ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಪಿಯಿಂದ ಹಣ ಪೀಕಿ, ಬಿಟ್ಟು ಕಳಿಸಿದ ಹೆಡ್ ಕಾನ್‌ಸ್ಟೇಬಲ್!

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಕೆಜಿಎಫ್‌, ಅಕ್ಟೋಬರ್ 12: ಕೋಲಾರ ಜಿಲ್ಲೆಯ, ಬಂಗಾರಪೇಟೆ ತಾಲ್ಲೂಕಿನ ಕೆಜಿಎಫ್ ನಲ್ಲಿ ಕಾನ್‌ಸ್ಟೆಬಲ್‌ ಗೋಪಾಲ್‌ ಸಿಂಗ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಂಚನೆ ಪ್ರಕರಣದಲ್ಲಿ ತೊಡಗಿದ ಅಂತರ ರಾಜ್ಯ ಆರೋಪಿಯಿಂದ ಹಣ ವಸೂಲಿ ಮಾಡಿದ ಆರೋಪ ಈತನ ಮೇಲೆ ಇದೆ.

ಈಚೆಗೆ ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ ತಂಡದಲ್ಲಿ ರಾಬರ್ಟಸನ್‌ ಪೇಟೆಯ ಅಪರಾಧ ತಡೆ ವಿಭಾಗದ ಹೆಡ್‌ ಕಾನ್‌ಸ್ಟೇಬಲ್‌ ಗೋಪಾಲ್‌ ಸಿಂಗ್‌ ಇದ್ದ. ಗೋವಾದಲ್ಲಿ ಆರೋಪಿಯಿಂದ ಹಣ ಪಡೆದು, ಬಿಟ್ಟು ಕಳುಹಿಸಿದ ಸುದ್ದಿ ಪೊಲೀಸ್ ಇಲಾಖೆಯೊಳಗೆ ದೊಡ್ಡ ಸುದ್ದಿಯಾಗಿತ್ತು.[ದೂರವಾದ ಪ್ರಿಯಕರನ ಕೊಲ್ಲಲು ಆಕೆ ಸಿದ್ಧಪಡಿಸಿಕೊಂಡಿದ್ದು ನಾಡ ಬಾಂಬ್]

KGF: Case registered against Head constable

ಗೋವಾ ಮೂಲದ ಅಂತರರಾಜ್ಯ ವಂಚಕ ಅಜಯಕುಮಾರ್‌ನಿಂದ ಗೋಪಾಲ್‌ಸಿಂಗ್ ಹಣ ಮತ್ತು ಬಂಗಾರ ಪಡೆದುಕೊಂಡು, ಆರೋಪಿ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದ ಎಂಬ ಆರೋಪ ಇತ್ತು. ಗೋಪಾಲ್‌ಸಿಂಗ್‌ಗೆ ಸಹಾಯ ಮಾಡಿದ ಸಾದಿಕ್‌ ಎಂಬಾತನ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಖುದ್ದು ತನಿಖೆ ನಡೆಸಲು ಚಾಂಪಿಯನ್‌ರೀಫ್ಸ್‌ ಸಬ್‌ ಇನ್‌ಸ್ಪೆಕ್ಟರ್ ಅಮರೇಶಗೌಡ, ರಾಬರ್ಟಸನ್‌ಪೇಟೆ ಸಬ್‌ ಇನ್‌ಸ್ಪೆಕ್ಟರ್‌ ಹರೀಶ್‌ ಗೋವಾಕ್ಕೆ ತೆರಳಿ ವಿಚಾರಣೆ ನಡೆಸಿದ್ದರು. ಆ ವೇಳೆ ಪ್ರಕರಣ ಬಯಲಿಗೆ ಬಂದಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಗೋಪಾಲ್‌ ಸಿಂಗ್‌ ಮತ್ತು ವಂಚಕನ ನಡುವೆ ನಡೆದಿದೆ ಎನ್ನಲಾದ ವ್ಯವಹಾರದ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಸಿಕ್ಕಿವೆ ಎಂಬ ಮಾಹಿತಿ ದೊರೆತಿದೆ.[ಆಯುಧ ಪೂಜೆ ದಿನ ಶನಿವಾರಸಂತೆಯಲ್ಲಿ ಭೀಕರ ಹತ್ಯೆ]

ಕಾರು ಡಿಕ್ಕಿ: ಮಹಿಳೆ ಸಾವು
ದ್ವಿಚಕ್ರ ವಾಹನವೊಂದಕ್ಕೆ ಕಾರು ಡಿಕ್ಕಿ ಹೊಡೆದು, ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಕೋಲಾರ ತಾಲ್ಲೂಕಿನ ಚುಂಚದೇನ ಹಳ್ಳಿ ಗೇಟ್‌ ಬಳಿ ಸಂಭವಿಸಿದೆ. ಅನಿತಾ (32) ಮೃತಮಹಿಳೆ. ಬೆಂಗಳೂರಿನ ಆಗ್ರಹಾರ ಬಡಾವಣೆಯವರು. ಮೃತ ಅನಿತಾ ಅವರ ಪತಿ ಲಕ್ಷ್ಮಣ್ ಮತ್ತು ಪುತ್ರಿ ನಿಸರ್ಗ ಗಾಯಗೊಂಡಿದ್ದಾರೆ, ಇಬ್ಬರನ್ನೂ ಕೋಲರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.[ತಂದೆ ವ್ಯವಹಾರದ ಲಾಭಕ್ಕಾಗಿ 68 ದಿನ ಉಪವಾಸ: ಬಾಲಕಿ ಸಾವು]

ಬೆಂಗಳೂರಿನಿಂದ ಕೋಲಾರಕ್ಕೆ ಕುಟುಂಬದ ಸದಸ್ಯರೊಂದಿಗೆ ದ್ವಿಚಕ್ರ ವಾಹದಲ್ಲಿ ಬರುತ್ತಿದ್ದಾಗ ಎದುರಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಅನಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
Gopal singh, Head constable in Robertsonpete police station, KGF, Case registered against him. He has helped interstate accused to escape from police custody, news reported in media. After the investigation case registered against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X