ಕೆಪಿಟಿಸಿಎಲ್‌ ನೇರ ನೇಮಕಾತಿ ಪರೀಕ್ಷೆಗಳ ಫಲಿತಾಂಶ ಪ್ರಕಟಣೆ ದಿನಾಂಕ ತಿಳಿಯಿರಿ

ಬೆಂಗಳೂರು, ಡಿಸೆಂಬರ್‌ 31: ಕೆಪಿಟಿಸಿಎಲ್‌ನ (KPTCL) ವಿವಿಧ ಹುದ್ದೆಗಳಿಗಾಗಿ ನಡೆದ ನೇರ ನೇಮಕಾತಿ ಪರೀಕ್ಷೆಗಳ ಫಲಿತಾಂಶ ಪ್ರಕಟಣೆ ಜನವರಿ 3, 2023ರಂದು ಪ್ರಕಟವಾಗಲಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಇಂಧನ ಖಾತೆ ಸಚಿವ ಸುನೀಲ್‌ ಕುಮಾರ್‌, 'ಕೆ.ಪಿ.ಟಿ.ಸಿ.ಎಲ್ ನಲ್ಲಿ ವಿವಿಧ ಹುದ್ದೆಗಳಿಗಾಗಿ ನಡೆದ ನೇರ ನೇಮಕಾತಿ ಪರೀಕ್ಷೆಗಳ ಫಲಿತಾಂಶ ಪ್ರಕಟಣೆ ಜನವರಿ 3,2023 ರಂದು ಪ್ರಕಟವಾಗಲಿದೆ' ಎಂದು ತಿಳಿಸಿದ್ದಾರೆ.

ಅವರು ಮಾಡಿರುವ ಟ್ವೀಟ್‌ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕರ್ನಾಟಕ ಬಿಜೆಪಿ ಖಾತೆಗೆ ಟ್ಯಾಗ್‌ ಮಾಡಿದ್ದಾರೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಸಹಾಯಕ ಎಂಜನಿಯರ್‌, ಕಿರಿಯ ಎಂಜನಿಯರ್​ ಹಾಗೂ ಜ್ಯೂನಿಯರ್ ಅಸಿಸ್ಟಂಟ್ ಹುದ್ದೆಗಳಿಗೆ ನೇರ ನೇಮಕಾತಿ ಪರೀಕ್ಷೆ ನಡೆದಿತ್ತು. ಇದರ ಫಲಿತಾಂಶವನ್ನು ಜನವರಿ 3ರಂದು ಪ್ರಕಟಿಸಲಾಗುವುದು ಎಂದು ಸುನೀಲ್‌ ಕುಮಾರ್‌ ತಿಳಿಸಿದ್ದಾರೆ.

ಈ ಕುರಿತು ಶಾಸಕ ಸುರೇಶ್‌ ಕುಮಾರ್‌ ಕೇಳಿದ ಪ್ರಶ್ನೆಗೆ ವಿಧಾನಸಭೆಯಲ್ಲಿ ಉತ್ತರಿಸಿದ್ದ ಅವರು, ಡಿಸೆಂಬರ್‌ ಕೊನೆಯ ವಾರದಲ್ಲಿ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗುವುದು. ಜನವರಿ ಮೊದಲ ವಾರದಲ್ಲಿ ನೇರ ನೇಮಕಾರಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ಪರೀಕ್ಷೆಗಳನ್ನು 5 ತಿಂಗಳ ಹಿಂದೆ ನಡೆಸಲಾಗಿತ್ತು.

Know KPTCL Direct Recruitment Exam Result Publish Date

ಈ ನೇರ ನೇಮಕಾತಿ ಪರೀಕ್ಷೆಗಳಲ್ಲಿ ಆಪ್ಟಿಟ್ಯೂಟ್‌ ಹಾಗೂ ಕನ್ನಡ ಭಾಷಾ ಪರೀಕ್ಷೆಗಳನ್ನು ನಡೆಸಲಾಗಿತ್ತು. ಅಭ್ಯರ್ಥಿಗಳು ತಮ್ಮ ಡಿಗ್ರಿ ಅಥವಾ ಪಿಯುಸಿಯಲ್ಲಿ ಕನ್ನಡ ಭಾಷೆಯನ್ನು ಒಂದು ಅಥವಾ ಎರಡನೇ ವಿಷಯವಾಗಿ ಆರಿಸಿಕೊಳ್ಳದೇ ಹೋದಲ್ಲಿ ಕನ್ನಡ ಭಾಷಾ ಪರೀಕ್ಷೆಯನ್ನು ಕಡ್ಡಾಯವಾಗಿ ಪಾಸು ಮಾಡಬೇಕು.

ಈ ವರೆಗೆ ಅಂತಿಮ ಕೀ ಉತ್ತರಗಳನ್ನು ಕೆಪಿಟಿಸಿಎಲ್‌ ಪ್ರಕಟಿಸಿಲ್ಲ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

'ಆಕಾಂಕ್ಷಿಗಳಿಗೆ ಅನ್ಯಾಯವಾಗಿದೆ. ಅಂತಿಮ ಕೀ ಉತ್ತರವನ್ನು ಇಲ್ಲಿಯವರೆಗೆ ಪ್ರಕಟಿಸಲಾಗಿಲ್ಲ. ಹಿಂದಿನ ಕೀ ಉತ್ತರದ ವಿರುದ್ಧ ಎತ್ತಲಾದ ಹಲವಾರು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ದಯವಿಟ್ಟು ಅಂತಿಮ ಕೀ ಉತ್ತರಗಳನ್ನು ಪ್ರಕಟಿಸಿ. ಆ ನಂತರ ಫಲಿತಾಂಶಗಳನ್ನು ಬಿಡುಗಡೆ ಮಾಡಿ' ಎಂದು ಟ್ವೀಟಿಗರೊಬ್ಬರು ಕಾಮೆಂಟ್‌ ಮಾಡಿದ್ದಾರೆ.

'ಯಾವುದೇ ಕೀ ಉತ್ತರವಿಲ್ಲ, ಮೆರಿಟ್ ಪಟ್ಟಿ ಇಲ್ಲ. ಅಂತಿಮ ಕೀ ಇಲ್ಲದೆ ಅದು ಹೇಗೆ ಫಲಿತಾಂಶವನ್ನು ಪ್ರಕಟಿಸುತ್ತೀರಿ? ನಿಮ್ಮ ಮಾತು ನಿಜ ಎಂದು ನಮಗೆ ತಿಳಿದಿದೆ. ನಾವು ಮೂರ್ಖರಲ್ಲ ಸರ್, ನೀವು ಮೊದಲು ಏನು ಹೇಳುತ್ತಿದ್ದೀರಿ ಎಂಬುದು ನಮಗೆ ತಿಳಿದಿಲ್ಲ. ನೀವು ಫಲಿತಾಂಶಗಳನ್ನು ಹೇಗೆ ನೇರವಾಗಿ ಪ್ರಕಟಿಸುತ್ತೀರಿ' ಎಂದು ಟ್ವೀಟ್‌ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+