'ರಾಜೀವ್ ಆರೋಗ್ಯ ಭಾಗ್ಯ' ಯೋಜನೆ ಬಗ್ಗೆ ತಿಳಿಯಿರಿ

Posted By:
Subscribe to Oneindia Kannada

ಬೆಂಗಳೂರು, ಮೇ 10 : ಕರ್ನಾಟಕ ಸರ್ಕಾರ ಎಪಿಎಲ್ ಪಡಿತರ ಕಾರ್ಡ್‌ ಹೊಂದಿರುವವರಿಗೆ ಆರೋಗ್ಯ ಸೇವೆ ಒದಗಿಸಲು ರಾಜೀವ್ ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತಂದಿದೆ. ವಾರ್ಷಿಕ ಒಂದೂವರೆ ಲಕ್ಷ ರೂ.ಗಳ ತನಕ ಯೋಜನೆಯಡಿ ಚಿಕಿತ್ಸೆ ಲಭ್ಯವಿದೆ.

2015ರ ಜನವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀವ್ ಆರೋಗ್ಯ ಭಾಗ್ಯ ಯೋಜನೆಗೆ ಚಾಲನೆ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಎಪಿಎಲ್ ಕಾರ್ಡ್ ಪಡೆದವರು ಈ ಯೋಜನೆಯಡಿ ಸಿಗುವ ಸೌಲಭ್ಯವನ್ನು ಪಡೆಯಬಹುದು. [ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು 6 ಸರಳ ಸೂತ್ರಗಳು]

rajiv arogya bhagya

ರಾಜೀವ್ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಎಪಿಎಲ್ ಕುಟುಂಬಗಳಿಗೆ ಸಹಪಾವತಿ ಆಧಾರದ ಮೇಲೆ ಚಿಕಿತ್ಸೆ ದೊರೆಯುತ್ತದೆ. ಎಪಿಎಲ್ ಕಾರ್ಡ್‍ದಾರರು ಸಾಮಾನ್ಯ ವಾರ್ಡ್, ಅರೆ ಖಾಸಗಿ ವಾರ್ಡ್ ಹಾಗೂ ಖಾಸಗಿ ವಾರ್ಡ್‍ಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. [ಮುಖ್ಯಮಂತ್ರಿ ಸಾಂತ್ವನ-'ಹರೀಶ್' ಯೋಜನೆ ಬಗ್ಗೆ ತಿಳಿಯಿರಿ]

575 ಚಿಕಿತ್ಸೆಗಳು : ಈ ಯೋಜನೆಯಡಿ ವಾರ್ಷಿಕ 1,50,000 ರೂ. ಗಳವರೆಗೆ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದ್ದು, ಬಿಪಿಎಲ್ ಕಾರ್ಡ್‍ದಾರರಿಗೆ ದೊರೆಯುವ ಎಲ್ಲಾ 572 ಚಿಕಿತ್ಸಾ ವಿಧಾನಗಳು ಎಪಿಎಲ್ ಕಾರ್ಡ್‍ದಾರರಿಗೂ ದೊರೆಯುತ್ತವೆ. ಆದರೆ, ಬಿಪಿಎಲ್ ಕಾರ್ಡ್‍ದಾರರಿಗೆ ದೊರೆಯುವ 60 ಅನುಸರಣಾ ಚಿಕಿತ್ಸೆ ಸೌಲಭ್ಯ ಎಪಿಎಲ್ ಕಾರ್ಡ್‍ದಾರರಿಗೆ ಸಿಗುವುದಿಲ್ಲ.

ಪ್ಯಾಕೇಜ್ ಮೊತ್ತವು ನೋಂದಣಿ, ವಾರ್ಡ್ ದರಗಳು, ಶಸ್ತ್ರಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ತಪಾಸಣೆ, ಔಷಧಿಗಳ ವೆಚ್ಚಗಳನ್ನು ಒಳಗೊಂಡಿರುತ್ತದೆ. ಆದರೆ, ಚಿಕಿತ್ಸಾ ಪೂರ್ವದ ಪರೀಕ್ಷೆ, ಊಟ, ಪ್ರಯಾಣ ಭತ್ಯೆ, ಚಿಕಿತ್ಸಾ ನಂತರದ ಔಷಧಿಗಳು ಅನುಸರಣಾ ಚಿಕಿತ್ಸೆ ಅಂಬುಲೆನ್ಸ್ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ.

ಚಿಕಿತ್ಸಾ ವೆಚ್ಚ : ಸಾಮಾನ್ಯ ವಾರ್ಡ್‍ಗಳಲ್ಲಿ ಚಿಕಿತ್ಸೆ ಪಡೆಯಲು ಸರ್ಕಾರವು ಶೇ. 70 ರಷ್ಟು ಹಣವನ್ನು ಭರಿಸುತ್ತದೆ. ಉಳಿದ ಶೇ. 30 ರಷ್ಟು ಹಣವನ್ನು ಫಲಾನುಭವಿ ಭರಿಸಬೇಕಾಗುತ್ತದೆ. ವಿಶೇಷ ವಾರ್ಡ್‍ಗಳಲ್ಲಿ ಚಿಕಿತ್ಸೆ ಪಡೆಯಲು ಬಯಸಿದಲ್ಲಿ ಸರ್ಕಾರವು ವಾಜಪೇಯಿ ಆರೋಗ್ಯ ಶ್ರೀ ಯೋಜನೆಯ ಮೂಲ ಪ್ಯಾಕೇಜ್ ದರದ ಶೇ. 50 ರಷ್ಟನ್ನು ಮಾತ್ರ ಭರಿಸುತ್ತದೆ. ಇನ್ನುಳಿದ ಶೇ. 50 ರಷ್ಟನ್ನು ಹಾಗೂ ಆಸ್ಪತ್ರೆಯವರು ಘೋಷಿಸಿರುವ ಪ್ಯಾಕೇಜ್ ದರದ ವ್ಯತ್ಯಾಸದ ಮೊತ್ತವನ್ನು ಫಲಾನುಭವಿಯೇ ಪಾವತಿಸಬೇಕು.

ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು http://www.sast.gov.in/home/RAB.html ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ. ಕಾಲ್ ಸೆಂಟರ್ ನಂಬರ್ 1800 425 8330. [ಮಾಹಿತಿ ಮೈಸೂರು ವಾರ್ತೆ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka government launched Rajiv Arogya Bhagya (RAB) scheme to provide super specialty healthcare treatment to Above Poverty Line (APL) card holders. RAB scheme explained.
Please Wait while comments are loading...