ರಾಜ್ಯದ ಜನರಿಗೆ ಡಬಲ್ ದ್ರೋಹ ಮಾಡುತ್ತಿದೆ ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೆಪಿಸಿಸಿ, ಬಿಜೆಪಿ ಡಬಲ್ ಎಂಜಿನ್‌ನಿಂದ ರಾಜ್ಯದ ಜನತೆಗೆ ಡಬಲ್ ಲಾಭವಂತೂ ಆಗಿಲ್ಲ ಎಂದು ಹೇಳಿದೆ.
"ಡಬಲ್ ಎಂಜಿನ್ ಎಂದರೆ ರಾಜ್ಯದ ಜನತೆಗೆ ಡಬಲ್ ಲಾಭ ಆಗಬೇಕಿತ್ತು. ಆದರೆ ಆಗುತ್ತಿರುವುದು 'ಡಬಲ್ ಲೂಟಿ!'. ಬೆಲೆ ಏರಿಕೆ ಜನತೆಯ ಜೀವನವನ್ನೇ ಸುಡುತ್ತಿದೆ. ಇವರು ರಾಜ್ಯವನ್ನು ಲೂಟಿ ಮಾಡಿರುವುದಷ್ಟೇ ಅಲ್ಲ. ನಿಮ್ಮ ಉಳಿತಾಯವನ್ನೂ ಪ್ರತಿದಿನ ಲೂಟಿ ಮಾಡುತ್ತಿದ್ದಾರೆ. ಡಬಲ್ ಎಂಜಿನ್ ಡಬಲ್ ದ್ರೋಹ!" ಎಂದು ಟ್ವೀಟ್ ಮಾಡಿದೆ.

ಬೆಲೆ ಏರಿಕೆಯ ಬಗ್ಗೆ ಕಾಂಗ್ರೆಸ್ ವಿಸ್ತಾರವಾದ ಜಾಹೀರಾತು ನೀಡುವ ಮೂಲಕ ಬಿಜೆಪಿ ಅವಧಿಯಲ್ಲಿ ಆಗಿರುವ ಬೆಲೆ ಏರಿಕೆ ಬಗ್ಗೆ ಮಾಹಿತಿ ನೀಡಿದೆ. 2014 ಮತ್ತು 2023 ರ ನಡುವೆ ಆಗಿರುವ ಬೆಲೆ ಏರಿಕೆಯ ವಿವರವನ್ನು ನೀಡಿದೆ. ಜನರ ದಿನನಿತ್ಯದ ಅಗತ್ಯ ವಸ್ತುಗಳ ದರವನ್ನು ಹೆಚ್ಚಿಸುವ ಮೂಲಕ ಬಿಜೆಪಿ ದ್ರೋಹ ಮಾಡಿದೆ ಎಂದು ಕಾಂಗ್ರೆಸ್ ಹೇಳಿದೆ.
ಪೆಟ್ರೋಲ್, ಡೀಸೆಲ್, ಬೇಳೆ, ಅಕ್ಕಿ, ಸಕ್ಕರೆ, ಗೋಧಿ ಹಿಟ್ಟು ಸೇರಿದಂತೆ ಹಲವು ಜೀವನಾಶ್ಯವಕ ವಸ್ತುಗಳ ದರಗಳು 2014 ರಲ್ಲಿ ಎಷ್ಟಿತ್ತು ಈಗ ಎಷ್ಟಿದೆ ಎನ್ನುವುದರ ಬಗ್ಗೆ ದರ ಪಟ್ಟಿಯನ್ನು ನೀಡಿದೆ.
ಡಬಲ್ ಎಂಜಿನ್ ಎಂದರೆ ರಾಜ್ಯದ ಜನತೆಗೆ ಡಬಲ್ ಲಾಭ ಆಗಬೇಕಿತ್ತು. ಆದರೆ ಆಗುತ್ತಿರುವುದು 'ಡಬಲ್ ಲೂಟಿ!'
— Karnataka Congress (@INCKarnataka) May 7, 2023
ಬೆಲೆ ಏರಿಕೆ ಜನತೆಯ ಜೀವನವನ್ನೇ ಸುಡುತ್ತಿದೆ. ಇವರು ರಾಜ್ಯವನ್ನು ಲೂಟಿ ಮಾಡಿರುವುದಷ್ಟೇ ಅಲ್ಲ. ನಿಮ್ಮ ಉಳಿತಾಯವನ್ನೂ ಪ್ರತಿದಿನ ಲೂಟಿ ಮಾಡುತ್ತಿದ್ದಾರೆ.
ಡಬಲ್ ಎಂಜಿನ್ ಡಬಲ್ ದ್ರೋಹ!
ಕಾಂಗ್ರೆಸ್ ಗೆಲ್ಲಿಸಿ
ಕರ್ನಾಟಕ ಉಳಿಸಿ… pic.twitter.com/0J7C0ddgTG
ವಿಪಕ್ಷ ನಾಯಕ ಸಿದ್ಧರಾಮಯ್ಯ ರಾಜ್ಯದಲ್ಲಿ ಭ್ರಷ್ಟಾಚಾರ ಆಡಳಿತ ನಡೆದಿದೆ ಎಂದು ಆರೋಪಿಸಿದ್ದು, "ಪ್ರಧಾನಿಯವರು ರಾಜ್ಯದಲ್ಲೇ ಠಿಕಾಣಿ ಹೂಡಿ ಬಾಯ್ತುಂಬಾ ಮಾತನಾಡುತ್ತಿದ್ದಾರೆ. ಆದರೆ ಕರ್ನಾಟಕದ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರು ಪ್ರಧಾನಿಗಳಿಗೇ ಪತ್ರ ಬರೆಯುವಷ್ಟು ಇಲ್ಲಿ ಭ್ರಷ್ಟಾಚಾರ ತಾರಕಕ್ಕೇರಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.












Click it and Unblock the Notifications