Ration Card: ಪಡಿತರ ಚೀಟಿದಾರರಿಗೆ ಸರ್ಕಾದಿಂದ ಸಿಗುವ ಸೌಲಭ್ಯಗಳ ವಿವರ
Ration Card: ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿ ಕೂಡ ಒಂದಾಗಿದೆ. ಇದರ ಮೂಲಕ ಜನರು ಸರ್ಕಾರದಿಂದ ರೇಷನ್ ಸೇರಿದಂತೆ ಅನೇಕ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದಾಗಿದೆ. ಯಾಗಾದರೆ ಯಾವೆಲ್ಲಾ ಯೋಜನೆಗಳನ್ನು ಪಡೆಯಬಹುದು ಹಾಗೂ ಯಾರು ಅರ್ಹರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಆಹಾರ ವ್ಯವಸ್ಥೆ ಕೊಳ್ಳದ ಸ್ಥಿತಿಯಲ್ಲಿ ಅನೇಕ ಜನರಿದ್ದಾರೆ. ಇಂತಹವರಿಗೆ ಮಾತ್ರ ಭಾರತ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಉಚಿತ ಪಡಿತರವನ್ನು ಒದಗಿಸುತ್ತದೆ. ಅಲ್ಲದೆ, ಬಿಪಿಎಲ್ ಕಾರ್ಡ್‌ದಾರರಿಗೆ ಕೆಲವೊಂದು ಆಸ್ಪತ್ರೆಗಳಲ್ಲಿ ಕಟ್ಟಿದ ಹಣವನ್ನು ಮತ್ತೆ ವಾಪಸ್ ಆಗುವಂತೆ ಮಾಡುತ್ತದೆ. ಇನ್ನೂ ಕೆಲವು ಕಾರ್ಡ್‌ಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಪಡಿತರವನ್ನು ಕೂಡ ನೀಡಲಾಗುತ್ತದೆ.

ಪಡಿತರ ಚೀಟಿಯ ಪ್ರಯೋಜನಗಳ ವಿವರ
* ನಿರ್ಗತಿಕರಿಗೆ ವಿವಿಧ ರೀತಿಯ ಆಹಾರ ಪದಾರ್ಥಗಳ ಉಚಿತ ಪಡಿತರ ವಿತರಣೆ.
* ಪಡಿತರ ಚೀಟಿದಾರರಿಗೆ ಸರ್ಕಾರ ನಿಗದಿಪಡಿಸಿದ ಕೈಗೆಟುಕುವ ದರದಲ್ಲಿ ಆಹಾರ ಪದಾರ್ಥಗಳು ಸಿಗುತ್ತವೆ.
* ಪಡಿತರ ಚೀಟಿ ಮೂಲಕ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಬಹುದು.
* ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿ ಬಳಸಬಹುದಾಗಿದೆ.
* ಹಲವು ಯೋಜನೆಗಳಲ್ಲಿ ಪಡಿತರ ಚೀಟಿದಾರರಿಗೂ ಕೂಡ ಸಾಲದ ಮೇಲೆ ಸಬ್ಸಿಡಿ ಸಿಗುತ್ತದೆ.
* ಕೆಲವು ರಾಜ್ಯಗಳಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಆರೋಗ್ಯ ವಿಮೆಯ ಪ್ರಯೋಜನವನ್ನು ಸಹ ನೀಡಲಾಗುತ್ತಿದೆ.
* ಸಮಾಜ ಕಲ್ಯಾಣ ಇಲಾಖೆ ಯೋಜನೆಗಳನ್ನು ಪಡಿತರ ಚೀಟಿ ಮೂಲಕವೂ ಪಡೆಯಬಹುದು.
* ಪಡಿತರ ಚೀಟಿದಾರರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಕೆಲವು ಯೋಜನೆಗಳಿವೆ.
ಪಡಿತರ ಚೀಟಿಯ ಪಡಯಲು ಅರ್ಹತೆಗಳು
* ದೇಶದಲ್ಲು ಹಲವು ರೀತಿಯ ಪಡಿತರ ಚೀಟಿಗಳಿವೆ. ಇವುಗಳನ್ನು ಜನರ ಆದಾಯ ಹಾಗೂ ಅವರ ಪರಿಸ್ಥಿತಿ ಆಧಾರದ ಮೇಲೆ ನೀಡಲಾಗುತ್ತದೆ. ಕೆಲವು ಪಡಿತರ ಚೀಟಿಗಳನ್ನು ಗುರುತಿನ ಪುರಾವೆಗಾಗಿ ಮಾತ್ರ ನೀಡಲಾಗುತ್ತದೆ. ಆದರೆ ಆರ್ಥಿಕ ಪ್ರಯೋಜನಗಳನ್ನು ನೀಡುವುದಿಲ್ಲ.
* ಪಡಿತರ ಚೀಟಿಯು ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿದ್ದು, ಕುಟುಂಬದ ಮುಖ್ಯಸ್ಥರು ಇದಕ್ಕೆ ಅರ್ಜಿ ಸಲ್ಲಿಸಬಹುದು.
