ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KEA Recruitment 2023: ಪ್ರೋಗ್ರಾಮರ್ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ, ಜ.14ರೊಳಗೆ ಅರ್ಜಿ ಸಲ್ಲಿಸಿ

|
Google Oneindia Kannada News

ಬೆಂಗಳೂರು, ಜನವರಿ 10: ಬೆಂಗಳೂರಿನಲ್ಲೇ ಸರ್ಕಾರಿ ಉದ್ಯೋಗ ಮಾಡಬಯಸುವವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸುವರ್ಣ ಅವಕಾಶ ನೀಡಿದೆ. ಪ್ರಾಧಿಕಾರವು ಖಾಲಿ ಇರುವ ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಒಟ್ಟು 2 ಪ್ರೋಗ್ರಾಮರ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದು. ಬೆಂಗಳೂರಿನಲ್ಲೇ ಸರ್ಕಾರಿ ವೃತ್ತಿ ಜೀವನ ಕಂಡುಕೊಳ್ಳಬಹುದು. ಇ-ಮೇಲ್ ಮೂಲಕ ಅರ್ಜಿ ಸಲ್ಲಿಕೆಗೆ ಜನವರಿ 14 ಕೊನೆಯ ದಿನವಾಗಿದೆ. ಹುದ್ದೆಯ ಅರ್ಹತೆ, ಆಯ್ಕೆ, ವೇತನ ಸೇರಿದಂತೆ ಅಗತ್ಯ ಮಾಹಿತಿಯನ್ನು ಮುಂದೆ ತಿಳಿಯಿರಿ.

ಕರ್ನಾಟಕ ಪಬ್ಲಿಕ್ ಶಾಲೆ; ಹೊಸದಾಗಿ ಉಪ ಪ್ರಾಂಶುಪಾಲ ಹುದ್ದೆ ನೇಮಕ ಕರ್ನಾಟಕ ಪಬ್ಲಿಕ್ ಶಾಲೆ; ಹೊಸದಾಗಿ ಉಪ ಪ್ರಾಂಶುಪಾಲ ಹುದ್ದೆ ನೇಮಕ

ಖಾಲಿ ಹುದ್ದೆಯ ವಿವರ

ಪ್ರೋಗ್ರಾಮರ್ ಒಂದು ಹುದ್ದೆ

ಪ್ರೋಗ್ರಾಮರ್ (ಫ್ರೆಶರ್) ಒಂದು ಹುದ್ದೆ

ವಿದ್ಯಾರ್ಹತೆ- ಅನುಭವ

KEA Recruitment 2023: Karnataka Examination Authority Invite For Post Of Programmer

ಪ್ರೋಗ್ರಾಮರ್ ಹುದ್ದೆಗ ಬಿಇ /ಬಿ.ಟೆಕ್, ಸಿಎಸ್ಇ/ ಐಟಿಯಲ್ಲಿ ಎಂಟೆಕ್, ಎಂಎಸ್‌ಸಿ, ಎಂಸಿಎ ಪೂರೈಸಿದ ಪದವೀಧರ ಅಭ್ಯರ್ಥಿಗಳು ಅರ್ಜಿಸಲ್ಲಿಬಹುದು. ಇನ್ನೂ ಪ್ರೋಗ್ರಾಮರ್ (ಫ್ರೆಶರ್) ಹುದ್ದೆಗೆ ಬಿಸಿಎ ಕೋರ್ಸ್ ಮುಗಿಸಿದವರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ವೆಬ್ಲಾಜಿಕ್ ಸರ್ವರ್‌ನಲ್ಲಿ ನಮೂನೆಗಳು ಮತ್ತು ವರದಿಗಳೊಂದಿಗೆ ಓರಾಕಲ್ (Oracle) 12 ಸಿ ನಲ್ಲಿ ಎರಡು ವರ್ಷಕ್ಕಿಂತ ಹೆಚ್ಚಿನ ಅನುಭವ ಪಡೆದಿರಬೇಕು ಎಂದು ತಿಳಿಸಲಾಗಿದೆ.

ವಯಸ್ಸಿನ ಮೀತಿ- ವೇತನ

ಸರ್ಕಾರಿ ಉದ್ಯೋಗ ಮಾಡಬಯಸುವ ಅಭ್ಯರ್ಥಿಗಳ ವಯಸ್ಸು ಎಷ್ಟಿರಬೇಕು ಎಂಬುದನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿಗದಿ ಮಾಡಿಲ್ಲ.

ಇನ್ನು ಆಯ್ಕೆಯಾಗುವ ಅಭ್ಯರ್ಥಿಗಳ ಪೈಕಿ ಪ್ರೋಗ್ರಾಮರ್ ಹುದ್ದೆಗೆ ಮಾಸಿಕ ರೂ.50,000 ರೂ. ಹಾಗೂ ಪ್ರೋಗ್ರಾಮರ್ (ಫ್ರೆಶರ್) ತಿಂಗಳಿಗೆ ರೂ. 25,000 ಸಂಬಳ ಇರಲಿದೆ.

KEA Recruitment 2023: Karnataka Examination Authority Invite For Post Of Programmer

ಹೀಗೆ ಅರ್ಜಿ ಸಲ್ಲಿಸಿ

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಇ-ಮೇಲ್ ಐಡಿ [email protected] ಗೆ ಜನವರಿ 14 ರೊಳಗೆ ಕಳುಹಿಸಬೇಕು ಎಂದು ಪ್ರಾಧಿಕಾರ ತಿಳಿಸಿದೆ.

ಪ್ರಮುಖ ದಿನಾಂಕಗಳು

ಇ-ಮೇಲ್ ಕಳುಹಿಸಲು ಕೊನೆಯ ದಿನ- ಜನವರಿ 14

ಪ್ರಾಯೋಗಿಕ ಪರೀಕ್ಷೆ ನಡೆಯುವ ದಿನಾಂಕ- ಜನವರಿ 17

ಅಭ್ಯರ್ಥಿಗಳ ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನ ಮೂಲಕ ನಡೆಯಲಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 17 ರಂದು ನಡೆಯಲಿರುವ 3 ಗಂಟೆ ಅವಧಿಯ ಪ್ರಾಯೋಗಿಕ ಪರೀಕ್ಷೆಯನ್ನು ಬರೆಯಬೇಕು. ಅದರಲ್ಲಿ ಆಯ್ಕೆಯಾದವರಿಗೆ ನೇರ ಸಂದರ್ಶನ ನಡೆಯಲಿದೆ.

English summary
KEA Recruitment 2023: Karnataka Examination Authority invites applications for post of Programmer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X