ರಾಜ್ಯ ಸರ್ಕಾರದ ಬಗ್ಗೆ ಅಚ್ಚರಿಯ ಭವಿಷ್ಯ! ಸತ್ಯ ಹೇಳಿದರೆ ಮಠಕ್ಕೆ ಹೋಗಲ್ಲ ಅಂದಿದ್ಯಾಕೆ ಕೋಡಿಮಠ ಶ್ರೀ!
ಹುಬ್ಬಳ್ಳಿ, ಜುಲೈ 1: ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಈಗ ರಾಜ್ಯ ಸರ್ಕಾರ ಅಧಿಕಾರಿದ ಅವಧಿ ಪೂರ್ಣವಾಗುತ್ತಾ ಎನ್ನುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯ ನಿಗೂಢವಾಗಿದ್ದು ಅಚ್ಚರಿ ಮೂಡಿಸಿದೆ.
ಕಾಂಗ್ರೆಸ್ ಸರ್ಕಾರ 5 ವರ್ಷಗಳ ಅವಧಿಗೆ ಆಡಳಿಯ ನಡೆಸುತ್ತಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿದ ಅವರು, ಬಾಯಿಯ ವಾಸನೆ ಮೂಗಿಗೆ ಬಡಿಯುದಿಲ್ಲ, ಆದರೆ ಊರಿನಲ್ಲಿನ ಎಲ್ಲಾ ವಾಸನೆ ಮೂಗಿಗೆ ತಿಳಿಯುತ್ತದೆ ಎಂದು ನಿಗೂಢವಾದ ಹೇಳಿಕೆ ನೀಡಿದ್ದಾರೆ. ಕೋಡಿ ಮಠದ ಶ್ರೀಗಳ ಮಾತಿನ ಅರ್ಥವೇನು ಎಂದು ಈಗ ತಲೆ ಕೆಡಿಸಿಕೊಳ್ಳುವಂತಾಗಿದೆ.

ಕೋಡಿ ಮಠ ಶ್ರೀಗಳ ಹೇಳಿಕೆಯ ಮಾತನ್ನು ಅರ್ಥೈಸಿಕೊಳ್ಳುವುದಾದರೆ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಾಭಿಪ್ರಾಯವಿದ್ದರೂ ಅದು ಹೊರಗೆ ಬರುವುದಿಲ್ಲ, ಅದೆಲ್ಲವೂ ಶಮನವಾಗುತ್ತದೆ ಎಂದು ಹೇಳಿದ್ದಾರ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ. ಇನ್ನು ವಿರೋಧ ಪಕ್ಷದಲ್ಲಿನ ಭಿನ್ನಮತ ಹೆಚ್ಚಾಗುತ್ತದೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರ ಎನ್ನುವ ಪ್ರಶ್ನೆಯೂ ಕಾಡುತ್ತದೆ.
ಸತ್ಯ ಹೇಳಿದರ ಮಠಕ್ಕೆ ಹೋಗಲ್ಲ!
ಇನ್ನು 2024ರ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷ ಗೆಲ್ಲುತ್ತದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಲೋಕಸಭಾ ಚುನಾವಣೆ ಬಗ್ಗೆ ಸತ್ಯ ಹೇಳಿದರೇ ನಾನು ಮಠ ತಲುಪುವುದಿಲ್ಲ ಎನ್ನುವ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡುವ ವೇಳೆಯಲ್ಲಿ, ಸತ್ಯಂ ಅಪ್ರಿಯಂ ಅಸ್ಯತಂ ಪ್ರಿಯ. ಸತ್ಯ ಯಾರಿಗೂ ಇಷ್ಟವಾಗುವುದಿಲ್ಲ. ಅಸತ್ಯವೇ ಎಲ್ಲರಿಗೂ ಇಷ್ಟವಾಗುತ್ತದೆ. ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿ ಸತ್ಯ ಹೇಳಿದರೆ ನಾನು ಮಠ ಸೇರುವುದಿಲ್ಲ ಎಂದರು.