* ಒಬ್ಬ ವ್ಯಕ್ತಿಯು ಈಗಾಗಲೇ ತನ್ನ ಹೆಸರಿನಲ್ಲಿ ಪಡಿತರ ಚೀಟಿ ಹೊಂದಿದ್ದರೆ, ಅಂತಹವರಿಗೆ ಪ್ರಯೋಜನ ಆಗುವುದಿಲ್ಲ.
* ಕೇಂದ್ರ ಆಹಾರ ಇಲಾಖೆಯಿಂದ ಪಡಿತರ ಚೀಟಿ ನೀಡಲಾಗುತ್ತಿದ್ದು, ಅದಕ್ಕೆ ಪರಿಶೀಲನೆಯೂ ನಡೆಯುತ್ತದೆ. ಈ ವೇಳೆ ನೀವು ಅರ್ಹರಲ್ಲ ಎಂದು ಕಂಡುಬಂದರೆ, ನಿಮ್ಮ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುತ್ತದೆ.
ಪಡಿತರ ಚೀಟಿಯಿಂದ ಸಿಗುವ ಸೌಲಭ್ಯಗಳು
1. ಬೆಳೆ ವಿಮೆ: ಪಡಿತರ ಚೀಟಿಯ ಆಧಾರದ ಮೇಲೆ ರೈತರು ಬೆಳೆ ವಿಮೆಗೆ ಅರ್ಜಿ ಸಲ್ಲಿಸಬಹುದು, ಇದರಿಂದ ಪ್ರಕೃತಿ ವಿಕೋಪದಿಂದ ಉಂಟಾಗುವ ನಷ್ಟದಿಂದ ಪರಿಹಾರವನ್ನು ಪಡೆಯಬಹುದಾಗಿದೆ.
2. ಪ್ರಧಾನ ಮಂತ್ರಿ ಉಜ್ವಲ ಯೋಜನೆ: ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಹೊಂದಿಲ್ಲದಿದ್ದರೆ, ಅಂತಹವರು ಪಡಿತರ ಚೀಟಿಯನ್ನು ಬಳಸಿಕೊಂಡು ಈ ಯೋಜನೆಯಡಿ ಉಚಿತ ಗ್ಯಾಸ್ ಸಿಲಿಂಡರ್ ಅನ್ನು ಪಡೆಯಬಹುದಾಗಿದೆ.
3. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ: ಕುಶಲಕರ್ಮಿಗಳು ಪಡಿತರ ಚೀಟಿಯ ಮೂಲಕ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದಾಗಿದ್ದು, ಇದರಿಂದ ಆರ್ಥಿಕ ನೆರವು ಮತ್ತು ಅಭಿವೃದ್ಧಿ ಅವಕಾಶಗಳನ್ನು ಕಲ್ಪಿಸಲಾಗುತ್ತದೆ.
3. ಆರ್ಥಿಕ ನೆರವು: ಪಡಿತರ ಚೀಟಿದಾರರಿಗೆ ಶಾಶ್ವತ ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡಲಾಗುತ್ತದೆ. ಇದು ಅವರ ವಸತಿ ಪರಿಸ್ಥಿತಿಗಳನ್ನು ಸುಧಾರಿಸಲು ಸಹಾಯ ಆದಂತಾಗುತ್ತದೆ.
4. ಶ್ರಮಿಕ್ ಕಾರ್ಡ್ ಯೋಜನೆ: ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯುತ್ತಾರೆ. ಇದರಿಂದ ಅವರ ಆರ್ಥಿಕ ಸ್ಥಿತಿ ಸುಧಾರಿಸಿದಂತಾಗುತ್ತದೆ.
5. ಮಹಿಳೆಯರಿಗಾಗಿ ಹೊಲಿಗೆ ಯಂತ್ರ: ಮಹಿಳೆಯರು ಸ್ವಾವಲಂಬಿಗಳಾಗಿ ಮತ್ತು ಸಬಲರಾಗುವಂತೆ ಮಾಡಲು ಉಚಿತ ಹೊಲಿಗೆ ಯಂತ್ರಗಳನ್ನು ನೀಡಲಾಗುತ್ತದೆ. ಇದರಿಂದ ಅವರು ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಬಹುದಾಗಿದೆ.
6. ಉಚಿತ ಪಡಿತರ ಯೋಜನೆ: ಭಾರತ ಸರ್ಕಾರದ ಅಡಿಯಲ್ಲಿ ಪಡಿತರ ಚೀಟಿದಾರರು ಉಚಿತ ಪಡಿತರ ಸೌಲಭ್ಯವನ್ನು ಪಡೆಯುತ್ತಾರೆ. ಇದು ಅವರ ದೈನಂದಿನ ಜೀವನದಲ್ಲಿ ಆರ್ಥಿಕವಾಗಿ ಸಹಾಯ ಮಾಡುತ್ತದೆ. ಇನ್ನು ಪಡಿತರ ಚೀಟಿಯು ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ. ಆದರೆ ಅಗತ್ಯ ಇರುವ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಆಗಲಿದೆ.












Click it and Unblock the Notifications