ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೇದಿಕೆ ಮೇಲೆ ಪರಿಷ್ಕೃತ ಪಠ್ಯದ ಪ್ರತಿ ಹರಿದು ಹಾಕಿದ ಡಿಕೆಶಿ

|
Google Oneindia Kannada News

ಬೆಂಗಳೂರು, ಜೂನ್ 18; ರಾಜ್ಯ ಸರ್ಕಾರ ರಚಿಸಿದ ರೋಹಿತ್ ಚಕ್ರ ತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯ ಪುಸ್ತಕ ಸಂವಿಧಾನ ವಿರುದ್ಧವಾದ್ದು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಮಾವೇಶದ ವೇದಿಕೆ ಮೇಲೇಯೆ ಪರಿಷ್ಕೃತ ಪಠ್ಯದ ಪ್ರತಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ (ಕರ್ನಾಟಕ) ವತಿಯಿಂದ ನಡೆದ ಬೃಹತ್ ಸಮಾವೇಶದಲ್ಲಿ ಭಾಷಣ ಮುಗಿಸಿದ ಬಳಿಕ ಶರಣ ಬಸವಣ್ಣರನ್ನು, ದಲಿತ ಲೇಖಕರನ್ನು, ರಾಷ್ಟ್ರಕವಿ ಕುವೆಂಪು ಸೇರಿದಂತೆ ಮಹನೀಯರಿಗೆ ಅಪಮಾನ ಮಾಡಿದ ಈ ಪರಿಷ್ಕೃತ ಪಠ್ಯ ನಮಗೆ ಬೇಡ ಎಂದು ಪ್ರತಿ ಹರಿದು ಹಾಕಿದರು.

ಐಎಎಫ್ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್‌ಗೆ ವೀರ ಚಕ್ರ ಪ್ರಶಸ್ತಿ ಪ್ರದಾನ ಐಎಎಫ್ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್‌ಗೆ ವೀರ ಚಕ್ರ ಪ್ರಶಸ್ತಿ ಪ್ರದಾನ

ಇದಕ್ಕೂ ಮುನ್ನ ಮಾತನಾಡಿದ ಡಿ. ಕೆ. ಶಿವಕುಮಾರ್, "ನಾನೊಬ್ಬ ರಾಜಕಾರಣಿ ಆಗಿ ಪ್ರತಿಭಟನೆ ಬೆಂಬಲಿಸಲು ಬಂದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಷದ ಅಧ್ಯಕ್ಷನಾಗಿ ಬಂದಿದ್ದೇನೆ. ನಿಮ್ಮ ಹೋರಾಟಕ್ಕೆ ಕಾಂಗ್ರೆಸ್‌ನ ಸಂಪೂರ್ಣ ಬೆಂಬಲ ಇದೆ. ಪಠ್ಯ ಪರಿಷ್ಕರಣೆ ವಾಪಾಸ್ ಪಡೆಯುವವರೆಗೂ ನಿಮ್ಮ ಜತೆ ನಿಲ್ಲಿತ್ತೇನೆ" ಎಂದರು.

ಪಠ್ಯ ಪರಿಷ್ಕರಣೆ ವಿರುದ್ಧ ಆಕ್ರೋಶ; ತೀರ್ಥಹಳ್ಳಿಯಲ್ಲಿ ಪಾದಯಾತ್ರೆಪಠ್ಯ ಪರಿಷ್ಕರಣೆ ವಿರುದ್ಧ ಆಕ್ರೋಶ; ತೀರ್ಥಹಳ್ಳಿಯಲ್ಲಿ ಪಾದಯಾತ್ರೆ

KPCC President DK Shivakumar Tears The Copy Of A Revised Textbook

"ಧರ್ಮ, ಜಾತಿ ಎಂದು ಭಿನ್ನತೆ ಇದ್ದರು. ನಾಡ ಧ್ವಜ ವಿಚಾರದಲ್ಲಿ ನಾವೆಲ್ಲ ಒಟ್ಟಾಗಿ ಇಲ್ಲಿ ಸೇರಿದ್ದೇವೆ. ನಾವು ಎಲ್ಲರನ್ನು ಗೌರವಿಸುತ್ತೇವೆ. ಆದರೆ ಅನ್ಯಾಯ ಕಂಡು ಸುಮ್ಮನಿರಲ್ಲ" ಎಂದು ಸರ್ಕಾರದ ವಿರುದ್ಧ ಹೋರಾಟ ಕರೆ ಕೊಟ್ಟ ಸಂಘಟನೆಗಳನ್ನು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದರು.

ಪಠ್ಯ ಪುಸ್ತಕ ವಿವಾದ; ಬರಗೂರು ವಿರುದ್ಧ ಬಿ. ಸಿ. ನಾಗೇಶ್ ವಾಗ್ದಾಳಿಪಠ್ಯ ಪುಸ್ತಕ ವಿವಾದ; ಬರಗೂರು ವಿರುದ್ಧ ಬಿ. ಸಿ. ನಾಗೇಶ್ ವಾಗ್ದಾಳಿ

ಪಠ್ಯ ಯಾರ ಸ್ವತ್ತಲ್ಲ: "ಚಿಂತಕ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ನೀಡಿದ ಹಳೆಯ ಪಠ್ಯ ‌ಇಡಿ ನಾಡೆ ಒಪ್ಪಿಕೊಂಡ ಆಸ್ತಿ. ಅದು ಯಾರ ಸ್ವತ್ತಲ್ಲ. ಸರ್ಕಾರವೇನಾದರ ಪರಿಷ್ಕೃತ ಪಠ್ಯ ಮುಂದುವರಿಸಿದ್ದೇ ಆದರೆ ಅಧಿಕಾರ ಕಳೆದುಕೊಳ್ಳುತ್ತೀರಿ. ನಾಡಿನ ಜನರ ಆಕ್ರೋಶಕ್ಕೆ ಗುರಿ ಯಾಗುತ್ತೀರಿ" ಎಂದು ಡಿ. ಕೆ. ಶಿವಕುಮಾರ್ ಕಿಡಿ ಕಾರಿದರು.

KPCC President DK Shivakumar Tears The Copy Of A Revised Textbook

"ರಾಜಕಾರಣಕ್ಕೆ ಈ‌ ನಾಡಿನಲ್ಲಿರುವ ಮೂರು ಸಾವಿರ ಮಠಾಧೀಶರ ಬೆಂಬಲ ಬೇಡ. ನಾಡಿನ‌ ಸಂಸ್ಕೃತಿ, ಪರಂಪರೆ, ಸಂವಿಧಾನ, ಧರ್ಮ ಉಳಿಸಲು ಮಠಾಧೀಶರು ಧ್ವನಿ ಎತ್ತಬೇಕು. ಹೋರಾಟಗಾರರಿಗೆ ನಿಮ್ಮ‌ ಬೆಂಬಲ ಬೇಕು" ಎಂದು ಅವರು ಆಗ್ರಹಿಸಿದರು.

English summary
KPCC president D. K. Shivakumar tore down the copy of a revised textbook as a protest over the addition and deletion of content in school books. Huge protest held at Bengaluru on June 18th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X