• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡಿಕೆಶಿ ಪದಗ್ರಹಣಕ್ಕೆ ಮತ್ತೊಂದು ಮಹೂರ್ತ: ಈ ಬಾರಿಯಾದರೂ ಸರಕಾರ ಅನುಮತಿ ನೀಡುತ್ತಾ?

|
Google Oneindia Kannada News

ಬೆಂಗಳೂರು, ಜೂನ್ 6: ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣಕ್ಕೆ ಮತ್ತೊಂದು ದಿನವನ್ನು ನಿಗದಿ ಮಾಡಲಾಗಿದೆ. ಜೂನ್ 14ರಂದು ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ.

   India surpasses Italy in Corona cases count | Oneindia kannada

   ಪದಗ್ರಹಣ ಮಾಡಲು ನಿಗದಿ ಪಡಿಸಿದ ಮೂರನೇ ದಿನಾಂಕ ಇದಾಗಿದೆ. ಮೊದಲು, ಮೇ 24ಕ್ಕೆ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಿದ್ದರು. ಆದರೆ, ಭಾನುವಾರದ ಕರ್ಫ್ಯೂ ಇದ್ದಿದ್ದರಿಂದ ಇದು ರದ್ದಾಗಿತ್ತು.

   ರಾಜ್ಯಸಭಾ ಚುನಾವಣೆ, ಹೈಕಮಾಂಡ್ ಒಲವು ಯಾರತ್ತ? ಸಿದ್ದರಾಮಯ್ಯ Vs ಡಿ.ಕೆ.ಶಿವಕುಮಾರ್ರಾಜ್ಯಸಭಾ ಚುನಾವಣೆ, ಹೈಕಮಾಂಡ್ ಒಲವು ಯಾರತ್ತ? ಸಿದ್ದರಾಮಯ್ಯ Vs ಡಿ.ಕೆ.ಶಿವಕುಮಾರ್

   ಇದಾದ ನಂತರ, ಜೂನ್ ಏಳರಂದು ಪದಗ್ರಹಣ ಮಾಡಬೇಕಿತ್ತು. ಆದರೆ, ಜೂನ್ ಎಂಟರವರೆಗೆ, ರಾಜಕೀಯ ಸಭೆ ನಡೆಸಲು ಕೇಂದ್ರದ ಅನುಮತಿ ಇಲ್ಲ ಎನ್ನುವ ಕಾರಣಕ್ಕಾಗಿ ಇದು ಕ್ಯಾನ್ಸಲ್ ಆಗಿತ್ತು.

   "ಜೂನ್ ಹದಿನಾಲ್ಕರಂದು ಪದಗ್ರಹಣ ಸರಳ ಕಾರ್ಯಕ್ರಮ ಪಕ್ಷದ ಕಚೇರಿಯಲ್ಲಿ ನಡೆಸಲು ಉದ್ದೇಶಿಸಿದ್ದೇವೆ. ಇದಕ್ಕಾಗಿ ಸರಕಾರಕ್ಕೆ ಅನುಮತಿಗಾಗಿ ಪತ್ರ ಬರೆದಿದ್ದೇವೆ"ಎಂದು ಕೆಪಿಸಿಸಿ ಅಧಿಕಾರಿಗಳು ಹೇಳಿದ್ದಾರೆ.

   ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಂದ ಪಕ್ಷದ ಧ್ವಜವನ್ನು ಪಡೆದು, ಡಿ.ಕೆ.ಶಿವಕುಮಾರ್ ಅವರು ಅಧಿಕೃತವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆ.

   ಸಿದ್ದರಾಮಯ್ಯ, ಡಿಕೆಶಿ 'ರಾಜಕೀಯ ಜ್ಞಾನ'ದ ಬಗ್ಗೆ ಈಶ್ವರಪ್ಪ ವಿವರಣೆಸಿದ್ದರಾಮಯ್ಯ, ಡಿಕೆಶಿ 'ರಾಜಕೀಯ ಜ್ಞಾನ'ದ ಬಗ್ಗೆ ಈಶ್ವರಪ್ಪ ವಿವರಣೆ

   "ಪ್ರಮಾಣವಚನ ಸ್ವೀಕರಿಸದೇ ಇದ್ದರೂ, ನನ್ನ ಕೆಲಸವನ್ನು ಮಾಡಿಕೊಂಡು ಬಂದಿದ್ದೇನೆ, ಇದರಲ್ಲಿ ಸರಕಾರದ ರಾಜಕೀಯ ಪಿತೂರಿಯಿದೆ"ಎಂದು ಡಿಕೆಶಿ, ಎರಡನೇ ಬಾರಿಯೂ ಅನುಮತಿ ಸಿಗದೇ ಇದ್ದಿದ್ದಕ್ಕೆ ಸರಕಾರದ ವಿರುದ್ದ ಕೆಂಡಾಮಂಡಲವಾಗಿದ್ದರು.

   English summary
   KPCC Letter To Government Seeking Permission To DK Shivakumar Oath Taking Ceremony.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion