ಕನ್ನಡಿಗರ ಬ್ಯಾಂಕ್‌ಗಳು ಮಾಯವಾದವು.. ಈಗ ಕೆಎಂಎಫ್ ಕಥೆ ಏನು..?

ಬೆಂಗಳೂರು: ಪ್ರಜೆಗೆ ದೇಶ ಹೇಗೆ ಮುಖ್ಯವೋ, ಹಾಗೇ ಪ್ರಾದೇಶಿಕ ವಿಚಾರವೂ ಮುಖ್ಯ. ಮನೆಗೆ ಮಾರಿ ಊರಿಗೆ ಉಪಕಾರಿಯಾದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಅಷ್ಟಕ್ಕೂ ಈ ಮಾತು ನಾವು ಹೇಳುತ್ತಿಲ್ಲ, ಸೋಷಿಯಲ್ ಮೀಡಿಯಾದಲ್ಲಿ ಅಮುಲ್(Amul) ವಿರುದ್ಧ ರೊಚ್ಚಿಗೆದ್ದ ಕನ್ನಡಿಗರ ಅಂತರಾಳದ ಧ್ವನಿ ಇದು. ಕೆಎಂಎಫ್‌(KMF) ಮುಗಿಸುವ ಸಂಚು ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಆಕ್ರೋಶ ಭುಗಿಲೆದ್ದಿದೆ.

ಈ ಹಿಂದೆ ಕನ್ನಡ ನಾಡಿನ, ಅದರಲ್ಲೂ ಪ್ರಮುಖವಾಗಿ ಕರಾವಳಿ ಭಾಗದ ಬ್ಯಾಂಕುಗಳು ವಿಲೀನದ ಹೆಸರಲ್ಲಿ ಬೇರೆ ರಾಜ್ಯಗಳ ಬ್ಯಾಂಕ್‌ಗೆ ಸೇರಿವೆ. ಈಗಾಗಲೇ ಕನ್ನಡಿಗರ ಬ್ಯಾಂಕ್‌ಗಳ ಒಳಗೆ ಪರಭಾಷಿಕರು ಬಂದು ಕೂತಿದ್ದಾರೆ. 'ಕನ್ನಡ್ ಪತಾ ನಹೀ..' ಅನ್ನುವ ಬ್ಯಾಂಕ್‌ಗಳ ಪರಭಾಷಿಕ ಸಿಬ್ಬಂದಿಗೆ ಕನ್ನಡಿಗರು ಪತಪತ ಬೆವರು ಸುರಿಯುವಂತೆ ಬೈಯುತ್ತಿದ್ದಾರೆ. ಇದೀಗ ಇಂತಹದ್ದೇ ಪರಿಸ್ಥಿತಿ ಬಡ ರೈತರ ತುತ್ತಿನ ಚೀಲ ಕೆಎಂಎಫ್‌ ಮೇಲೂ ಬೀಳುತ್ತಿದೆಯಾ ಎಂಬ ಅನುಮಾನ ದಟ್ಟವಾಗಿದೆ.

KMF and Amul fight dragged bank merge issue to hot trend

ಮಕ್ಕಳ ಓದಿಗೆ ಹಾಲೇ ಜೀವಾಳ!

ಕನ್ನಡ ನಾಡಿನ ಕೋಟ್ಯಂತರ ರೈತರು ಹೈನುಗಾರಿಕೆ ನಂಬಿ ಬದುಕು ನಡೆಸುತ್ತಿದ್ದಾರೆ. ಅಕಾಲಿಕ ಮಳೆ ಅಥವಾ ಅತಿಯಾದ ಮಳೆ ಸುರಿದು ಬೆಳೆ ಕೈಕೊಟ್ಟ ಸಂದರ್ಭದಲ್ಲೂ ಅನ್ನಪೂರ್ಣೇಶ್ವರಿಯಂತೆ ಕೈಹಿಡಿದು ನಮ್ಮ ರೈತರನ್ನು ರಕ್ಷಿಸಿದ್ದು ಇದೇ ಕೆಎಂಎಫ್‌ (KMF) ಅಥವಾ ನಂದಿನಿ (Nandini) ಹಾಲು. ಶುದ್ಧತೆಗೆ ಮತ್ತು ರುಚಿಗೆ ಹೆಸರು ಪಡೆದಿರುವ ನಂದಿನಿ ಉತ್ಪನ್ನ ಜಗತ್ತಿಗೇ ಸಪ್ಲೈ ಆಗುತ್ತಿದೆ. ಆದರೆ ಇದೀಗ ಕನ್ನಡಿಗರ ನಂದಿನಿ ಸಂಸ್ಥೆಗೆ ಕಂಟಕ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ. ಕನ್ನಡಿಗರ ನಂದಿನಿ ಸಂಸ್ಥೆಗೆ ಬೀಗ ಹಾಕಿಸಲು ಪರೋಕ್ಷ ಪ್ರಯತ್ನ ಸಾಗಿದ್ದು, ಅಮುಲ್ ಮೂಲಕ ಅದರ ಪ್ರಯತ್ನಗಳು ಸಾಗಿವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನ ಶುರುವಾಗಿದೆ.

ಬ್ಯಾಂಕ್‌ಗಳು ಹೋದವು.. ಈಗ ನಂದಿನಿ..?

