ಡಬ್ಬಿಂಗ್ ವಿರೋಧಿ ಕೆಎಫ್ ಸಿಸಿಗೆ ತೀವ್ರ ಮುಖಭಂಗ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 13:ಡಬ್ಬಿಂಗ್ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ(KFCC)ಗೆ ತೀವ್ರ ಹಿನ್ನೆಡೆ ಉಂಟಾಗಿದೆ.

ಪರಭಾಷೆ ಸಿನಿಮಾಗಳ ಡಬ್ಬಿಂಗ್ ಗೆ ವಿರೋಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿದ ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಮಂಡಳಿ(Competition Appellate Tribunal) ಅರ್ಜಿಯನ್ನು ವಜಾ ಗೊಳಿಸಿದೆ.

ಕನ್ನಡಿಗರು ಎಲ್ಲಾ ರೀತಿಯ ಮನರಂಜನೆಯನ್ನು ಕನ್ನಡದಲ್ಲೇ ಪಡೆಯುವಂತಾಗಬೇಕು ಎನ್ನುವ ನಿಟ್ಟಿನಲ್ಲಿ ಕನ್ನಡ ಗ್ರಾಹಕರ ಕೂಟ ಕನ್ನಡದಲ್ಲಿ ಡಬ್ಬಿಂಗ್ ಬರಬೇಕು ಎಂಬ ನಿಲುವನ್ನು ಹೊಂದಿದೆ.

KFCC loses its appeal against CCI order in Competition Appellate Tribunal

ಇದೇ ನಿಟ್ಟಿನಲ್ಲಿ ಕನ್ನಡ ಗ್ರಾಹಕ ಕೂಟದ ವತಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಇನ್ನಿತರೇ ಕನ್ನಡ ಚಲನಚಿತ್ರಕ್ಕೆ ಸಂಬಂಧಿಸಿದ ಸಂಘ ಸಂಸ್ಥೆಗಳು ಜೊತೆಯಾಗಿ ಡಬ್ಬಿಂಗ್ ಮೇಲೆ ವಿಧಿಸಿದ್ದ ಕಾನೂನುಬಾಹಿರ ನಿಷೇಧವು ತೆರವಾಗಬೇಕೆಂದು 2012 ರಲ್ಲಿ ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ (CCI) ದೂರನ್ನು ನೀಡಲಾಗಿತ್ತು.

CCI ಈ ದೂರಿನ ಬಗ್ಗೆ ವಿಚಾರಣೆ ನಡೆಸಿ, 2015 ರ ಜುಲೈ ನಲ್ಲಿ ಡಬ್ಬಿಂಗ್ ಮೇಲಿನ ನಿಷೇಧವನ್ನು ಅಸಿಂಧುಗೊಳಿಸಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು 2015 ರಲ್ಲಿ ತನ್ನ ವಿರುದ್ದ ನೀಡಿದ ತೀರ್ಪುನ್ನು ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಮಂಡಳಿಯಲ್ಲಿ (Competition Appellate Tribunal) ಪ್ರಶ್ನಿಸಿತ್ತು.

ಆದೇಶದ ಪೂರ್ಣ ಪ್ರತಿ ಡೌನ್ ಲೋಡ್ ಮಾಡಿಕೊಳ್ಳಿ:

ಇದೀಗ ಮೇಲ್ಮನವಿ ನ್ಯಾಯಮಂಡಳಿ ಕೂಡ 2015 ರಲ್ಲಿ CCI ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ. ಇದರ ಮೂಲಕ ಕನ್ನಡದಲ್ಲಿ ಡಬ್ಬಿಂಗ್ ಮೇಲಿದ್ದ ಕಾನೂನುಬಾಹಿರವಾದ ನಿಷೇಧವು ಕೊನೆಯಾಗಬೇಕು ಎಂದು ಕನ್ನಡ ಗ್ರಾಹಕರ ಕೂಟ ನಡೆಸಿದ್ದ ಹೋರಾಟಕ್ಕೆ ಮನ್ನಣೆ ದೊರೆತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KFCC loses its appeal against CCI order in Competition Appellate Tribunal.Competition Appellate Tribunal dismissed KFCC dubbing against Appeal. Here are the details about order.
Please Wait while comments are loading...