ಒಳಮೀಸಲಾತಿ ಜಾರಿ ಕುರಿತು ಮಹತ್ವದ ಅಪ್‌ಡೇಟ್ ಕೊಟ್ಟ ಕೆ ಹೆಚ್ ಮುನಿಯಪ್ಪ
ಬೆಂಗಳೂರು, ಮಾರ್ಚ್ 26: ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ವಿಚಾರ ರಾಜ್ಯದಲ್ಲಿ ಚರ್ಚೆಗೆ ಬಂದಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ಒಂದು ವಾರದೊಳಗೆ ಒಳ ಮೀಸಲಾತಿಯ ಮಧ್ಯಂತರ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇದೀಗ ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ಸಭೆಯಲ್ಲಿ ಸಚಿವ ಕೆ ಹೆಚ್ ಮುನಿಯಪ್ಪ ಭಾಗಿಯಾಗಿದ್ದು, ಮಹತ್ವ ಅಪ್‌ಡೇಟ್ ನೀಡಿದ್ದಾರೆ.
ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟದ ವತಿಯಿಂದ ಆಯೋಸಿದ್ದ ಒಳಮೀಸಲಾತಿ ಚಳುವಳಿಯ ಮುಂದಿನ ಹೋರಾಟದ ಬಗ್ಗೆ ಸಮಾಲೋಚನಾ ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್ ಮುನಿಯಪ್ಪ ಈ ವೇಳೆ ಮಾತನಾಡಿ, ಪರಿಶಿಷ್ಟ ಜಾತಿಯ ಭಾಂದವರು ಶಾಂತಿಯಿಂದರಬೇಕು. ಯಾವುದೇ ಪಕ್ಷದ ಅಥವಾ ಸಂಘ ಸಂಸ್ಥೆಗಳ ಮುಖಂಡರು ಸಹಕರಿಸಿಬೇಕು ನಮ್ಮ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಜಾರಿಗೊಳಿಸಲು ಬದ್ದರಾಗಿದ್ದಾರೆ.

ತಾವು ಯಾರೂ ಧೃತಿಗೆಡಬಾರದು ನ್ಯಾ.ನಾಗಮೋಹನ್ ದಾಸ್ ರವರು ವೈಜ್ಞಾನಿಕವಾಗಿ ಸಂಪೂರ್ಣ ಪರಿಶೀಲಿಸಿ ತೀರ್ಮಾಣ ಮಾಡಲಿದ್ದಾರೆ ಕಾಲಮಿತಿ ಬಹಳ ದೂರವಿಲ್ಲ ನಾವು ಅಂತಿಮ ಘಟ್ಟದಲ್ಲಿ ಇದ್ದೀವಿ ಮೂವತ್ತು ವರ್ಷಗಳ ಹೋರಾಟಕ್ಕೆ ಪ್ರತಿಫಲ ಸಿಗಲಿದೆ. ನಮ್ಮ ಸಮುದಾಯ ಬಹಳಷ್ಟು ನೊಂದಿದೆ ನಮ್ಮ ಸರ್ಕಾರ ಒಂದು ಐತಿಹಾಸಿಕ ವಾದ ತೀರ್ಮಾಣ ಮಾಡಲಿದೆ ನಮ್ಮ ಸಹೋದರರಾದ ಪರಮೇಶ್ವರ್, ಮಹದೇವಪ್ಪ,ಶಿವರಾಜ್ ತಂಗಡಗಿ, ಪ್ರಿಯಾಂಕ್ ಖರ್ಗೆ ರವರು ಒಮ್ಮತ ಅಭಿಪ್ರಾಯ ಸೂಚಿಸಿದ್ದು, ಇದರಲ್ಲಿ ಯಾರ ಮೇಲೆಯೂ ಸಂಶಯ ಪಡಬಾರದು ಎಂದು ಕೆ ಹೆಚ್ ಮುನಿಯಪ್ಪ ಅವರು ತಿಳಿಸಿದರು.
