ಕೆಪಿಸಿಸಿಗೆ 40 ಜನ ಉಪಾಧ್ಯಕ್ಷರು, 109 ಪ್ರಧಾನ ಕಾರ್ಯದರ್ಶಿಗಳ ನೇಮಕ
ಬೆಂಗಳೂರು, ಏ.09: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ದೊಡ್ಡ ಪಡೆಯೊಂದನ್ನು ಸಜ್ಜುಗೊಳಿಸುವ ಪ್ರಯತ್ನ ಮಾಡಿದೆ.
ಬರೋಬ್ಬರಿ 40 ಹಿರಿಯ ನಾಯಕರನ್ನು ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ಮತ್ತು 109 ಜನರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಶನಿವಾರ ಸಂಜೆ ಆದೇಶ ಹೊರಡಿಸಿದ್ದಾರೆ.
ಉಪಾಧ್ಯಕ್ಷರು:
ಉಪಾಧ್ಯಕ್ಷರಾಗಿ ಅಭಯಚಂದ್ರ ಜೈನ್, ಅಶೋಕ್ ಪಟ್ಟಣ, ಬಿ.ಎನ್. ಚಂದ್ರಪ್ಪ, ಬಸವರಾಜ ರಾಯರಡ್ಡಿ, ಡಿ.ಆರ್. ಪಾಟೀಲ್, ಡೇವಿಡ್ ಸಿಮೋನ್, ಬಿ.ಎಲ್. ಶಂಕರ್, ಡಾ.ಎಲ್. ಹನುಮಂತಯ್ಯ, ಶರಣ ಪ್ರಕಾಶ ಪಾಟೀಲ್, ಜಿ. ಪದ್ಮಾವತಿ, ಜಿ.ಸಿ. ಚಂದ್ರಶೇಖರ್, ಎಚ್. ಆಂಜನೇಯ, ಎಚ್.ಎಂ. ರೇವಣ್ಣ, ಹಸನ್ ಸಾಬ್ ದೋಟಿಹಾಳ್, ಐವನ್ ಡಿಸೋಜಾ, ಕೆ.ಎನ್. ರಾಜಣ್ಣ, ಎಂ.ಸಿ. ವೇಣುಗೋಪಾಲ್, ಎಂ.ಆರ್. ಸೀತಾರಾಂ, ಮಧು ಬಂಗಾರಪ್ಪ, ಮಲ್ಲಿಕಾರ್ಜುನ ನಾಗಪ್ಪ.

ಮಂಜುನಾಥ ಭಂಡಾರಿ, ಎನ್. ಚಲುವರಾಯಸ್ವಾಮಿ, ನಾರಾಯಣಸ್ವಾಮಿ, ನರೇಂದ್ರಸ್ವಾಮಿ, ನಾಸಿರ್ ಹುಸೇನ್, ಪಿ.ಆರ್. ರಮೇಶ್, ಪಿ.ವಿ. ಮೋಹನ್, ಪ್ರಕಾಶ್ ಹುಕ್ಕೇರಿ, ಪ್ರಮೋದ್ ಮಧ್ವರಾಜ್, ಆರ್.ಬಿ. ತಿಮ್ಮಾಪುರ, ರಮಾನಾಥ್ ರೈ, ಎಸ್.ಇ. ಸುಧೀಂದ್ರ, ಸಂತೋಷ್ ಲಾಡ್, ಶರಣಪ್ಪ ಮಟ್ಟೂರು, ಶಿವರಾಮೇಗೌಡ, ಸುಜಾತಾ ಹೆಗಡೆ, ತಿಪ್ಪಣ್ಣಪ್ಪ, ವಿ.ಎಸ್. ಉಗ್ರಪ್ಪ, ವಿನಯ್ ಕುಲಕರ್ಣಿ, ವಿನಯ್‌ಕುಮಾರ್ ಸೊರಕೆ ಅವರನ್ನು ನೇಮಿಸಲಾಗಿದೆ.
ಪ್ರಧಾನ ಕಾರ್ಯದರ್ಶಿಗಳು:
ಎ.ಸಿ. ಶ್ರೀನಿವಾಸ, ಬ್ರಿಜೇಶ್ ಕಾಳಪ್ಪ, ಅಕೈ ಪದ್ಮಶಾಲಿ, ಬಿ. ಗುರಪ್ಪ ನಾಯ್ಡು, ಡಾ.ಎಚ್.ಎನ್. ರವೀಂದ್ರ ಸೇರಿ 109 ಜನರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಜಾತಿವಾರು ಪರಿಗಣಿಸಿದಾಗ ಹಿಂದುಳಿದ ವರ್ಗ 53, ಪರಿಶಿಷ್ಟ ಜಾತಿ 25, ಪರಿಶಿಷ್ಟ ಪಂಗಡ 4, ಮಹಿಳೆ 23, ಅಲ್ಪಸಂಖ್ಯಾತ 22, ಲಿಂಗಾಯತ 19, ರೆಡ್ಡಿ ಲಿಂಗಾಯತ 5, ಒಕ್ಕಲಿಗ 16, ಲೈಂಗಿಕ ಅಲ್ಪಸಂಖ್ಯಾತ 1 ಮತ್ತು ಇತರೆ 4 ಜನರಿಗೆ ಅವಕಾಶ ನೀಡಲಾಗಿದೆ.












Click it and Unblock the Notifications