ಕೊಡಗಿನಲ್ಲಿ ನವೆಂಬರ್ 26ರಂದು ಹುತ್ತರಿ ಹಬ್ಬ ಆಚರಣೆ

ಮಡಿಕೇರಿ, ನವೆಂಬರ್ 16 : ಸುಗ್ಗಿಯ ಹಬ್ಬ ಹುತ್ತರಿಯನ್ನು ನ.26ರಂದು ಸಂಭ್ರಮದಿಂದ ಸಾಂಪ್ರದಾಯದಂತೆ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಕೊಡಗಿನ ಕುಲದೈವ ಕಕ್ಕಬೆಯ ಪಾಡಿಇಗ್ಗುತ್ತಪ್ಪ ದೇವಾಲಯದಲ್ಲಿ ತಕ್ಕಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನಿಸಲಾಗಿದೆ.

ಪಾಡಿಇಗ್ಗುತ್ತಪ್ಪ ದೇವಾಲಯದ ಪಾರಂಪರಿಕ ಜ್ಯೋತಿಷ್ಯರಾದ ಅಮ್ಮಂಗೇರಿಯ ಕಣಿಯರ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನ.25ರಂದು ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಹುತ್ತರಿ ಕಲ್ಲಾಡ್ಚ ಹಬ್ಬ ಮತ್ತು ನ.26ರಂದು ಹುತ್ತರಿ ಆಚರಣೆ ನಡೆಸಲು ತೀರ್ಮಾನಿಸಲಾಯಿತು. [ಚಿತ್ರಗಳು : ದುಬಾರೆ ಆನೆ ಶಿಬಿರದಲ್ಲಿ ಆನೆ ಹಬ್ಬ]

huttari festival

ಮಳೆಗಾಲ ಮುಗಿದು ಸಣ್ಣಗೆ ನಡುಕ ಹುಟ್ಟಿಸುವ ಚಳಿ ಆರಂಭವಾದ ನಂತರ ಭತ್ತದಗದ್ದೆಗಳು ತೆನೆಬಿಟ್ಟು ಹೊಂಬಣ್ಣಕ್ಕೆ ತಿರುಗುತ್ತಿವೆ. ಇದು ಹುತ್ತರಿ ಹಬ್ಬದ ಸಂಕೇತ. ಕೊಡಗಿನಲ್ಲಿ ನವೆಂಬರ್ ತಿಂಗಳಲ್ಲಿ ಆರಂಭವಾಗುವ ಚಳಿಯನ್ನು ಹುತ್ತರಿ ಚಳಿ ಎಂದು ಕರೆಯುವ ರೂಢಿಯೂ ಇದೆ. [ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]

ಹಬ್ಬದ ದಿನದ ಕಾರ್ಯಕ್ರಮ : ಹುತ್ತರಿ ಹಬ್ಬದ ದಿನದಂದು ಸಂಜೆ 7.15ಕ್ಕೆ ದೇವಾಲಯದಲ್ಲಿ ನೆರೆ ಕಟ್ಟುವುದು, 8.15ಕ್ಕೆ ಕದಿರು ತೆಗೆಯುವುದು ಮತ್ತು 9.15ಕ್ಕೆ ಭೋಜನಕ್ಕೆ ಪ್ರಶಸ್ತ ಸಮಯವನ್ನು ನಿಗದಿಪಡಿಸಲಾಗಿದೆ. [ಮಡಿಕೇರಿಯ ಎರಡು ಶತಮಾನದ ನಾಲ್ಕುನಾಡು ಅರಮನೆ]

ದೇವಾಲಯದಲ್ಲಿ ಈ ಸಮಯದಲ್ಲಿ ಹಬ್ಬದ ವಿಧಿವಿಧಾನಗಳು ನಡೆದರೆ ಊರಿನಲ್ಲಿ 7.40ಕ್ಕೆ ನೆರೆಕಟ್ಟುವುದು, 8.40ಕ್ಕೆ ಕದಿರು ತೆಗೆಯುವುದು ಮತ್ತು 9.40ಕ್ಕೆ ಭೋಜನ ವೇಳೆಯನ್ನು ನಡೆಸಲು ನಿರ್ಧರಿಸಲಾಯಿತು.

ದೇವಾಲಯದ ಆದಿ ಸ್ಥಳ ಮಲ್ಮದಲ್ಲಿ ದೇಶಕಟ್ಟು ಹಾಕಲಾಗಿದ್ದು ಇದು ಹುತ್ತರಿ ಹಬ್ಬದವರೆಗೆ ಆಚರಣೆಯಲ್ಲಿರುತ್ತದೆ. ಅಲ್ಲಿಯವರೆಗೆ ಮರಗಿಡ ಕಡಿಯುವುದಾಗಲೀ, ಪ್ರಾಣಿ ಹಿಂಸೆ, ಮಾಂಸ ಸೇವನೆ, ಸಭೆ ಸಮಾರಂಭವನ್ನು ನಡೆಸುವುದು ನಿಷೇಧ.

ಅಂದಹಾಗೆ ರೈತರು ತಾವು ವರ್ಷಪೂರ್ತಿ ಬೆಳೆದ ಧಾನ್ಯಲಕ್ಷ್ಮೀಯನ್ನು ತಮ್ಮ ಮನೆಗೆ ತಂದು ಪೂಜಿಸುವ ಒಂದು ಆಚರಣೆಗೆ ಹುತ್ತರಿ ಹಬ್ಬ ಎಂದು ಕರೆಯಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+