ನಮ್ಮ ಪರಿಶಿಷ್ಟ ಜಾತಿಯ ಸಚಿವರು ಒಕ್ಕೊರಲಿನಿಂದ ಇದರ ಪರವಾಗಿದ್ದು ತಾವೂ ಅನಗತ್ಯ ಗೊಂದಲಕ್ಕೆ ಒಳಗಾಗಬೇಡಿ ಸರ್ಕಾರ ಒಳಮೀಸಲಾತಿ ಅನುಷ್ಠಾನಕ್ಕೆ ಬದ್ದವಾಗಿದೆ. ಸುಪ್ರೀಂ ಕೋರ್ಟ್ ನ ಮಹತ್ವದ ಆದೇಶವಿರುವುದರಿಂದ ಸರಿಯಾದ ದತ್ತಾಂಶಗಳ ಸಂಗ್ರಹಣೆ ಮಾಡಿ ನಮ್ಮ ಮುಖ್ಯಮಂತ್ರಿ ಶೀಘ್ರವಾಗಿ ಅನುಷ್ಠಾನ ಮಾಡಲಿದ್ದಾರೆ. ತೆಲಂಗಾಣ ರಾಜ್ಯ ಸರ್ಕಾರ ಈಗಾಗಲೇ ಅನುಷ್ಠಾನ ಮಾಡಿದ್ದು ನಮ್ಮ ಸರ್ಕಾರದ ಎಲ್ಲಾ ಸಚಿವರು ಹಾಗೂ ಪ.ಜಾ.ಶಾಸಕರು ಒಂದಾಗಿದ್ದು ಅನುಷ್ಠಾನ ಮಾಡಲಿದೆ. ನಾಗಮೋಹನ್ ದಾಸ್ ರವರ ವಿಶೇಷವಾದ ಜ್ಞಾನ ಬಹಳಷ್ಠಿದೆ ಅವರು ನಮ್ಮ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲಿದ್ದಾರೆ
ನ್ಯಾ. ನಾಗಮೋಹನ್ ದಾಸ್ ರವರಿಗೆ ಬೇಕಾದ ಎಲ್ಲಾ ಮಾಹಿತಿಗಳನ್ನು ಮುಖ್ಯ ಕಾರ್ಯದರ್ಶಿಗಳು ಒದಗಿಸಲಿದ್ದು ಸರ್ಕಾರ ಇದರಲ್ಲಿ ಯಾವುದೇ ತಡವಿಲ್ಲದೆ ಅನುಷ್ಠಾನ ಮಾಡಲಿದೆ. ಮುಂದಿನ ಕ್ಯಾಬಿನೆಟ್ ಸಭೆಯ ನಂತರ ಮತ್ತೊಮ್ಮೆ ನಿಮ್ಮೊಂದಿಗೆ ಸಭೆಯನ್ನು ನಡೆಸಿ ತೀರ್ಮಾಣ ಮಾಡುವ ಕಾರ್ಯಕ್ರಮ ರೂಪಿಸಲಿದೆ. ಈ ಒಳಮೀಸಲಾತಿ ವಿಷಯವು ಬಹಳ ಸೂಕ್ಷ್ಮವಾಗಿದ್ದು, ಈ ವರದಿಯ ಮೇಲೆ ಕೋರ್ಟ್ ಗೆ ಹೋಗಬಾರದು ಎಂಬ ಉದ್ದೇಶದಿಂದ ನಾವು ಸರಿಯಾದ ಮಾಹಿತಿ ಸಂಗ್ರಹಿಸಿ ನಂತರ ಅನುಷ್ಠಾನ ಮಾಡಬೇಕಾಗುತ್ತದೆ.
ಒಳಮೀಸಲಾತಿ ಅನುಷ್ಠಾನ ಅತಿ ಶೀಘ್ರದಲ್ಲಿ ಆಗಲಿದ್ದು ಹೆಚ್ಚಿನ ಕಾಲಾವಕಾಶ ತೆಗೆದುಕೊಳ್ಳದೆ ನಡೆಯಲಿದೆ. ನ್ಯಾ. ನಾಗಮೋಹನ್ ದಾಸ್ ರವರ ಮಧ್ಯಂತರ ವರದಿ ಸರ್ಕಾರಕ್ಕೆ ಒಪ್ಪಿಸಿದ ನಂತರ ಇದರ ಕುರಿತು ನಾವು ನೀವು ಯಾವರೀತಿಯ ತೀರ್ಮಾಣ ಮಾಡಬೇಕು ಎಂಬುದನ್ನು ಚರ್ಚೆ ಮಾಡಬೇಕಾಗುತ್ತದೆ ಅಲ್ಲಿಯವರೆಗೂ ಶಾಂತವಾಗಿರಿ ಎಂದರು. ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆಯುತ್ತಾರೆ ಸಿದ್ದರಾಮಯ್ಯ ರವರ ವಿಶೇಷ ವಾದ ಗುಣ ನುಡಿದಂತೆ ನಡೆಯಲಿದ್ದಾರೆ ನಮ್ಮ ಸರ್ಕಾರ ಅನುಷ್ಠಾನ ದಲ್ಲಿ ಬದ್ದವಾಗಿದೆ ತಾವು ಶಾಂತವಾಗಿರಿ ಎಂದು ಸಚಿವ ಕೆ ಹೆಚ್ ಮುನಿಯಪ್ಪ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಬಕಾರಿ ಸಚಿಬರಾದ ಆರ್.ಬಿ.ತಿಮ್ಮಾಪೂರ, ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಅಧ್ಯಕ್ಷರಾದ ಮಾರಸಂದ್ರ ಮುನಿಯಪ್ಪ, ನಿವೃತ್ತ ಅಧಿಕಾರಿಗಳಾದ ತೇಗನೂರು,ಗೋನಾಳ ಬೀಮಪ್ಪ,ಭೀಮಾಶಂಕರ್,ಸಿದ್ದರಾಜು,ಕೃಷ್ಣಪ್ಪ,ಕೇಶವ ಮೂರ್ತಿ, ದೇವರಾಜು,ಪಕೀರಪ್ಪ, ಗುರುಮೂರ್ತಿ,ವೆಂಕಟೇಶ್,ಹಾಗೂ ವಿವಿಧ ಸಂಘಟನೆಗಳ ನಾಯಕರು ಉಪಸ್ಥಿತರಿದ್ದರು.












Click it and Unblock the Notifications