ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌಪರ್ಣಿಕಾ ನದಿ ಉಳಿಸಲು ಉಪವಾಸ ಸತ್ಯಾಗ್ರಹ

|
Google Oneindia Kannada News

ಕೊಲ್ಲೂರು, ನ. 3: ಇತಿಹಾಸ ಪ್ರಸಿದ್ಧ ಸೌಪರ್ಣಿಕಾ ನದಿಯನ್ನು ಮಾಲಿನ್ಯ ಮುಕ್ತಗೊಳಿಸಲು ಕೇಮಾರು ಶ್ರೀ ನೇತೃತ್ವದಲ್ಲಿ ನವೆಂಬರ್ 9 ರಂದು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.

'ದೇವರು ಕ್ಷಮಿಸುತ್ತಾನೆ, ಆದರೆ ಪಕೃತಿ ಕ್ಷಮಿಸುವುದಿಲ್ಲ' ಎಂಬ ಘೋಷ ವಾಕ್ಯದಡಿ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ನಡೆಯಲಿದೆ. ಕೊಲ್ಲೂರು ಮೂಕಾಂಬಿಕಾ ದೇವಾಲಯದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕೊಡಚಾದ್ರಿ ಪರಿಸರ ಸಂರಕ್ಷಣಾ ಟ್ರಸ್ಟ್ , ಪರಶುರಾಮ ಸೇನೆ ಕೊಲ್ಲೂರು ಮತ್ತು ಹಿಂದು ಪರ ಸಂಘಟನೆಗಳ ಆಶ್ರಯದಲ್ಲಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.(ಆರೇ ಗಂಟೆಯಲ್ಲಿ ಸ್ವಚ್ಛವಾಯಿತು ಪುರಾತನ ಪುಷ್ಕರಣಿ]

ನದಿಯ ಮಲಿನಗೊಂಡು ಪಾವಿತ್ರ್ಯತೆ ಕಳೆದುಕೊಳ್ಳುವ ಅಪಾಯದಲ್ಲಿದೆ. ಕೊಲ್ಲೂರಿಗೆ ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಬರುತ್ತಿದೆ. ಆದರೆ, ಇಲ್ಲಿ ಮೂಲ ಸೌಕರ್ಯದ ಕೊರತೆ ಕಾಣುತ್ತಿದೆ. ಸೂಕ್ತ ಒಳಚರಂಡಿ ವ್ಯವಸ್ಥೆ ಇಲ್ಲ. ಸೌಪರ್ಣಿಕಾ ನದಿಯು ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳಿಂದ ತುಂಬಿದೆ.

ಪ್ರವಾಸಿ ಮಂದಿರಗಳು ಹಾಗೂ ಹೋಟೆಲ್‌ಗಳು ಕೊಳಕು ನೀರು ಮತ್ತು ಶೌಚಾಲಯ ತ್ಯಾಜ್ಯವನ್ನು ನದಿಗೆ ಹರಿಯ ಬಿಡುವುದರಿಂದ ನದಿ ಮಲಿನಗೊಂಡಿದ್ದು ಸ್ವಚ್ಛತೆಗೆ ಆದ್ಯತೆ ನೀಡಲು ಒತ್ತಾಯಿಸಲಾಗುವುದು ಎಂದು ಸಂಘಟನೆ ಹೇಳಿದೆ.

ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿರುವ ಹೋರಾಟ ಸಮಿತಿ ಈ ಬಗ್ಗೆ ಫೇಸ್ ಬುಕ್ ಪೇಜ್ ವೊಂದನ್ನು ತೆರೆದಿದೆ.

ಉಪವಾಸ ಸತ್ಯಾಗ್ರಹ

ಉಪವಾಸ ಸತ್ಯಾಗ್ರಹ

ಸೌಪರ್ಣಿಕಾ ನದಿ ಉಳಿಸಲು ನವೆಂಬರ್ 9 ಕ್ಕೆ ಉಪವಾಸ ಸತ್ಯಾಗ್ರಹ.

ಮಾಲಿನ್ಯ ತಡೆವರು ಯಾರು?

ಮಾಲಿನ್ಯ ತಡೆವರು ಯಾರು?

ಪವಿತ್ರ ನದಿ ಕಸ ಕಡ್ಡಿಗಳಿಂದ ತುಂಬಿಹೋಗಿದೆ.

ಪ್ರವಾಸಿ ಕೇಂದ್ರದ ಗಲೀಜು

ಪ್ರವಾಸಿ ಕೇಂದ್ರದ ಗಲೀಜು

ಕೊಲ್ಲೂರು ಸಮೀಪ ಕಲುಷಿತಗೊಳ್ಳುತ್ತಿರುವ ನದಿ.

ಬಿಡದ ಪ್ಲಾಸ್ಟಿಕ್

ಬಿಡದ ಪ್ಲಾಸ್ಟಿಕ್

ನದಿಯಲ್ಲಿ ಬಿಸಾಡಲಾದ ಪ್ಲಾಸ್ಟಿಕ್ ಬಾಟಲಿಗಳು.

ಸ್ವಾಮೀಜಿ ಹೋರಾಟ

ಸ್ವಾಮೀಜಿ ಹೋರಾಟ

ಕಳೆದ ವರ್ಷವೂ ನದಿ ಉಳಿವಿಗೆ ಹೋರಾಟ ನಡೆಸಿದ್ದ ಕೇಮಾರು ಶ್ರೀ.

English summary
Kollur: Kodachadri Parisara Samrakshana Trust plan fast protest in Kollur ( Karnataka) on November 9, to save Sowparnika river, to create an awareness about water pollution caused by the lodges mushrooming in the area
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X