ಮುಸ್ಲಿಂ ಗೂಂಡಾಗಳ ಪ್ರಚೋದನೆಗೆ ಇದೇ ಕಾರಣ ಎಂದ ಪ್ರಮೋದ್ ಮುತಾಲಿಕ್
Pramod Muthalik: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮನಸ್ಥಿತಿಯಿಂದಲೇ ಕೆಲವು ಮುಸ್ಲಿಂ ಗೂಂಡಾಗಳು ಮಾತನಾಡುತ್ತಿದ್ದಾರೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ವಿವಾದಾತ್ಮಕ ಹಾಗೂ ಸಂಘರ್ಷದ ಹೇಳಿಕೆ ಕೊಡುವವರನ್ನು ಒದ್ದು ಒಳಗೆ ಹಾಕಲಿ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಭಾರತವು ನೆಮ್ಮದಿಯಿಂದ ಇದೆ. ಆದರೆ, ಈ ರೀತಿ ಹೇಳಿಕೆಗಳಿಂದ ವಿವಾದ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಕೆಲವು ಮುಸ್ಲಿಂ ಗೂಂಡಾಗಳು ಸಂಘರ್ಷ ಸೃಷ್ಟಿ ಮಾಡುವ ಉದ್ದೇಶದಿಂದಲೇ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದಕ್ಕೆಲ್ಲ ರಾಜ್ಯದಲ್ಲಿರುವ ಕಾಂಗ್ರೆಸ್‌ನ ವರ್ತನೆಯೇ ಕಾರಣ. ಕೂಡಲೇ ಸರ್ಕಾರ ಅವರನ್ನು ಒದ್ದು ಒಳಗೆ ಹಾಕಿದರೆ ಎಲ್ಲಾ ಸರಿ ಹೋಗಲಿದೆ. ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವವರನ್ನು ಸರ್ಕಾರ ಈಗಾಗಲೇ ಜೈಲಿಗೆ ಹಾಕಬೇಕಿತ್ತು. ಅದನ್ನು ಸರ್ಕಾರ ಮಾಡಿಲ್ಲ ಎಂದಿದ್ದಾರೆ.

ನಿಮ್ಮ ಮನೆಯ ಒಳಗೆ ಬರ್ತೀವಿ
ಬಿ.ಸಿ ರಸ್ತೆ ಏನು, ನಿಮ್ಮ ಮನೆಯ ಒಳಗೂ ಬರ್ತೀವಿ. ಈ ಅಂಹಕಾರ ಹಾಗೂ ದರ್ಪ ನನ್ನ ಮುಂದೆ ನಡೆಯೋದಿಲ್ಲ ಹುಷಾರ್ ಎಂದು ಮುತಾಲಿಕ್ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಮುಸ್ಲಿಂ ಸಂಘಟನೆಯವರು ಉದ್ದೇಶ ಪೂರ್ವಕವಾಗಿ ಹಿಂದೂಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹಿಂದೂಗಳನ್ನು ಉದ್ದೇಶಿಸಿ ನಿಮಗೆ ಧೈರ್ಯವಿದ್ದರೆ ಬಿ.ಸಿ ರೋಡ್ ಹತ್ತಿರ ಬನ್ನಿ ಎಂದಿದ್ದಾರೆ. ಏನಿದರ ಅರ್ಥ ಬಿ.ಸಿ ರಸ್ತೆ ಏನು ಪಾಕಿಸ್ತಾನ ಇಲ್ಲ ಅಫ್ಗಾನಿಸ್ತಾನದಲ್ಲಿ ಇದ್ಯಾಂತಾ.
ನಮ್ಮ ದೇಶ ಈಗ ನೆಮ್ಮದಿಯಾಗಿದೆ. ಈ ರೀತಿ ಹೇಳಿಕೆಗಳನ್ನು ನೀಡಿ ಸಂಘರ್ಷ ಸೃಷ್ಟಿ ಮಾಡುತ್ತಿರುವುದು ಸರಿಯಲ್ಲ. ಇಷ್ಟರಲ್ಲಾಗಲೇ ಸರ್ಕಾರವೇ ಅವರನ್ನು ಬಂಧಿಸಿಬೇಕಾಗಿತ್ತು. ಇಷ್ಟಕ್ಕೆಲ್ಲ ಕಾಂಗ್ರೆಸ್ ಸರ್ಕಾರವೇ ಕಾರಣ. ಅವರಿಂದಲೇ ಈ ರೀತಿ ಮುಸ್ಲಿಂ ಪುಂಡರು ಹೇಳಿಕೆ ನೀಡುತ್ತಿದ್ದಾರೆ. ನಾವು ಹಿಂದೂಗಳು ಜೀವಂತವಾಗಿ ಇದ್ದೇವೆ. ನಮಗೂ ಸರಿಯಾಗಿ ಉತ್ತರ ಕೊಡಲು ಬರುತ್ತದೆ. ಸರಿಯಾಗಿ ಉತ್ತರ ಕೊಡಲಿದ್ದೇವೆ ಎಂದಿದ್ದಾರೆ.
ಘಟನೆಯ ಹಿನ್ನೆಲೆ ಏನು ?
ಶರಣ್ ಪಂಪ್ ವೆಲ್, ಮಿಲಾದ್ ಮೆರವಣಿಗೆ ನೀವು ಹೇಗೆ ಮಾಡ್ತೀರಿ ನೋಡೋಣ ಎಂದು ಪ್ರಚೋದಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಬಂಟ್ವಾಳದ (ಪುರಸಭೆಯ ಮಾಜಿ ಅಧ್ಯಕ್ಷ) ಮಹಮ್ಮದ್ ಶರೀಫ್ ಹಾಗೂ ಸದಸ್ಯ ಹಸೈನಾರ್ ಎನ್ನುವವರು ಸಹ ಸವಾಲು ಹಾಕಿದ್ದರು. ಇದು ಪರಸ್ಪರ ವಾಗ್ವಾದಕ್ಕೆ ಕಾರಣವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಆಡಿಯೋ ರವಾನಿಸಲಾಗಿತ್ತು. ಇದರ ಬೆನ್ನಲ್ಲೇ "ಧಮ್ ಇದ್ರೆ ಬಿ.ಸಿ ರೋಡ್‌ಗೆ ಬಾ" ಎಂದು ಹೇಳಲಾಗಿದ್ದು, ಇದು ವಿವಾದ ತೀವ್ರವಾಗಲು ಕಾರಣವಾಗಿದೆ.
ಸೋಮವಾರ ಬೆಳಿಗ್ಗೆಯಿಂದಲೇ ಈ ಭಾಗದಲ್ಲಿ ಭಜರಂಗದಳ ಹಾಗೂ ವಿ.ಎಚ್.ಪಿ ಸಂಘಟನೆಗಳ ಕಾರ್ಯಕರ್ತರು ಬಿ.ಸಿ.ರೋಡ್ ಚಲೋಗೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ನೂರಾರು ಜನ ಸೇರಿದ್ದಾರೆ. ಕೇಸರಿ ಶಾಲು ಹಾಕಿಕೊಂಡು ಕಾರ್ಯಕರ್ತರು ಬರುತ್ತಿದ್ದು, ಬಿಗುವಿನ ವಾತಾವರಣವಿತ್ತು. ಪೊಲೀಸರು ಸಹ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಹಿಂದೂತ್ವದ ತವರೂರು ಎಂದು ಶರಣ್ ಪಂಪ್ ವೆಲ್ ಹೇಳಿದ್ದಾರೆ.












Click it and Unblock the Notifications