ರಾಹುಲ್ ಗಾಂಧಿ ಆಯ್ಕೆಯ ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು, ಜುಲೈ 14: ಮುಂಬರುವ ಚುನಾವಣೆಯನ್ನು ಎದುರಿಸಲು ಸಿದ್ಧರಾಗಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಈ ಬೃಹತ್ ಪಟ್ಟಿಗೆ ಅಸ್ತು ಎಂದಿದ್ದಾರೆ.


ಕೆಪಿಸಿಸಿಯ ಪ್ರಮುಖ ಪದಾಧಿಕಾರಿಗಳ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ. ಚುನಾವಣೆಗೆ ಅಣಿಯಾಗುವ ನಿಟ್ಟಿನಲ್ಲಿ ಅನೇಕ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಹಿರಿಯ ನಾಯಕರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಒಟ್ಟು 17 ಉಪಾಧ್ಯಕ್ಷರು, ಒಬ್ಬ ಖಜಾಂಚಿ, 57 ಪ್ರಧಾನ ಕಾರ್ಯದರ್ಶಿಗಳು ಹಾಗೂ 96 ಕಾರ್ಯದರ್ಶಿಗಳನ್ನು ನೇಮಿಸಲಾಗಿದೆ.

KPCC gets new office-bearers

ರಾಜ್ಯದ ಎಲ್ಲ ಭಾಗಗಳಿಗೆ ಪ್ರಾತಿನಿಧ್ಯ, ಜಾತಿವಾರು ಲೆಕ್ಕಾಚಾರ ಗಮನದಲ್ಲಿ ಇರಿಸಿಕೊಂಡು ಕಾಂಗ್ರೆಸ್ ಹೈಕಮಾಂಡ್ ಈ ಪಟ್ಟಿ ಸಿದ್ಧಪಡಿಸಿದೆ. ಉಪಾಧ್ಯಕ್ಷರ ಪೈಕಿ ಹಿರಿಯರನ್ನು ಮುಂದುವರಿಸಲಾಗಿದೆ. ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿ ಹುದ್ದೆಗೆ ಬಹುತೇಕ ಯುವಕರಿಗೆ ಅವಕಾಶ ನೀಡಲಾಗಿದೆ.

ಉಪಾಧ್ಯಕ್ಷರು: ಡಾ.ಬಿ.ಎಲ್. ಶಂಕರ್, ಪ್ರೊ.ಬಿ.ಕೆ. ಚಂದ್ರಶೇಖರ್, ವೀರಣ್ಣ ಮತ್ತೀಕಟ್ಟಿ, ಮೋಟಮ್ಮ, ಎನ್.ವೈ. ಹನುಮಂತಪ್ಪ, ಬಿ.ಶಿವರಾಮ್, ಎಚ್.ಟಿ. ಸಾಂಗ್ಲಿಯಾನ, ರಾಣಿ ಸತೀಶ್, ಎ.ಎಂ. ಹಿಂಡಸಗೇರಿ, ವೀರಕುಮಾರ ಪಾಟೀಲ್, ಡಿ.ಆರ್. ಪಾಟೀಲ್, ಎಲ್.ಹನುಮಂತಯ್ಯ, ಪ್ರೊ.ರಾಧಾಕೃಷ್ಣ, ಎನ್.ಎಸ್. ಬೋಸರಾಜ್, ಆರ್.ಕೃಷ್ಣಪ್ಪ, ಮಿಟ್ಟು ಚೆಂಗಪ್ಪ ಮತ್ತು ಕೆ.ಸಿ. ಕೊಂಡಯ್ಯ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress vice-president Rahul Gandhi has approved a new list of office-bearers of the Karnataka Pradesh Congress Committee (KPCC).It includes 17 vice-presidents, a treasurer, 57 general secretaries, and 96 secretaries
Please Wait while comments are loading...