ಕಾದು ನೋಡಿ ಏನಾಗುತ್ತದೆ ಸಮಯ ಬಂದಾಗ ಹೇಳುತ್ತೇನೆ. ಈಗ ಇನ್ನೂ ಚುನಾವಣೆ ಬಹಳ ದೂರವಿದೇ ಈಗಲೇ ಸತ್ಯವನ್ನು ಹೇಳಿದರೇ ನಾನು ಮಠ ತಲುಪಲು ಸಾಧ್ಯವಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯಕ್ಕೆ ಜಲಕಂಠಕ!
ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದು, 16 ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಕೊರತೆ ಉಂಟಾಗಿದೆ. ಬರದ ಭಯದಲ್ಲಿರುವಾಗಲೇ ಕೋಡಿಮಠ ಶ್ರೀಗಳು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲಿದೆ ಎನ್ನುವ ಮೂಲಕ ಮುಂದಿನ ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎನ್ನುವ ಸೂಚನೆ ನೀಡಿದ್ದಾರೆ. ರಾಜ್ಯದಲ್ಲೂ ಹಲವು ಸಾವು ನೋವು ಸಂಭವಿಸುವ ಸಾಧ್ಯತೆ ಇದೆ. ದೇವರ ಆಶೀರ್ವಾದಿಂದ ಇದರಿಂದ ಪಾರಾಗಬಹುದು. ಗಂಡಾಂತರವನ್ನು ತಪ್ಪಿಸುವುದು ಸರ್ಕಾರಗಳ ಕೈಯಲ್ಲಿದೆ ಎಂದು ಹೇಳಿದರು.
ಜಾಗತಿಕ ಮಟ್ಟದಲ್ಲಿ ಮೂರು ಗಂಡಾಂತರಗಳು ಕಾದಿದ್ದು, ಒಂದೆರಡು ರಾಷ್ಟ್ರಗಳು ಮುಚ್ಚಿ ಹೋಗಲಿದೆ. ಜನರು ಅಕಾಲಿಕ ಮರಣ ಹೊಂದುವ ಸೂಚನೆ ಇದೆ ಎಂದು ಹೇಳಿದ್ದಾರೆ. ದಸರಾ ಹಬ್ಬದಿಂದ ಸಂಕ್ರಾಂತಿಯವರೆಗೆ ಜಗತ್ತಿನ ದುರ್ಘಟನೆಗಳು ನಡೆಯಲಿವೆ. ಸರ್ಕಾರಗಳು ಮೊದಲೇ ಎಚ್ಚೆತ್ತರೆ ಈ ಗಂಡಾಂತರಗಳನ್ನು ತಪ್ಪಿಸಬಹುದು ಎಂದು ಎಚ್ಚರಿಸಿದ್ದಾರೆ.
ಶಕ್ತಿ ಯೋಜನೆ ಬಗ್ಗೆ ಕೋಡಿ ಶ್ರೀ ಮೆಚ್ಚುಗೆ
ಇನ್ನು ರಾಜ್ಯದಲ್ಲಿ ಜಾರಿಗೆ ಬಂದಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಒದಗಿಸುವ ಶಕ್ತಿ ಯೋಜನೆ ಬಗ್ಗೆ ಕೋಡಿಮಠ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಒಳ್ಳೆಯದಾಗುತ್ತದೆ. ಯಾವ ಹೆಣ್ಣಿಗೆ ಸ್ವಾತಂತ್ಯ್ರ ಇರಲಿಲ್ಲವೋ ಅಂತಹ ಹೆಣ್ಣು ಈಗ ಸ್ವತಂತ್ರವಾಗಿ ಹೊರಗಡೆ ಬಂದಿದ್ದಾರೆ ಎಂದು ಹೇಳಿದರು.












Click it and Unblock the Notifications