KEA GTTC Exam: ಪರೀಕ್ಷೆ ಮರುದಿನವೇ ಕೀ-ಉತ್ತರಗಳು ಬಿಡುಗಡೆ, ಆಕ್ಷೇಪಣೆಗೆ ಆಹ್ವಾನ, ಫಲಿತಾಂಶದ ಅಪ್ಡೇಟ್
ಬೆಂಗಳೂರು, ಡಿಸೆಂಬರ್ 15: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ (GTTC Exam 2024) ಪರೀಕ್ಷೆ ನಡೆಸಿದ್ದು, ಪರೀಕ್ಷೆ ಬೆನ್ನಲ್ಲೆ ಕೀ ಉತ್ತರಗಳನ್ನು ಪ್ರಕಟಿಸಿದೆ. ಅಧಿಕೃತ ವೆಬ್‌ಸೈಟ್ ನಲ್ಲಿ ಅಭ್ಯರ್ಥಿಗಳು ಗಮನಿಸುವಂತೆ ತಿಳಿಸಿದೆ. ಈ ಕೀ-ಉತ್ತರಗಳಿಗೆ ಆಕ್ಷೇಪಣೆಗೆ ಸಲ್ಲಿಕೆಗೂ ಅವಕಾಶ ನೀಡಿ ದಿನಾಂಕ ಪ್ರಕಟಿಸಿದೆ. ಕೀ ಉತ್ತರ ಅಂತಿಮ ಪಟ್ಟಿ, ಫಲಿತಾಂಶದ ಮಾಹಿತಿ ಇಲ್ಲಿದೆ.
ಇದೇ ಡಿಸೆಂಬರ್ 09ರಿಂದ ಡಿಸೆಂಬರ್ 14ರವರೆಗೆ ಪ್ರಾಧಿಕಾರವು (KEA) ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಪರೀಕ್ಷೆ ನಡೆಸಿತ್ತು. ಜಿಟಿಟಿಸಿ ಯಲ್ಲಿನ ಖಾಲಿ ಹುದ್ದೆಗಳ ನೇಮಕಾತಿಗಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿತ್ತು. ಅದರಂತೆ ಪರೀಕ್ಷೆ ನಡೆದಿದ್ದು, ಮರುದಿನವೇ ಪ್ರಾಧಿಕಾರ ತನ್ನ ವೆಬ್‌ಸೈಟ್‌ನಲ್ಲಿ ಕೀ-ಉತ್ತರ ಪ್ರಕಟಿಸಿದೆ.

ಅಭ್ಯರ್ಥಿಗಳು ಕೀ ಉತ್ತರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿಯೇ ಪರಿಶೀಲಿಸಬೇಕು. ದಿನಾಂಕ ಡಿಸೆಂಬರ್ 17ರವರೆಗೆ ಪೂರಕ ದಾಖಲೆಗಳ ಸಮೇತ ಆಕ್ಷೇಪಣೆ ಸಲ್ಲಿಸಬೇಕು. ಈ ಕೀ ಉತ್ತರಗಳಿಗೆ ಸವಾಲು ಮಾಡಿ ಆಕ್ಷೇಪಣೆ ಸಲ್ಲಿಸುವವರು 500 ರೂಪಾಯಿ ಪಾವತಿಸಬೇಕು. ಈ ಹಣ ಹಿಂತಿರುಗಿಸುವುದಿಲ್ಲ ಎಂದು ಪ್ರಾಧಿಕಾರ ತಿಳಿಸಿದೆ.
ಆಕ್ಷೇಪಣೆಗೆ ಬಂದ ಅರ್ಜಿಗಳನ್ನು ಪರಿಶೀಲಿಸಲಾಗುವುದು. ಬಳಿಕ ಮತ್ತೊಮ್ಮೆ ಅಂತಿಮ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಪ್ರಾಧಿಕಾರವು ಮಾಹಿತಿ ನೀಡಿದೆ. ಯಾರೆಲ್ಲ ಪರೀಕ್ಷೆ ಬರೆದಿದ್ದೀರಿ ದಿನಾಂಕ ಗಮನಿಸಿ ಕೂಡಲೇ ಕೆಇಎ ವೆಬ್‌ಸೈಟ್‌ನಲ್ಲಿ https://cetonline.karnataka.gov.in/kea/ ಕೀ-ಉತ್ತರ ಪರಿಶೀಲಿಸಿ ಆಕ್ಷೇಪಣೆ ಸಲ್ಲಿಸಬೇಕು.