ಕೆಲ ವರ್ಷಗಳ ಹಿಂದಷ್ಟೇ ವಿಲೀನದ ಹೆಸರಲ್ಲಿ ಕನ್ನಡಿಗರು ಕಟ್ಟಿ ಬೆಳೆಸಿದ್ದ ಬ್ಯಾಂಕ್‌ಗಳು ಯಾರದ್ದೋ ಪಾಲಾದವು. ಅದರಲ್ಲೂ ಎಸ್‌ಬಿಎಂ(SBM) ಮತ್ತು ಕರಾವಳಿಯ ಅತ್ಯುತ್ತಮ ಬ್ಯಾಂಕ್‌ಗಳು ವಿಲೀನದ ಹೆಸರಲ್ಲಿ ಮಾಯವಾದವು. ಭಾರತಕ್ಕೇ ಆರ್ಥಿಕ ಶಿಸ್ತಿನ ಪಾಠ ಮಾಡಿದ್ದ ಕನ್ನಡ ನಾಡಿನ ಕರಾವಳಿ ಭಾಗದಲ್ಲಿ ಕಟ್ಟಿದ್ದ ಅದೆಷ್ಟೋ ಬ್ಯಾಂಕ್‌ಗಳು ಭಾರಿ ಲಾಭದಲ್ಲಿದ್ದವು. ಆದರೆ ನಷ್ಟದಲ್ಲಿದ್ದ ಉತ್ತರ ಭಾರತದ ಬ್ಯಾಂಕ್‌ಗಳ ಜೊತೆ ವಿಲೀನ ಮಾಡಿ, ಕನ್ನಡಿಗರ ಲಾಭಾಂಶ ಕೊಳ್ಳೆ ಹೊಡೆಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಕೆಎಂಎಫ್ ವಿಚಾರದಲ್ಲೂ ಇಂತಹದ್ದೇ ಮಾರುವೇಷದ ಆಟ ನಡೆಯುತ್ತಿದೆ ಎಂದು ಕನ್ನಡಿಗರು ರೊಚ್ಚಿಗೆದ್ದಿದ್ದಾರೆ.

KMF and Amul fight dragged bank merge issue to hot trend

ಕುಸಿಯಿತಾ ಹಾಲಿನ ಸಂಗ್ರಹ?

ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಮಾಡಿದ್ದ ಟ್ವೀಟ್ ಎಲ್ಲರ ಗಮನ ಸೆಳೆದಿತ್ತು. 'ಬಿಜೆಪಿ ಆಡಳಿತಾವಧಿಯಲ್ಲಿ ಕೆಎಂಎಫ್‌ನಲ್ಲಿ ಹಾಲಿನ ಸಂಗ್ರಹ ಕಡಿಮೆಯಾಗುತ್ತಿದೆ. ದಿನಕ್ಕೆ 99 ಲಕ್ಷ ಲೀಟರ್ ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದು ಕೆಎಂಎಫ್ ವಿರುದ್ಧದ ಷಡ್ಯಂತ್ರವೇ @BJP4Karnataka?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಮಾಜಿ ಸಿಎಂ ಮಾಡಿದ್ದ ಟ್ವೀಟ್ ಕೂಡ ಈಗ ವೈರಲ್ ಆಗುತ್ತಿದೆ.

ನಂದಿನಿ ಕೃತಕ ಅಭಾವ ಸೃಷ್ಟಿ?

ಇದಿಷ್ಟೂ ಒಂದು ಕಡೆಯಾದರೆ, ಇಷ್ಟುದಿನ ನಂದಿನಿ ಮಳಿಗೆಗಳಲ್ಲಿ ನಂದಿನಿ ಉತ್ಪನ್ನಗಳ ಕೊರತೆ ಯಾಕೆ ಉಂಟಾಯ್ತು? ಎಂಬುದಕ್ಕೆ ಸೂಕ್ತ ಉತ್ತರ ಸಿಗುತ್ತಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ, ಹೀಗೆ ನಂದಿನಿ ಉತ್ಪನ್ನಗಳ ಕೊರತೆ ಉಂಟುಮಾಡಲು ಕಾರಣ ಗುಜರಾತ್‌ನ ಅಮುಲ್ ಸಂಸ್ಥೆಯ ಬೆಂಬಲಕ್ಕಾಗಿ ಅಂತಾ ನೆಟ್ಟಿಗರು ಆರೋಪಿಸುತ್ತಿದ್ದಾರೆ. ಬೇಕು ಅಂತಲೇ ನಂದಿನಿ ಉತ್ಪನ್ನಗಳ ಕೊರತೆ ಉಂಟುಮಾಡಿ, ಗ್ರಾಹಕರನ್ನು ಅನಿವಾರ್ಯವಾಗಿ ಅಮುಲ್ ಉತ್ಪನ್ನದ ಕಡೆಗೆ ತಿರುಗಿಸುವ ಕುತಂತ್ರ ಎಂದೂ ಆರೋಪಿಸಲಾಗುತ್ತಿದೆ.

ಒಟ್ಟಿನಲ್ಲಿ ಚುನಾವಣೆ ಹೊತ್ತಲ್ಲೇ ನಂದಿನಿ ಹಾಗೂ ಕೆಎಂಎಫ್ ಉಳಿವಿನ ಬಗ್ಗೆ ದೊಡ್ಡ ಜಾಗೃತಿ ಮೂಡುತ್ತಿದೆ. ಕನ್ನಡ ನಾಡಿನ ಬ್ಯಾಂಕ್‌ಗಳಿಗೆ ಬಂದ ಪರಿಸ್ಥಿತಿಯೇ ನಮ್ಮ ನಂದಿನಿ ಉತ್ಪನ್ನಕ್ಕೂ ಬರುವುದು ಬೇಡ ಎಂದು ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಈ ವಿಚಾರವನ್ನು ಹೇಗೆ ಪರಿಗಣಿಸುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+