ವಿಶೇಷ ಸೂಚನೆಯೆಂದರೆ ಯಾರಾದರೂ ಅಭ್ಯರ್ಥಿಗಳು ಈ ಹಣ ಪಾವತಿಸದೇ ಮತ್ತು ಪೂರಕ ದಾಖಲೆ ಇಲ್ಲದೆಯೇ ಸಲ್ಲಿಸುವ ಆಕ್ಷೇಪಣೆಗಳನ್ನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದೆ.
ಕೂಡಲೇ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ ನಲ್ಲಿ ಲಾಗಿನ್ ವಿವರ ನಮೂದಿಸಬೇಕು. ನೋಂದಣಿ ಸಂಖ್ಯೆ, ಜನ್ಮ ದಿನಾಂಕ ಸೇರಿದಂತೆ ಅಗತ್ಯ ಮಾಹಿತಿ ನೀಡಿ ಲಾಗಿನ್ ಆಗಿ ಕೀ ಉತ್ತರ ಪರಿಶೀಲಿಸಬಹುದು. ಆಕ್ಷೇಪಣೆ ಸಲ್ಲಿಕೆ ಪರಿಶೀಲನೆ ಬಳಿಕ ಅಂತಿಮ ಕೀ ಉತ್ತರ ಪ್ರಕಟಿಸಲಾಗುವುದು.
ಈ ಮೇಲಿನ ಪ್ರಕ್ರಿಯೆ ಬಳಿಕ ತಾತ್ಕಾಲಿಕ ಅಂಕಪಟ್ಟಿ ನಂತರ ಜಿಟಿಟಿಸಿ ಪರೀಕ್ಷೆ 2024 ಅಂತಿಮ ಫಲಿತಾಂಶ ಬಿಡುಗಡೆ ಮಾಡಲಾಗುವುದು ಎಂದು ಕೆಇಎ ಮೂಲಗಳು ತಿಳಿಸಿವೆ.
ಕೀ ಉತ್ತರ ಪರಿಶೀಲನೆ ಕ್ರಮಗಳು ಹೀಗಿವೆ
* KEA ಯ ಅಧಿಕೃತ ವೆಬ್‌ಸೈಟ್‌ಗೆ cetonline.karnataka.gov.in/kea. ಭೇಟಿ ನೀಡಬೇಕು.
* ವೆಬ್‌ಸೈಟ್ ಮುಖಪುಟದಲ್ಲಿ 'KEA GTTC 2024 ಕೀ ಉತ್ತರದ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
* ನಿಮ್ಮ ನೋಂದಣಿ ಸಂಖ್ಯೆ, ಜನ್ಮ ದಿನಾಂಕ ನಮೂದಿಸಿ ಸಬ್ಮಿಟ್ ಮಾಡಿ.
* ನಂತರ ಕೀ ಉತ್ತರ ಕಾಣುತ್ತದೆ.
* ಪರಿಶೀಲಿಸಿ ನೀವು, ಅಗತ್ಯ ವಿವರ ಸಲ್ಲಿಸಿ ಮತ್ತು ಶುಲ್ಕ ಸಹ ಪಾವತಿಸುವ ಮೂಲಕ ಆಕ್ಷೇಪಣೆ ಸಲ್ಲಿಸಬೇಕು ಎಂದು ಕೆಇಎ ತಿಳಿಸಿದೆ. ಕೀ ಉತ್ತರ ಆಕ್ಷೇಪಣೆಗೆ ನೇರವಾಗಿ ಈ https://shorturl.at/ZIuu2 ಗೆ ಭೇಟಿ ನೀಡಬೇಕು.












Click it and Unblock the Notifications